ರಾಧಿಕಾ ಮತ್ತೆ ತಾಯಿಯಾಗಿದ್ದಾರೆ ಮೂರನೇ ಮಗುವಿನ ಆಗಮನಕ್ಕೆ ಕಾಯುತ್ತಿರುವ ಕುಟುಂಬ

 

ಸದ್ಯ ಕಳೆದ ವರುಷ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳ ಮುದ್ದು ಮಗಳಾದ ಐರಾ ರವರಿಗೆ ಮೂರು ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿದ್ದು ಕೊರೊನಾ ಬಂದಾಗಿನಿಂದ ಯಾವ ಆಚರಣೆಗಳನ್ನೂ ಕೂಡ ಅದ್ಧೂರಿಯಾಗಿ ಮಾಡದ ದಂಪತಿ ಕಳೆದ ವರ್ಷ ತಮ್ಮ ಮಗಳ ಹುಟ್ಟುಹಬ್ಬವನ್ನೂ ಕೂಡ ಬಹಳ ಸರಳವಾಗಿ ಆಚರಿಸಿತ್ತು. ಹೌದು ಆದರೆ ಮಗಳಿಗಾಗಿ ಯಶ್ ದುಬಾರಿ ಉಡುಗೊರೆಯೊಂದನ್ನೇ ನೀಡಿದ್ದು ಐರಾ ಹುಟ್ಟು ಹಬ್ಬಕ್ಕೆ ಕೋಟಿ ಮೌಲ್ಯದ ಉಡುಗೊರೆ ನೀಡಿದ್ದು ನಿಜಕ್ಕೂ ಆಶ್ಚರ್ಯವಾಗಿದೆ.

ಕನ್ನಡ ಚಿತ್ರರಂಗದ ರಾಕಿಂಗ್ ಜೋಡಿ ಎಂದೇ ಹೆಸರಾಗಿರುವ ಯಶ್ ಹಾಗೂ ರಾಧಿಕಾ ಹತ್ತು ವರ್ಷಗಳ ಕಾಲ ಪ್ರೀತಿಸಿ ಕಳೆದ ಐದು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇನ್ನು ಈ ಜೋಡಿಗೆ ಆರತಿಗೊಬ್ಬಳು ಕೀರ್ತಿಗೊಬ್ಬ ಎನ್ನುವಂತೆ ಐರಾ ಹಾಗೂ ಯಥರ್ವ್ ಯಶ್ ಜನಿಸುತ್ತಾರೆ. ಹೌದು ಸಿನಿಮಾ ಹೊರತು ಪಡಿಸಿ ಆಗಾಗ ಮಕ್ಕಳ ವಿಚಾರಕ್ಕೆ ಸುದ್ದಿಯಾಗುವ ಈ ಜೋಡಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಯಾರೂ ಕೂಡ ಗೌರವ ಕೊಡಬೇಡಿ ಪ್ರೀತಿ ಕೊಡಿ ಎಂದಷ್ಟೇ ಮನವಿ ಮಾಡಿಕೊಂಡಿದ್ದು ನಿಜಕ್ಕೂ ತಂದೆ ತಾಯಿಯಾಗಿ ಒಳ್ಳೆಯ ನಡೆಯಾಗಿತ್ತು ಎನ್ನಬಹುದು. ಸದ್ಯ ಇದೀಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ರಾಕಿಂಗ್ ಕಪಲ್ ಗಳು.

ಇನ್ನು ಯಶ್ ಮುದ್ದು ಮಗಳು ಐರಾಳ ಮೊದಲ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದು ದೊಡ್ಡವಳಾದ ಮೇಲೆ ಇದನ್ನು ನೋಡಿದರೆ ತಂದೆಯ ಬಗ್ಗೆ ಖುಷಿ ಪಡಬೇಕು ಎನ್ನುವ ರೀತಿ ಆ ಆಚರಣೆ ಇತ್ತು. ಸ್ಯಾಂಡಲ್ವುಡ್ ನ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಾಮಾನ್ಯವಾಗಿ ಸಿನಿಮಾ ಸಂಬಂಧ ಪಟ್ಟ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದ ದರ್ಶನ್ ರವರೂ ಸಹ ಮುದ್ದು ಕಂದನ ಹುಟ್ಟುಹಬ್ಬಕ್ಕೆ ಆಗಮಿಸಿ ಹಾರೈಸಿದ್ದು ವಿಶೇಷವಾಗಿತ್ತು‌. ಇನ್ನು ಫನ್ ವರ್ಲ್ಡ್ ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದ್ದು ಬಳಿಕ ಕೊರೊನಾ ಕಾರಣದಿಂದಾಗಿ ಮಗನ ಮೊದಲ ಹುಟ್ಟುಹಬ್ಬವನ್ನು ಜನರ ನಡುವೆ ಆಚರಿಸಲು ಸಾಧ್ಯವಾಗಲಿಲ್ಲ.

