ಸಾಮಾನ್ಯವಾಗಿ ಈ ಸಿನಿಮಾ ತಾರೆಯ ಕೆಲ ಫೋಟೋಗಳು ಅವರ ಅಭಿಮಾನಿಗಳಲ್ಲಿ ಬಹಳಾನೇ ಗೊಂದಲ ಸೃಷ್ಟಿ ಮಾಡುತ್ತದೆ ಎನ್ನಬಹುದು. ಹೌದು ಯಾವುದು ನಿಜ ಯಾವುದು ಸುಳ್ಳು ಎಂದು ಕಂಡು ಹಿಡಿಯುವುದು ಕೂಡ ಬಹಳ ಕಷ್ಟ ಅನ್ನಿಸಿ ಬಿಡುತ್ತದೆ. ಸಿನಿಮಾ ನಟಿಯರು ಇತ್ತೀಚೆಗಂತೂ ತಮ್ಮ ಪೋಟೋಗಳನ್ನು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ. ಹೌದು ಕೆಲವೊಮ್ಮೆ ಸಿಂಪಲ್ ಫೋಟೋ ಗಳು ಇದ್ದರೆ ಇನ್ನು ಕೆಲವೊಮ್ಮೆ ಹಸೆಮಣೆಯಲ್ಲಿ ಕೂತ ಫೋಟೋ.
ಕುತ್ತಿಗೆಯಲ್ಲಿ ತಾಳಿ ಹಾಕಿಕೊಂಡ ಫೋಟೋ ಹೀಗೆ ಅನೇಕ ರೀತಿಯ ಫೋಟೋ ಗಳು ಅಭಿಮಾನಿಗಳಿಗೆ ಗೊಂದಲ ಮೂಡಿಸುತ್ತಿದ್ದು ಅದು ನಿಜ ಜೀವನದ ಫೋಟೋ ಆಗಿದೆಯಾ ಅಥವಾ ಸಿನಿಮಾದ ಫೋಟೋವಾಗಿದೆಯಾ ಅನ್ನುವುದು ಗೊತ್ತಾಗುವುದಿಲ್ಲ. ಹೌದು ಈ ರೀತಿ ಅನೇಕ ಬಾರಿ ಕನ್ಫ್ಯೂಸ್ ಆಗಿದ್ದು ಸದ್ಯ ಇದೀಗ ಇಲ್ಲೊಬ್ಬ ಹಿರಿಯ ನಟಿಯ ಒಂದು ಪೋಟೋ ಭಾರೀ ಗೊಂದಲ ಹುಟ್ಟು ಹಾಕಿದೆ. ಹೌದು ಅದುವೇ ನಟಿ ತಾರಾ ಅನುರಾಧ ಅವರ ಫೋಟೋ.
ಹೌದು ನಟಿ ತಾರಾ ಅವರು ಮತ್ತೊಮ್ಮೆ ತಾಯಿ ಆಗುತ್ತಿದ್ದಾರಾ ಅನ್ನುವ ಪ್ರಶ್ನೆ ಎದುರಾಗಿದ್ದು ಇದಕ್ಕೆ ಕಾರಣ ಒಂದು ಫೋಟೋ. ಹೌದು ಹಳದಿ ಸೀರೆ ಹಾಗೂ ಕೆಂಬಣ್ಣದ ಬ್ಲೌಸ್ ತೊಟ್ಟ ತಾರಾ ಅವರ ಫೋಟೋ ವೈರಲ್ ಆಗಿದ್ದು ಎಲ್ಲರೂ ಕೂಡ ಶುಭಾಶಯ ಕೋರುತ್ತಿದ್ದಾರೆ. ಯಾಕಂದರೆ ಅದರಲ್ಲಿ ಬೇಬಿ ಬಂಪ್ ಕಾಣಿಸುತ್ತಿದ್ದು ತುಂಬು ಗರ್ಭವತಿ ಆದಂತೆ ಕಾಣಿಸುತ್ತಿದ್ದು ಹೊಟ್ಟೆ ಹಿಡಿದುಕೊಂಡು ಫೋಸ್ ಕೊಟ್ಟಿದ್ದಾರೆ. ಹೌದು ಹೀಗಾಗಿ ಅಭಿಮಾನಿಗಳು ತಾರಾ ಅವರು ಮತ್ತೊಮ್ಮೆ ತಾಯಿ ಆಗುತ್ತಿದ್ದಾರೆ ಎಂದು ಸಂತೋಷಗೊಂಡು ಖುಷಿ ವ್ಯಕ್ತ ಪಡಿಸಿದ್ದು ಆದರೆ ಇದು ಅವರ ಸಿನಿಮಾದ ಪಾತ್ರದ ಫೋಟೋ ಆಗಿದೆ.ಬಿಗ್ ಸೀಸನ್ 8 ರಲ್ಲಿ ಸ್ಪರ್ಧಿಸಿದ್ದ ರಾಜೀವ್ ನಾಯಕನಾಗಿ ನಟಿಸುತ್ತಿರುವ ಉಸಿರೇ ಉಸಿರೇ ಚಿತ್ರದಲ್ಲಿ ತಾರಾ ಕೂಡ ಅಭಿನಯಿಸುತ್ತಿದ್ದು ಈ ಚಿತ್ರದ ಲುಕ್ ಎನ್ನಲಾಗಿದೆ.
