ಮಗಳಿಗಿಂತ ಕಡಿಮೆ ವಯಸ್ಸಿನ ಹುಡುಗಿಯನ್ನು ಮದುವೆಯಾದ ಪ್ರಕಾಶ್ ರೈ .... ಇಬ್ಬರ ನಡುವಿನ ವಯಸ್ಸು ಎಷ್ಟು ಅಂತರ ಗೊತ್ತಾ

 

ಕೆಲವು ನಟ ನಟಿಯರ ನಟನಾ ಬದುಕು ನೋಡಿದರೆ ಅಚ್ಚರಿ ಎನಿಸುತ್ತದೆ. ಹೌದು ಸಾಕಷ್ಟು ಏಳು ಬೀಳುಗಳನ್ನು ಕಂಡು, ಸಿನಿಮಾರಂಗದಲ್ಲಿ ನೆಲೆ ನಿಂತವರು ಸಾಕಷ್ಟು ಜನರಿದ್ದಾರೆ. ಹೌದು ಹಾಗಂದ ಮಾತ್ರಕ್ಕೆ ಕಿರುತೆರೆ ಹಾಗೂ ಬೆಳ್ಳಿತೆರೆ ಎಲ್ಲರನ್ನೂ ಕರೆದು ಮಣೆ ಹಾಕಿಲ್ಲ. ಈ ರಂಗದಲ್ಲಿ ಸಿಕ್ಕ ಸಣ್ಣ ಪುಟ್ಟ ಅವಕಾಶವನ್ನು ಬಳಸಿಕೊಂಡು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ ಅನೇಕರು. ಖ್ಯಾತ ನಟ ಪ್ರಕಾಶ್ ರೈ ಅವರ ಮುಖ ಪರಿಚಯ ಎಲ್ಲರಿಗೂ ಇರುತ್ತದೆ. ಕನ್ನಡದ ದೂರದರ್ಶನ ಚಾನೆಲ್ ನಲ್ಲಿ ಮೂಡಿಬರುತ್ತಿದ್ದ ಬಿಸಿಲು ಕುದುರೆ ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಬದುಕನ್ನು ಶುರು ಮಾಡಿದರು. ಹೀಗೆ ಕನ್ನಡ ಸೇರಿದಂತೆ ತುಳು ಧಾರಾವಾಹಿಗಳಲ್ಲೂ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡರು. ಹೀಗಿರುವಾಗ ತಮಿಳು ಚಿತ್ರರಂಗದ ನಿರ್ದೇಶಕ ಕೆ. ಬಾಲಚಂದ್ರ ಇವರನ್ನು ಗುರುತಿಸಿ ತಮಿಳು ಚಿತ್ರರಂಗಕ್ಕೆ ಪರಿಚಯಿಸಿದರು.

ಹೌದು, ನಿರ್ದೇಶಕ ಕೆ. ಬಾಲಚಂದ್ರ ಅವರು ಪ್ರಕಾಶ್ ರಾಜ್ ಇದ್ದ ಹೆಸರನ್ನು ಈ ವೇಳೆ, ಪ್ರಕಾಶ್ ರೈ ಎಂದು ಬದಲಾಯಿಸಿಬಿಟ್ಟರು. ಅಂದಿನಿಂದ ಸಿನಿಮಾರಂಗದಲ್ಲಿ ಪ್ರಕಾಶ್ ರಾಜ್ ಪ್ರಕಾಶ್ ರೈ ಎಂದು ಗುರುತಿಸಿಕೊಂಡರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಚಿತ್ರಗಳಲ್ಲಿ ನಟಿಸುವ ಮೂಲಕ ಎಲ್ಲಾ ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ಸಿನಿಮಾರಂಗದಲ್ಲಿ ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಭಿನಯದ ರಾಮಾಚಾರಿ, ರಣಧೀರ, ಲಾಕಪ್ ಡೆತ್, ಸೇರಿದಂತೆ ಅನೇಕ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಹೌದು, ಪ್ರಕಾಶ್ ರೈ ಮೂಲತಃ ಕನ್ನಡ ನೆಲದವರು. ಆದರೆ ತೆಲುಗು ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು. ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ಆಗಿ ಫೇಮಸ್ ಆದ ಪ್ರಕಾಶ್ ರೈ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಜೊತೆಗೂ ನಂಟನ್ನು ಹೊಂದಿದ್ದರು. ಇನ್ನು ತೆಲುಗು ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.