ಅಪ್ಪು ಪತ್ನಿ ಅಶ್ವಿನಿ ಡ್ಯಾನ್ಸಿಂಗ್ ಶೋಗೆ ಬಂದಾಗ ಮೇಘನಾ ರಾಜ್ ಶಿಳ್ಳೆ ಹೊಡೆದರು

 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ಗ್ರಾಂಡ್ ಫಿನಾಲೆಯಲ್ಲಿ 5 ಜೋಡಿಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲವಿದ್ದು ಇದರ ಜೊತೆಗೆ ಇಬ್ಬರು ವಿಶೇಷ ಅತಿಥಿಗಳು ಈ ಶೋಗೆ ಆಗಮಿಸಿ ಇನ್ನಷ್ಟು ಮೆರುಗು ತುಂಬಿದ್ದಾರೆ. ಹೌದು ನಟ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಹಾಗೂ ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಅವರು ಡಾನ್ಸಿಂಗ್ ಚಾಂಪಿಯನ್ ಗ್ರಾಂಡ್ ಫಿನಾಲೆಯಲ್ಲಿ ಭಾಗಿಯಾಗಿದ್ದು ಅಶ್ವಿನಿ ಮಾತನಾಡಿ ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ. ಧ್ರುವ ಸರ್ಜಾ ಅವರು ಪೊಗರು ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇನ್ನು ಪುನೀತ್ ರಾಜ್‌ಕುಮಾರ್ ರವರು ಅಗಲಿದ ನಂತರದಲ್ಲಿ ಅಶ್ವಿನಿ ಅವರು ಇತ್ತೀಚೆಗೆ ಮನೆಯಿಂದ ಹೊರಬಂದು ಅಪ್ಪು ಹಾಜರಿ ಹಾಕಬೇಕಾಗಿದ್ದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು ಅಪ್ಪು ಅಗಲಿಕೆಯ ನಂತರದಲ್ಲಿ ಅದರಲ್ಲೂ ಕಿರುತೆರೆಯಲ್ಲಿ ಅವರು ಕಾಣಿಸಿಕೊಂಡಿದ್ದು ಇದೇ ಮೊದಲು ಎನ್ನಬಹುದು. ಇನ್ನು ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಡಾ ಶಿವ ರಾಜ್‌ಕುಮಾರ್ ಕೂಡ ಕೆಲ ದಿನಗಳ ಹಿಂದೆ ಆಗಮಿಸಿದ್ದು ಆ ವೇಳೆ ಅವರು ಪುನೀತ್ ರಾಜ್‌ಕುಮಾರ್ ಕುರಿತಂತೆ ಕೆಲ ನೆನಪು ಹಂಚಿಕೊಂಡರು. ಆ ವೇಳೆಯೇ ನಟ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯೋರ್ವರು ಡ್ಯಾನ್ಸಿಂಗ್ ಚಾಂಪಿಯನ್‌ ಶೋ ನಲ್ಲಿ 4 ದಿನದ ಮಗುವನ್ನು ಪಾಲಕರು ಕರೆದುಕೊಂಡು ಬಂದಿದ್ದರು.

ಆ ವೇಳೆ ಆ ಮಗುವಿನ ತಾಯಿ ಮಾತನಾಡಿ ನನ್ನ ಮಗುವಿನಲ್ಲಿ ಅಪ್ಪು ಸರ್‌ ಕಾಣುತ್ತೇನ ಎಂದು ಹೇಳಿದ್ದರು. ಆ ಮೇಲೆ ಆ ಮಗುಗೆ ಶಿವಣ್ಣ ಪುನೀತ್ ಎಂದು ನಾಮಕರಣ ಕೂಡ ಮಾಡಿದ್ದರು.ಮೇಘನಾ ರಾಜ್ ಕೂಡ ಪತಿ ಚಿರಂಜೀವಿ ಸರ್ಜಾ ಅಗಲಿದ ನಂತರದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕೂಡ ಈ ಶೋ ಮೂಲಕವೇ. ಹೌದು ಮೇಘನಾ ಮಗ ರಾಯನ್ ಕೂಡ ಡ್ಯಾನ್ಸಿಂಗ್ ಚಾಂಪಿಯನ್‌ ಶೋನಲ್ಲಿ ಕಾಣಿಸಿಕೊಂಡಿದ್ದು ಈ ಮೂಲಕ ಆತ ಟಿವಿಗೆ ಎಂಟ್ರಿ ಕೊಟ್ಟಿದ್ದನು. ಸದ್ಯ ಇದೀಗ ಅಶ್ವಿನಿ ಯವರು ವೇದಿಕೆಗೆ ಬರುತ್ತಿದ್ದಂತೆ ಮೇಘನಾ ಶಿಳ್ಳೆ ಹೊಡೆದು ಸ್ವಾಗತಿಸಿದ್ದಾರೆ.

ಇನ್ನು ಮೇಘನಾ ರಾಜ್ ಮಯೂರಿ ಉಪಾಧ್ಯ ವಿಜಯ್ ರಾಘವೇಂದ್ರ ಈ ಶೋನ ನಿರ್ಣಾಯಕರಾಗಿದ್ದು ಸೃಜನ್ ಲೋಕೇಶ್ ಅವರು ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರ್‌ ಮೂಲಕ ಈ ಶೋಗೆ ಬಂಡವಾಳ ಹೂಡಿದ್ದಾರೆ. ಅಕುಲ್ ಬಾಲಾಜಿ ಈ ಶೋನ ನಿರೂಪಕರಾಗಿದ್ದು ಡಾನ್ಸಿಂಗ್ ಚಾಂಪಿಯನ್ ಗ್ರಾಂಡ್ ಫಿನಾಲೆ ಭಾನುವಾರ ( ಮೇ 29 ) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.ಇನ್ನು ಡಾನ್ಸಿಂಗ್ ಚಾಂಪಿಯನ್ ಫೈನಲಿಸ್ಟ್ಸ್ ನಲ್ಲಿಚಂದನಾ, ಅಕ್ಷತಾಅರ್ಜುನ್ ಯೋಗಿ, ರಾಣಿ ಆರತಿ, ಸಾಗರ್ ಇದ್ದಾರೆ.