ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಎಂದರೆ ಮೊದಲು ನೆನಪಾಗುವುದು ಖಡಕ್ ಡೈಲಾಗ್ ಹಾಗೂ ಖಡಕ್ ಲುಕ್ ಎನ್ನಬಹುದು. ಹೌದು ಕಳೆದ ಸಹೋದರ ಚಿರಂಜೀವಿ ಸರ್ಜಾ ಅಗಲಿದ ಧ್ರುವ ಸರ್ಜಾ ಒಂದು ಸಲ ಕುಸಿದಿದ್ದು ರಾಮ ಲಕ್ಷ್ಮಣ ರಂತಿದ್ದ ಇವರನ್ನು ಕಂಡು ದೇವರಿಗೆ ಕಸಹ ಮತ್ಸರ ಬಂದಿತ್ತು ಕಾಣಿಸುತ್ತದೆ. ಹೌದು ಜೀವಕ್ಕೆ ಜೀವ ಎನ್ನುವಂತಿದ್ದ ಜೀವವೊಂದು ಧ್ರುವ ಸರ್ಜಾ ಅವರನ್ನು ಆಗಲಿ ಹೋಗಿದ್ದು ಇನ್ನು ಮೇಘನಾ ರಾಜ್ ಕೂಡ ಆ ವೇಳೆ ತುಂಬು ಗರ್ಭಿಣಿಯಾಗಿದ್ದರು. ಹೌದು ಅತ್ತಿಗೆಯನ್ನು ತಾಯಿಯಂತೆ ಎಂದು ಪೂಜಿಸುತ್ತಿದ್ದ ಧ್ರುವ ಸರ್ಜಾ ಪತಿಯ ಅಗಲಿಕೆಯಿಂದ ಮೇಘನಾ ಕುಸಿದು ಬಿದ್ದಾಗ ಮೇಘನಾ ರವರಿಗೆ ಧೈರ್ಯ ತುಂಬಿದವರು ಧ್ರುವ ಸರ್ಜಾ. ಇನ್ನು ಸೀಮಂತ ಕಾರ್ಯಕ್ರಮವನ್ನು ಅಣ್ಣನ ಸ್ಥಾನದಲ್ಲಿ ಧ್ರುವ ಸರ್ಜಾ ರವರು ಮುಂದೆ ನಿಂತು ನಡೆಸಿಕೊಟ್ಟಿರುವುದು ತಮಗೆಲ್ಲರಿಗೂ ಕೂಡ ಗೊತ್ತೇ ಇದೆ.
ಇನ್ನು 2019 ನವೆಂಬರ್ ನಲ್ಲಿ ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತಮ್ಮನ ಮದುವೆಯಲ್ಲಿ ಅಣ್ಣ ಚಿರು ಸರ್ಜಾ ಹಾಗೂ ಅತ್ತಿಗೆ ಮೇಘನಾ ರಾಜ್ ಮುಂದೆ ನಿಂತು ಮದುವೆ ಶಾಸ್ತ್ರ ಮತ್ತು ಇನ್ನಿತ್ತರ ಕೆಲಸಗಳನ್ನು ಮಾಡಿದ್ದರು. ಹೌದು ಸರ್ಜಾ ಕುಟುಂಬದ ಅಣ್ಣ ತಮ್ಮನ ಭಾಂದವ್ಯಕ್ಕೆ ಧ್ರುವ ಮತ್ತು ಚಿರು ಉದಾಹರಣೆಯಾಗಿದ್ದು ಅಣ್ಣನ ಅಗಲಿಕೆಯ ನೋವನ್ನು ಮರೆಯಲು ಧ್ರುವ ಸರ್ಜಾರಿಗೆ ಸಾಧ್ಯವಾಗುತ್ತಿಲ್ಲ. ಆದರೆ ವಾಸ್ತವವನ್ನು ಒಪ್ಪಿಕೊಂಡು ಅಣ್ಣನನ್ನು ರಾಯನ್ ನಲ್ಲಿ ಕಾಣುತ್ತಿದ್ದಾರೆ.