ಆದರೆ ಮಗನ ಮೊದಲ ಹುಟ್ಟುಹಬ್ಬವನ್ನೂ ಕೂಡ ಅದ್ಧೂರಿಯಾಗಿ ಆಚರಿಸಬೇಕೆಂದು ಸಮುದ್ರದ ನಡುವೆ ಐಶಾರಾಮಿ ಹಡಗಿನಲ್ಲಿ ಆಚರಣೆ ಮಾಡಿದ್ದರು. ಹೌದು ಇನ್ನು ಕೆಲ ತಿಂಗಳ ಹಿಂದಷ್ಟೇ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ನೂತನ ಮನೆ ಗೃಹ ಪ್ರವೇಶ ಮಾಡಿದ್ದು ಕಳೆದ ಮೂರು ವರ್ಷದಿಂದಲೂ ನಿರ್ಮಾಣವಾಗುತ್ತಿದ್ದ ತಮ್ಮ ಕನಸಿನ ಮನೆಗೆ ಯಶ್ ರಾಧಿಕಾ ತಮ್ಮ ಪುಟ್ಟ ಮಕ್ಕಳೊಂದಿಗೆ ಆಗಮಿಸಿದರು. ಸಧ್ಯ ಹೊಸ ಮನೆಗೆ ಬಂದ ನಂತರ ಯಾವ ಆಚರಣೆಯೂ ಅದ್ಧೂರಿಯಾಗಿ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವ ಯಶ್ ರಾಧಿಕಾ ಎಲ್ಲಾ ಹಬ್ಬಗಳು ಹಾಗೂ ಹುಟ್ಟುಹಬ್ಬಗಳನ್ನು ಸರಳವಾಗಿಯೇ ಆಚರಣೆ ಮಾಡುತ್ತಿದ್ದಾರೆ.

ಅದೇ ರೀತಿ ಇದೀಗ ಐರಾಳ‌ ಮೂರನೇ ಹುಟ್ಟುಹಬ್ಬವನ್ನೂ ಕೂಡ ಸರಳವಾಗಿ ಆಚರಿಸಿದ್ದು ಆದರೆ ತಮ್ಮ ನೆಚ್ಚಿನ ಜಾಗ ಗೋವಾಗೆ ಮಕ್ಕಳ ಜೊತೆ ತೆರಳಿರುವ ಜೋಡಿ ಅಲ್ಲಿಯೇ ಮಗಳ ಹುಟ್ಟುಹಬ್ಬ ಆಚರಿಸಿ ಸಂತೋಷ ಪಟ್ಟಿದ್ದರು. ಸದ್ಯ ಮಗಳಿಗಾಗಿ ಹೊಸ ದುಬಾರಿ ಕಾರೊಂದನ್ನೇ ಪಡೆದುಕೊಂಡಿದ್ದಾರೆ. ಇದೆಲ್ಲದರ ನಡುವೆ ಯಶ್ ದಂಪತಿ ಜೀವನಕ್ಕೆ ಮೂರನೇ ಮಗುವಿನ ಆಗಮನವಾಗಿದೆ ಎನ್ನಲಾಗಿದೆ. ಹೌದು ಸದ್ಯ ಇದೀಗ ಯಶ್ ಅವರ ಸಹೋದರಿ ನಂದಿನಿ ಇದೀಗ ಮಗುವಿಗೆ ಜನ್ಮ ನೀಡಿದ್ದು ಈ ಮೂಲಕ ಯಶ್ ರವರ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಿದೆ. ಅಲ್ಲದೇ ಮತ್ತೊಮ್ಮೆ ಮಾವ ಆಗಿರುವ ಯಶ್ ಬಹಳ ಸಂತಸದಲ್ಲಿದ್ದಾರೆ. ಸದ್ಯ ಈ ಕುರಿತು ನಂದಿನಿಯವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದು ಮುದ್ದಾದ ಮಗುವಿನ ಕಾಲುಗಳ ವಿಡಿಯೋವನ್ನ ಶೇರ್ ಮಾಡಿದ್ದಾರೆ.