ಹೆಂಡತಿ-ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ವಿಜಯರಾಘವೇಂದ್ರ ಸಂಭ್ರಮ ಹೇಗಿತ್ತು ನೋಡಿ

 

ಚಂದನವನದಲ್ಲಿ ಚಿನ್ನಾರಿಮುತ್ತ ಎಂದೇ ಖ್ಯಾತಿ ಗಳಿಸಿರುವ ವಿಜಯ ರಾಘವೇಂದ್ರ ಸದ್ಯಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಹೌದು ಕಿರುತೆರೆ ರಿಯಾಲಿಟಿ ಶೋವೊಂದರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ರಾಘವೇಂದ್ರ ಅವರು ಕನ್ನಡದಲ್ಲಿ ಅದ್ಭುತ ಸಿನಿಮಾಗಳನ್ನು ನೀಡಿದ ನಟರಲ್ಲಿ ಒಬ್ಬರು. ಹೌದು, ಚಿನ್ನಾರಿ ಮುತ್ತ ಸಿನಿಮಾವು ಇವರ ಬದುಕಿಗೆ ಬಹುದೊಡ್ಡ ಮಟ್ಟಿಗೆ ತಿರುವು ಕೊಟ್ಟ ಸಿನಿಮಾ. ವಿಜಯ್ ರಾಘವೇಂದ್ರರವರು ಪತ್ನಿ ಹೆಸರು ಸ್ಪಂದನಾರವರು. ಇದೀಗ ಈ ದಂಪತಿಗಳಿಗೆ ಮುದ್ದಾದ ಮಗನಿದ್ದಾನೆ. ನಟ ವಿಜಯ ರಾಘವೇಂದ್ರ ಅವರು ತಮ್ಮ ಹುಟ್ಟುಹಬ್ಬವನ್ನು ತಮ್ಮ ಮಗ ಮತ್ತು ಸ್ನೇಹಿತರ ಜೊತೆಗೆ ತುಂಬಾ ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಹೌದು ನಟ ವಿಜಯ್ ರಾಘವೇಂದ್ರ ಬರ್ತ್ಡೇ ಸೆಲೆಬ್ರೇಶನ್ ಗೆ ಯಾರೆಲ್ಲಾ ಬಂದಿದ್ದರು ಎಂಬ ಕುತೂಹಲ ನಿಮಗೂ ಕೂಡ ಇರಬಹುದು.

ನಟ ವಿಜಯ್ ರಾಘವೇಂದ್ರ ಅವರ ಸಿನಿ ಬದುಕಿನ ಕುರಿತು ಹೇಳುವುದಾದರೆ, ರಾಜ್ ಕುಮಾರ್ ಹಾಗೂ ಸರಿತಾರವರ ನಟನೆಯ ಚಲಿಸುವ ಮೋಡ ಎಂಬ ಸಿನಿಮಾ ಮೂಲಕ ಬಾಲನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಇನ್ನು ಝ್ ಚಿನ್ನಾರಿ ಮುತ್ತ ಎಂದೇ ಫೇಮಸ್ ಆಗಿರುವ ನಟ ವಿಜಯ ರಾಘವೇಂದ್ರರವರು ಚಂದನವನ ಹಾಗೂ ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿರುವ ನಟರಲ್ಲಿ ಒಬ್ಬರು. ಬಾಲನಟನಾಗಿ ಚಿನ್ನಾರಿ ಮುತ್ತ ಸಿನಿಮಾದ ಅಭಿನಯಕ್ಕಾಗಿ ವಿಜಯರಾಘವೇಂದ್ರರವರಿಗೆ ರಾಜ್ಯ ಪ್ರಶಸ್ತಿಯೂ ಸಿಕ್ಕಿದೆ. ಕೊಟ್ರೇಶಿ ಕನಸು ಎಂಬ ಚಿತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.