ಇನ್ನು ಕಳೆದ ವರ್ಷ ಚಿರಂಜೀವಿ ಸರ್ಜಾ ಮೊದಲ ಪುಣ್ಯಸ್ಮರಣೆ ಯಿದ್ದು ಆ ದಿನ ಧ್ರುವ ಸರ್ಜಾ ಭಾವನಾತ್ಮಕ ಪತ್ರ ಕೂಡ ಬರೆದಿದ್ದರು. ಹೌದು ಈ ಪತ್ರದಲ್ಲಿ ನೀನು ದೇವರಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರುಷ. ಈ 365 ದಿನ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ದಿನಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ ಸ್ನೇಹ ಉದಾರಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿಮ್ಮ ಆತ್ಮ ಸದಾ ಶಾಂತಿಯಿಂದ ಇರಬೇಕು. ಆ ಪ್ರಾರ್ಥನೆಯಲ್ಲೇ ಎಂದೆಂದು ನಿನ್ನ ನೆನಪಿನಲ್ಲೇ ನಿನ್ನ ಪ್ರೀತಿಯ ನಿನ್ನ ಕುಟುಂಬ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.
ಸದ್ಯ ಇದೀಗ ಚಿರು ಇಲ್ಲವಾಗಿ ಎರಡು ವರ್ಷಗಳೇ ಕಳೆದಿದ್ದು ಕೆಲವೇ ತಿಂಗಳಲ್ಲಿ ಸಮಾಧಿಯ ನಿರ್ಮಾಣ ಕಾರ್ಯ ಶುರುವಾಯಿತು. ಹೌದು ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಧ್ರುವ ಸರ್ಜಾ ಮುಂದೆ ನಿಂತು ಸಮಾಧಿಯ ಭೂಮಿ ಪೂಜೆ ಮಾಡಿದ್ದು ಚಿರು ಸಮಾಧಿಯನ್ನು ತಾತ್ಕಲಿಕವಾಗಿ ಶೆಡ್ ನಂತೆ ನಿರ್ಮಿಸಿದ್ದರು. ಆದಾದ ಬಳಿಕ ಸ್ಮಾರಕ ನಿರ್ಮಾಣ ಮಾಡಲು ಸಕಲ ತಯಾರಿ ನಡೆಸಿದ್ದು ಅಂದಹಾಗೆ ಪ್ರತಿಯೊಂದು ಸಂದರ್ಭದಲ್ಲಿಯೂ ಅತ್ತಿಗೆ ಮೇಘನಾ ರಾಜ್ ಅವರ ಜೊತೆಗೆ ನಿಲ್ಲುತ್ತಿರುವ ಧ್ರುವ ಸರ್ಜಾರವರು ಅತ್ತಿಗೆ ವಿಚಾರದಲ್ಲಿ ಮಹತ್ತರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹೌದು ನನ್ನ ಅಣ್ಣ ಚಿರು ಇದ್ದಿದ್ದರೆ ಮೇಘನಾ ರಾಜ್ ಗೆ ಹೇಗೆ ಸಪೋರ್ಟ್ ಮಾಡುತ್ತಿದ್ದರೋ ಹಾಗೆಯೇ ನನ್ನ ಅತ್ತಿಗೆಗೆ ಬೆಂಬಲ ಸೂಚಿಸುತ್ತೇನೆ. ನನ್ನ ಅಣ್ಣನ ಕನಸು ನನಸು ಮಾಡುತ್ತೇನೆ. ಮುಂದೇನೂ ಮೇಘನಾ ರಾಜ್ ಸಿನಿಮಾದಲ್ಲಿ ನಟಿಸುತ್ತಾರೆ. ಅವರ ಅಭಿಮಾನಿಗಳಿಗೆ ಒಳ್ಳೆಯ ಸಿನಿಮಾ ಕೊಡುತ್ತಾರೆ ಎಂದಿದ್ದಾರೆ. ಧ್ರುವ ಹೇಳಿದ ಮಾತಿಗೆ ಮೇಘನಾ ರಾಜ್ ಕೂಡ ಕಣ್ಣೀರು ಹಾಕಿದ್ದಾರೆ.
