ಸದ್ಯ ನಮ್ಮ ಕಿರುತೆರೆ ಲೋಕದ ಟಾಪ್ ಮೋಸ್ಟ್ ಲಿಸ್ಟ್ ನಲ್ಲಿರುವ ಎಂಟರ್ ಟೈನ್ಮೆಂಟ್ ಚಾನೆಲ್ ಎಂದರೆ ಅದು ಜೀ ಕನ್ನಡ ವಾಹಿನಿ. ಹೌದು ಜೀ ಕನ್ನಡದಲ್ಲಿ ಮೂಡಿ ಬರುವ ಪ್ರತಿಯೊಂದು ಧಾರಾವಾಹಿ ಹಾಗೂ ಕಾರ್ಯಕ್ರಮಗಳು ಕೂಡ ಲೀಡ್ ನಲ್ಲಿದ್ದು ಪ್ರೇಕ್ಷಕರ ಮನಸ್ಸನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಜೀಕನ್ನಡ ವಾಹಿನಿಯವರು ವೀಕ್ಷಕರ ಮನಸ್ಥಿತಿಗಳಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು ಜೀ ಕನ್ನಡದ ರಿಯಾಲಿಟಿ ಶೋಗಳೂ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬರುತ್ತಿವೆ. ಸರಿಗಮಪ ಚಾಂಪಿಯನ್ ಸೀಸನ್ ಮುಗಿದ ಬಳಿಕ ಸದ್ಯ ಜೀ ಕನ್ನಡ ವಾಹಿಯಲ್ಲಿ ಡ್ರಾಮಾ ಜೂನಿಯರ್ಸ್ ಸೀಸನ್ 4 ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಡಿ ಬರುತ್ತಿದೆ.
ಡ್ರಾಮಾ ಜೂನಿಯರ್ಸ್ ಸೀಸನ್ 4ರಲ್ಲಿ ಪುಟಾಣಿಗಳು ಅದ್ಭುತವಾಗಿ ಅಭಿನಯಿಸುತ್ತಿದ್ದಯ ಸ್ಕಿಟ್ ಗಳು ಕೂಡ ತುಂಬಾ ಚೆನ್ನಾಗಿದ್ದು ಮಕ್ಕಳ ಟ್ಯಾಲೆಂಟ್ ಕಂಡು ಜಡ್ಜಸ್ ಗಳು ಫಿದಾ ಆಗಿದ್ದಾರೆ. ಹೌದು ಶನಿವಾರ ಹಾಗೂ ಭಾನುವಾರ ಬಂದರೆ ಸಾಕು ಡ್ರಾಮಾ ಜೂನಿಯರ್ಸ್ ನೋಡಲು ಪ್ರೇಕ್ಷಕರು ಕಾಯುತ್ತಿದ್ದು ಡ್ರಾಮಾ ಜೂನಿಯರ್ಸ್ ಪ್ರತೀ ಸೀಸನ್ ನಲ್ಲೂ ಕೂಡ ಸಕ್ಸಸ್ ಕಾಣುತ್ತಿದ್ದು ಜನಪ್ರಿಯತೆ ಪಡೆದಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಟಾಣಿಗಳು ಕರ್ನಾಟಕದ ಮೂಲೆ ಮೂಲೆಗಳಿಂದಲೂ ಬರುತ್ತಾರೆ.
