ನಮ್ಮ ಕನ್ನಡ ಕಿರುತೆರೆ ಲೋಕ ಕಂಡ ಖ್ಯಾತ ಮತ್ತು ನಂಬರ್ ಒನ್ ಸ್ಥಾನ ಪಡೆದು ಫೇಮಸ್ ಆಗಿರುವ ನಿರೂಪಕಿ ಅಂದರೆ ಅದು ಅನುಶ್ರೀ ಅವರು. ಹೌದು ನಟಿ ನಿರೂಪಕಿ ಅನುಶ್ರೀ ಕರ್ನಾಟಕದಲ್ಲಿ ಎಷ್ಟೆಲ್ಲಾ ಜನಪ್ರಿಯತೆ ಪಡೆದಿದ್ದು ಈಗಾಗಲೇ ಎಲ್ಲರಿಗೂ ಕೂಡ ತಿಳಿದಿದೆ. ಹೌದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಹಲವಾರು ಕಾರ್ಯಕ್ರಮಗಳನ್ನ ಅದ್ಭುತವಾಗಿ ನಿರೂಪಣೆ ಮಾಡಿರುವ ಮಂಗಳೂರಿನ ಬೇಡಗಿ ಅನುಶ್ರೀ ಕನ್ನಡದ ಬಹು ಬೇಡಿಕೆಯ ಮತ್ತು ದುಬಾರಿಯಾ ಸಂಭಾವನೆ ಪಡೆಯುವ ನಿರೂಪಕಿ ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು. ಹೌದು ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಹಲವಾರು ರಿಯಾಲಿಟಿ ಶೋ ಕಾರ್ಯಕ್ರಮಗಳ ಹಲವು ಸೀಸನ್ ಗಳನ್ನು ಅನುಶ್ರೀ ಯವರು ನಿರೂಪಣೆ ಮಾಡಿಕೊಂಡು ಬಂದಿದ್ದು ಸಧ್ಯ ಜೀ ಕನ್ನಡ ವಾಹಿನಿಯಲ್ಲಿ ನಿರತರಾಗಿದ್ದಾರೆ. ಹೌದು ಅನುಶ್ರೀ ಅವರಿಗೆ ಯಶಸ್ಸು ಎಂಬುದು ಒಂದೇ ಬಾರಿಗೆ ಸಿಕ್ಕಿದ್ದಲ್ಲ.
ತಾವು ಹುಟ್ಟಿ ಬೆಳೆದ ಊರಾದ ಮಂಗಳೂರಿನಿಂದ ಬಂದು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅನುಶ್ರೀ ಜೀವನದ ಜರ್ನಿ ತುಂಬಾನೇ ಕಷ್ಟಕರವಾದದ್ದು ಎನ್ನಬಹುದು. ಕೇವಲ ನಿರೂಪಣೆ ಮಾಡಿಕೊಂಡೆ ದಶಕಗಳನ್ನ ಕಳೆದಿರುವ ಅವರು ಮೂರು ನಾಲ್ಕು ಸಿನಿಮಾಗಳಲ್ಲಿ ಕೂಡ ನಟನೆ ಮಾಡಿದ್ದು ಇವರ ಜನಪ್ರಿಯತೆ ಯಾವ ಸಿನಿಮಾ ಕಲಾವಿದರಿಗೂ ಕೂಡ ಕಡಿಮೆ ಇಲ್ಲ ಅಂತ ಹೇಳಬಹುದು. ಹೌದು ಅಲ್ಲದೆ ಕನ್ನಡದಲ್ಲಿ ನಿರೂಪಕಿ ಅಂದ ತಕ್ಷಣ ಪ್ರತಿಯೊಬ್ಬರಿಗೂ ಕೂಡ ಅನುಶ್ರೀ ಅವರು ನೆನಪಾಗುತ್ತಾರೆ.
