ಚಂದನವನದ ಗೋಲ್ಡನ್ ಕ್ವೀನ್ ನಟಿ ಅಮೂಲ್ಯ. ಪರ್ವ ಸೈನಿಕ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಅಮೂಲ್ಯ ಬಾಲನಟಿಯಾಗಿಯೇ ಹಲವಾರು ಸಿನಿಮಾಗಳಲ್ಲಿ ಕನ್ನಡದ ಮೇರು ಕಲಾವಿದರೊಡನೆ ನಟಿಸಿದ್ದು ಆನಂತರ 2007 ರಲ್ಲಿ 14ನೇ ವಯಸ್ಸಿನಲ್ಲಿ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಈ ಮೂಲಕ ಅತಿ ಚಿಕ್ಕ ವಯಸ್ಸಿಗೆ ಹೀರೋಯಿನ್ ಆದ ನಟಿಯರ ಸಾಲಿಗೆ ಸೇರಿಕೊಂಡರು ಅಮೂಲ್ಯ. ಕಿರಿಯ ವಯಸ್ಸಿಗೆ ಹೀರೋಯಿನ್ ಆದ ಈ ನಟಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಮುಗ್ದತೆ ಮತ್ತು ಬಬ್ಲಿ ನೇಚರ್ ಇರುವ ಪಾತ್ರಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಅಭಿನಯದಲ್ಲಿ ಸಾಕಷ್ಟು ಸಕ್ಸಸ್ ಕಂಡ ನಟಿ ಅಮೂಲ್ಯ ರಾಜಕರಾಣದ ಹಿನ್ನಲೆ ಇರುವ ಜಗದೀಶ್ ಅವರನ್ನು ಮದುವೆಯಾಗಿ ಸುಖಜೀವನ ನಡೆಸುತ್ತಿದ್ದಾರೆ.ಇನ್ನು ಈ ವರ್ಷ ಶಿವರಾತ್ರಿ ಹಬ್ಬದಂದು ಅಮೂಲ್ಯ ಅವರು ಮುದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ ಈಗ ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿದ್ದಾರೆ. ಮಕ್ಕಳಾದ ಮೇಲೆ ಅಮೂಲ್ಯ ಅವರು ಹೇಗಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು.
Home
Unlabelled
ಮಗುವಾದ ಮೇಲೆ ಮೊದಲ ಬಾರಿ ಫೋಟೋಶೂಟ್ ಮಾಡಿಸಿಕೊಂಡ ಅಮೂಲ್ಯ
