ಸಮಂತಾ, ತಮನ್ನಾ ರೀತಿ ನೀವು ಕೂಡಾ ಎಲ್ಲವನ್ನೂ ತೋರಿಸುತ್ತಿರ ಎಂದ ನಿರ್ಮಾಪಕರಿಗೆ ಸಾಯಿ ಪಲ್ಲವಿ ಕೊಟ್ಟ ಉತ್ತರ ಬೆಚ್ಚಿಬಿದ್ದ ನಿರ್ಮಾಪಕರು!!

 

ಸಿನಿಮಾ ರಂಗ ಅಂದರೆ ಅದು ರಂಗೀನ್ ಲೋಕ. ಅಲ್ಲಿ ಫ್ಯಾಷನ್ ಗೆ ತುಂಬಾನೆ ಪ್ರಾಮುಖ್ಯತೆ ಕೊಡಲಾಗುತ್ತದೆ. ನಟಿ ಮಣಿಯರು ಹೆಚ್ಚಾಗಿ ತುಂಡುಡುಗೆಯಲ್ಲಿಯೇ ಕಾಣಿಸುತ್ತಾರೆ. ಮೈ ತೋರಿಸಿದರೆ ಸಿನಿಮಾ ರಂಗದಲ್ಲಿ ಉಳಿಯಬಹುದು ಅನ್ನುವುದು ಎಲ್ಲರ ನಂಬಿಕೆ. ಹಾಟ್ ಹಾಟ್ ಫೋಟೋ ಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದರೆ ಅಭಿಮಾನಿಗಳು ಅದೇ ರೀತಿ ಅನುಯಾಯಿಗಳು ಹೆಚ್ಚಾಗುತ್ತಾರೆ ಅನ್ನುವ ಭಾವನೆ ಇದೆ. ಅದೇ ರೀತಿ ಸೆಕ್ಸಿಯಾಗಿ ಕಾಣಿಸಿದರೆ ಹಿರೋಯಿನ್ ಆಗಿ ಅವಕಾಶ ಸಿಗುತ್ತದೆ ಅನ್ನುವ ಯೋಚನೆಯನ್ನು ಸುಳ್ಳು ಮಾಡಿದ ನಟಿ ಅಂದರೆ ಅದು ಸಾಯಿ ಪಲ್ಲವಿ.

ಹೌದು, ದಕ್ಷಿಣಭಾರತದ ನಟಿಯರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ ಸಾಯಿಪಲ್ಲವಿ. ಇವರು ಮಲಯಾಳಂ ‘ಪ್ರೇಮಂ’ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಆರಂಭಿಸಿದರು.ಅದರಲ್ಲಿ ಸಾಯಿಪಲ್ಲವಿಯ ಮಲರ್ ಟೀಚರ್ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇವರ ಮೊದಲ ಸಿನಿಮಾ ಮಲಯಾಳಂ ಆಗಿದ್ದ ಕಾರಣ ಇವರನ್ನು ಮಲಯಾಳಿ ಎಂದೇ ಭಾವಿಸಿದ್ದರು.

ಆದರೆ ಇವರು ತಮಿಳುನಾಡಿನವರು. ಹೀಗಾಗಿ ಮಲಯಾಳಂ ಅಷ್ಟೇ ಅಲ್ಲದೆ ತಮಿಳು, ತೆಲುಗು ಸಿನಿಮಾಗಳಲ್ಲಿ ‌ಕೂಡ ಇವರು ನಟಿಸಿದ್ದಾರೆ. ಪ್ರೇಮಂ ಸಿನಿಮಾ ನಂತರ ಅವರು ಕಾಳಿ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರೊಂದಿಗೆ ನಟಿಸಿದರು. ಅದೇ ರೀತಿ ವರುಣ್ ತೇಜ್ ಅವರೊಂದಿಗೆ 2017 ರಲ್ಲಿ ರೊಮ್ಯಾಂಟಿಕ್ ಚಿತ್ರ ಫಿದಾ ಚಿತ್ರದಲ್ಲಿ ಭಾನುಮತಿ ಪಾತ್ರದಲ್ಲಿ ನಟಿಸಿದ್ದರು. ಈ ಮೂಲಕ ತೆಲುಗು ಚಿತ್ರರಂಗಕ್ಕೆ ಕೂಡಾ ಪಾದಾರ್ಪಣೆ ಮಾಡಿದರು.

ಇನ್ನು ಇವರ ಪ್ರೇಮಂ ಮತ್ತು ಫಿದಾ ಚಿತ್ರಗಳ ಅಭಿನಯಕ್ಕಾಗಿ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಯಿಪಲ್ಲವಿ ಅವರು ತಮ್ಮ ಸರಳತೆ, ಹಾಗೂ ನೋ ಮೇಕಪ್‌ ಲುಕ್‌ನಿಂದಲೇ ಹೆಚ್ಚು ಹೆಸರುವಾಸಿ. ಮುಖದಲ್ಲಿ ಅರ್ಧ ಇಂಚು ಮೇಕಪ್ ಇರುವ ನಟಿಯರ ಮುಂದೆ ಸಾಯಿ ಪಲ್ಲವಿ ತುಂಬಾನೇ ಸ್ಪೆಷಲ್ ಆಗಿ ಕಾಣಿಸುತ್ತಾರೆ.

ಅದು ಯಾವುದೇ ಕಾರ್ಯಕ್ರಮ ಇರಲಿ ಸ್ವಲ್ಪವೂ ಮೇಕಪ್ ಮಾಡದೆ, ಸಿಂಪಲ್ ಆಗಿರುವ ಸೀರೆ ಅಥವಾ ಡ್ರೆಸ್ ನಲ್ಲಿ ಕಾಣಿಸುತ್ತಾರೆ. ಅವರನ್ನು ಎಲ್ಲಿಯೂ ಮೈ ತೋರಿಸುವಂತಹ ಡ್ರೆಸ್ ಗಳಲ್ಲಿ ಕಾಣಲು ಸಾಧ್ಯವೇ ಇಲ್ಲ. ಸಾಯಿ ಪಲ್ಲವಿ ಅವರ ಮೂಲ ಹೆಸರು ಸೆಂತಮರಾಯಿ. ಇವರು ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಸದಾ ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತಹ ಸಿನಿಮಾ ಆಯ್ಕೆ ಮಾಡುವ ಸಾಯಿ ಪಲ್ಲವಿ ಒಬ್ಬ ಅದ್ಭುತ ಡ್ಯಾನ್ಸರ್ ಕೂಡ ಹೌದು.