ಬಹುಭಾಷಾ ನಟಿ ಮೇಘನಾ ರಾಜ್ ರವರು ಸದ್ಯ ಇದೀಗ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಿದ್ದು ಸಿನಿಮಾ ಕೆಲಸಗಳ ನಡುವೆಯೇ ಅವರು ಪ್ರಮುಖವಾಗಿ ಪುತ್ರ ರಾಯನ್ ರಾಜ್ ಸರ್ಜಾ ರವರ ಬೆಳವಣಿಗೆಯ ಮೇಲೆ ವಿಶೇಷ ಗಮನವಿಟ್ಟಿದ್ದಾರೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಮೇಘನಾ ಪ್ರೀತಿಯ ಮಗ ರಾಯನ್ ತುಂಟಾಟಗಳ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಹೌದು ಇದರೊಂದಿಗೆ ಚಿರಂಜೀವಿ ಸರ್ಜಾರ ನೆನಪುಗಳನ್ನೂ ಮೇಘನಾ ಹಂಚಿಕೊಳ್ಳುತ್ತಿರುತ್ತಾರೆ. ಹೌದು ಸದ್ಯ ಇದೀಗ ಮೇಘನಾ ಹೊಸ ವಿಡಿಯೋ ಹಂಚಿಕೊಂಡಿದ್ದು ಅದರಲ್ಲಿ ಚಿರು ಹಾಗೂ ತಮ್ಮ ಬಾಲ್ಯದ ನೆನಪುಗಳನ್ನು ಸ್ಮರಿಸಿಕೊಂಡಿರುವ ನಟಿ ರಾಯನ್ ಈಗ ಹೇಗೆ ಬೆಳೆಯುತ್ತಿದ್ದಾನೆ ಎನ್ನುವುದನ್ನೂ ವಿವರಿಸಿದ್ದಾರೆ.
ಹೌದು ಮನೆಯ ಸುತ್ತಮುತ್ತಲಿನ ಬಾಲಕರೊಂದಿಗೆ ರಾಯನ್ ಆಟವಾಡುತ್ತಿರುವ ವಿಡಿಯೋ ಶೇರ್ ಮಾಡಿರುವ ನಟಿ ಮೇಘನಾ ರಾಜ್ ರವರು ಮೊಬೈಲ್ ಬಿಡಿ ಮೈದಾನಕ್ಕೆ ಬನ್ನಿ ಎಂದು ಕರೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಅಗಿದೆ. ಇನ್ನು ಮೇಘನಾ ರಾಜ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಅದರಲ್ಲಿ ಹಲವು ವಿಚಾರಗಳನ್ನು ಬರೆದಿದ್ದಾರೆ. ಹೌದು ಮೊಬೈಲ್ ಬಿಡಿ ಎಂದು ಕರೆ ನೀಡಿರುವುದರ ಜತೆಗೆ ಹಿಂದಿನ ಕಾಲದಲ್ಲಿ ಮಕ್ಕಳು ಹೇಗೆ ಬೆಳೆಯುತ್ತಿದ್ದರು ಎನ್ನುವುದನ್ನೂ ನಟಿ ನೆನಪಿಸಿಕೊಂಡಿದ್ದು ಇದಕ್ಕೆ ತಮ್ಮದೇ ಉದಾಹರಣೆ ಕೊಟ್ಟಿರುವ ಮೇಘನಾ ‘ನಾನು ಹಾಗೂ ಚಿರು ಬೆಳೆದಂತೆಯೇ ರಾಯನ್ ಕೂಡ ನಮ್ಮ ಏರಿಯಾದ ಮಕ್ಕಳೊಂದಿಗೆ ಆಟವಾಡುತ್ತಾ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಹೌದು ಸಣ್ಣ ವಯಸ್ಸಿನಲ್ಲಿ ಕಾರ್ಟೂನ್ಗಳೊಂದಿಗೆ ಆತ ಸಮಯ ಕಳೆಯಬೇಕು ಎನ್ನುವುದನ್ನು ಒಪ್ಪುತ್ತೇನೆ ಎಂದಿರುವ ಮೇಘನಾ ರಾಜ್ ಆದರೆ ರಾಯನ್ ಹಳೆಯ ಮಾದರಿಯಲ್ಲಿ ಬೆಳೆಯುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಅಂದರೆ ಸುತ್ತಮುತ್ತಲಿನ ಮಕ್ಕಳೊಂದಿಗೆ ಆಟವಾಡುತ್ತಾ ಆತನದ್ದೇ ವಯಸ್ಸಿನವರೊಂದಿಗೆ ಬೆರೆಯುತ್ತಾ ಬೆಳೆಯಬೇಕು ಎಂದು ತಿಳಿಸಿದ್ದಾರೆ. ಈ ಪೋಸ್ಟ್ಗೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಎಂದು ಹ್ಯಾಶ್ ಟ್ಯಾಗ್ ಕೂಡ ನೀಡಿದ್ದಾರೆ ನಟಿ ಮೇಘನಾ.
ಇನ್ನು ಮೇಘನಾ ರಾಜ್ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ವಿಚಾರವನ್ನು ಪ್ರಸ್ತಾಪಿಸಲೂ ಕಾರಣವಿದೆ. ಮೇ 13ರಂದು ಆ ಚಿತ್ರ ತೆರೆಕಂಡಿದ್ದು ಪೋಷಕರ ಮೊಬೈಲ್ ಗೀಳು ಮಕ್ಕಳ ಮೇಲೆ ಬೀರುವ ಪರಿಣಾಮವನ್ನು ಕಟ್ಟಿಕೊಟ್ಟಿದ್ದ ಈ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಅದರಲ್ಲಿ ಮೇಘನಾ ಹಾಗೂ ಸೃಜನ್ ಲೋಕೇಶ್ ಅಭಿನಯಿಸಿದ್ದರು. ಆ ಚಿತ್ರದ ವಿಚಾರವನ್ನೇ ತಮ್ಮ ಪೋಸ್ಟ್ನಲ್ಲೂ ಪ್ರಸ್ತಾಪಿಸಿದ್ದಾರೆ ಮೇಘನಾ. ಸದ್ಯ ಮೇಘನಾ ಅವರ ಕಾಳಜಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
