ನಟಿ ಮೇಘನಾ ರಾಜ್ ರವರು ಸರ್ಜಾ ಕುಟುಂಬದ ಮುದ್ದಿನ ಸೊಸೆ ಮತ್ತು ಸುಂದರ್ ರಾಜ್ ದಂಪತಿಗಳ ಮುದ್ದಿನ ಮಗಳಾಗಿದ್ದು ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿ ಸುಖ ಸಂಸಾರವನ್ನೂ ನಡೆಸುತ್ತಿದ್ದರು. ಆದರೆ ಈಗಿರುವಾಗಲೇ ಮೇಘನಾ ರಾಜ್ ಬಾಳಲ್ಲಿ ಬಿರುಗಾಳಿಯೊಂದು ಬೀಸಿ ಹೋಗಿದ್ದು ಪತಿ ಚಿರಂಜೀವು ಸರ್ಜಾ ಅವರು ಜೂನ್ 7 ರಂದು ಕಳೆದ ವರ್ಷ ಹೃದಯ ಘಾತದಿಂದ ಇಹ ಲೋಕ ತ್ಯಜಿಸಿದ್ದರು. ಹೌದು ಈ ಘಟನೆಯಾದಾಗ ಮೇಘನಾ ರಾಜ್ ಅವರ ಗರ್ಭದಲ್ಲಿ ಪ್ರೀತಿಯ ಸಂಕೇತವಾಗಿ ಮಗು ಬೆಳೆಯುತ್ತಿದ್ದು ಇನ್ನು ಚಿರು ಇನ್ನೆಂದಿಗೂ ಬರಲಾರ ಎನ್ನುವ ಸುದ್ದಿ ಮೇಘನಾ ರಾಜ್ ಗೆ ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿರಲಿಲ್ಲ.
ಹೀಗಿರುವಾಗಲೇ ಮೇಘನಾ ರಾಜ್ ಬಾಳಲ್ಲಿ ನಗುವಾಗಿ ಬಂದವನು ರಾಯನ್ ರಾಜ್ ಸರ್ಜಾ. ಹೌದು ತನ್ನೆಲ್ಲಾ ನೋವನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಂಡು ತಾಯಿಯಾಗಿ ಮೇಘನಾ ರಾಜ್ ರವರು ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾದರು.ಮದುವೆಯಾದ ಬಳಿಕ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡ ಮೇಘನಾ ಆದರೆ ಬದುಕಿನಲ್ಲಿ ಕಹಿ ಘಟನೆಯೊಂದು ನಡೆದ ಮೇಲಂತೂ ಪೂರ್ಣವಾಗಿ ಸಿನಿಮಾರಂಗದಿಂದ ದೂರ ಉಳಿದು ಬಿಟ್ಟರು. ಸದ್ಯ ಈಗಾಗಲೇ ಎಲ್ಲರಿಗೂ ಕೂಧಫ ತಿಳಿದಿರುವಂತೆ ಮೇಘನಾ ರಾಜ್ ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯಿಯವರ ಸುಪುತ್ರಿ.