ಎನ್ ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ರವರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಶ್ರೀಜಿ ಘೋಷ್ ನಾಯಕಿಯಾಗಿ ಕಾಣಿಸಿಕೊಂಡಿದ್ದು ವಿವೇಕ್ ಚಕ್ರವರ್ತಿಯವರು ಸಂಗೀತ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ತಾರಾ ಅನುರಾಧ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಆ ಪಾತ್ರದಲ್ಲಿ ಒಬ್ಬ ತುಂಬು ಗರ್ಭಿಣಿ ಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಹೌದು ಒಟ್ಟಿನಲ್ಲಿ ತಾರಾ ಅವರು ತಮ್ಮ ಅಭಿಮಾನಿಗಳಿಗೆ ಚಮಕ್ ನೀಡಿದ್ದಂತೂ ನಿಜ. ಇನ್ನು ತಾರಾ ಅವರು ಕನ್ನಡ ತೆಲುಗ ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿರುವ ಹಿರಿಯ ನಟಿಯಾಗಿದ್ದು1965 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿದ ತಾರಾ ಕನ್ನಡದ ಒಬ್ಬ ಪ್ರತಿಭಾವಂತ ನಟಿ. ಇವರು ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಮತ್ತು ನಾಯಕಿಯಾಗಿ ಅಭಿನಯಿಸಿದ್ದಾರೆ. ಮುಖ್ಯವಾಗಿ ಕಾನೂರು ಹೆಗ್ಗಡತಿ ಮುನ್ನುಡಿ ಕಾರ್ಮುಗಿಲು ಮುಂಜಾನೆಯ ಮಂಜು ಕರಿಮಲೆಯ ಕಗ್ಗತ್ತಲು ಮತದಾನ ನಿನಗಾಗಿ ಹಸೀನಾ
ಸೈನೈಡ್ ಹೀಗೆ ಸಾಕಷ್ಟು ಚಿತ್ರಗಳು ಇವರಿಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳಾಗಿದ್ದು ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.ಕೇವಲ ಸಿನಿಮಾ ಮಾತ್ರ ಅಲ್ಲದೆ ರಾಜಕೀಯ ದಲ್ಲಿಯೂ ತಾರಾ ಗುರುತಿಸಿಕೊಂಡಿದ್ದು 2012ರಲ್ಲಿ ಕರ್ನಾಟಕ ಭಾರತೀಯ ಜನತಾ ಪಾರ್ಟಿಯಲ್ಲಿ ಇದ್ದರು ಅದೇ ರೀತಿ ಇವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಇವರು ಕನ್ನಡ ಸೇರಿದಂತೆ ತೆಲುಗು ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಸಟಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ಸೈ ಎನಿಸಿಕೊಂಡಿದ್ದು ನಾಯಕಿಯಾಗಿ ಇದೀಗ ಪೋಷಕ ನಟಿಯಾಗಿ ಮಿಂಚುತ್ತಿರುವ ಇವರ ಉಸಿರೇ ಉಸಿರೇ ಚಿತ್ರ ಇದೀಗ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.
