ಗಂಡನಿಗೆ ಕೈಕೊಟ್ಟು ಗುಟ್ಟಾಗಿ ಇನ್ನೊಂದು ಮದುವೆಯಾದ ಪವಿತ್ರ ಲೋಕೇಶ್

 

ನಟಿ ಪವಿತ್ರಾ ಲೋಕೇಶ್ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟಿಮಣಿಯರಲ್ಲಿ ಒಬ್ಬರು. ಹೌದು, 1979 ರಲ್ಲಿ ಮೈಸೂರಿನಲ್ಲಿ ಜನಿಸಿದ ಪವಿತ್ರರವರು ರಂಗಭೂಮಿ ಮತ್ತು ಸಿನಿಮಾ ಕಲಾವಿದರಾದ ಮೈಸೂರು ಲೋಕೇಶ್ ರವರ ಪುತ್ರಿ. ಈಕೆಯ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪವಿತ್ರ ಅವರು ಒಂಬತ್ತನೇ ತರಗತಿಯಲ್ಲಿರುವಾಗಲೇ ತಂದೆ ಲೋಕೇಶ್ ಅವರನ್ನು ಕಳೆದುಕೊಳ್ಳುತ್ತಾರೆ. ಬದುಕಿನ ಬಂಡಿ ಸಾಗಲು ಅಲ್ಲಿಂದಲೇ ನಟನೆ ಎನ್ನುವ ಲೋಕಕ್ಕೆ ಎಂಟ್ರಿ ಕೊಟ್ಟರು. ಹದಿನಾರನೇ ವಯಸ್ಸಿನಲ್ಲಿಯೇ ನಟನೆಗೆ ಎಂಟ್ರಿ ಕೊಟ್ಟ ಇವರು ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ತಮ್ಮ ಅಮೋಘ ಅಭಿನಯ ಮೂಲಕ ಮೋಡಿ ಮಾಡಿದರು. 1995 ರಲ್ಲಿ ತೆರೆಕಂಡ ಮಿಸ್ಟರ್ ಅಭಿಷೇಕ್ ಚಿತ್ರದ ಮೂಲಕ ಪವಿತ್ರ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು.

ಇದಾದ ಬಳಿಕ ಬಂಗಾರದ ಕಳಸ, ಜನುಮದ ಜೋಡಿ, ಕುರುಬನ ರಾಣಿ, ಯಜಮಾನ, ಸ್ವಾತಿ ಮುತ್ತು, ಮಲ್ಲ, ಲವ್, ರೋಜ್, ಬಹೂದ್ದು ರ್ಆಕಾನ್, ಉಲ್ಟ-ಪಲ್ಟಾ, ತವರಿನ ತೇರು,ಗೌರಮ್ಮ, ರಾಕ್ಷಸ ಸೇರಿದಂತೆ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಈವರೆಗೂ 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಪವಿತ್ರಾ ಲೋಕೇಶ್. ಕೆಲವು ಸಿನಿಮಾಗಳಲ್ಲಿ ಇವರ ಅದ್ಭುತ ನಟನೆಗಾಗಿ ಪ್ರಶಸ್ತಿಗಳು ಸಿಕ್ಕಿದೆ. ಇನ್ನು 2007 ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಎಂಬುವರನ್ನು ವಿವಾಹವಾಗಿದ್ದಾರೆ. ಇದೀಗ ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಆದರೆ ಈ ದಂಪತಿಗಳು ಬೇರೆಯಾಗಿದ್ದಾರೆ. ಇದೀಗ ನಟಿ ಪವಿತ್ರಾ ಲೋಕೇಶ್ ಅವರು ನಟ ನರೇಶ್ ಬಾಬುರವರನ್ನು ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಹೌದು ಈ ಕುರಿತಾದ ಮಾಹಿತಿಗಾಗಿ ಈ ಸ್ಟೋರಿ ಓದಲೇಬೇಕು.