ಕನ್ನಡ ಚಿತ್ರರಂಗದಲ್ಲಿ ಕರುನಾಡ ಚಕ್ರವರ್ತಿಯೆಂದೇ ಖ್ಯಾತಿ ಪಡೆದು ಸ್ಟಾರ್ ನಟರಾಗಿ ಮರೆಯುತ್ತಿರುವ ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಹಿರಿಯ ಪುತ್ರ ಶಿವರಾಜ್ ಕುಮಾರ್ ಅವರ ಮಗಳ ವಿವಾಹ 2015 ಆಗಸ್ಟ್ 31 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಹೌದು ಚೆಂದನವನ ಹಿಂದೆಂದೂ ಕಾಣದ ವೈಭೋಗಕ್ಕೆ ತ್ರಿಪುರವಾಸಿನಿ ಸಾಕ್ಷಿಯಾಗಿದ್ದಯ
ದೊಡ್ಮನೆಯ ಮೂರನೇ ತಲೆಮಾರಿನ ಮೊದಲ ಮದುವೇ ಇದಾಗಿದ್ದ ಕಾರಣ ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು ಎನ್ನಬಹುದು. ಹೌದು ಶಿವರಾಜ್ ಕುಮಾರ್ ಅವರ ಹಿರಿಯ ಮಗಳಾದ ನಿರುಪಮಾ ಅವರ ಮದುವೆ ಕಾರ್ಯದ ಸಿದ್ಧತೆ ಸೂಮಾರು ಮೂರು ತಿಂಗಳುಗಳ ಹಿಂದೆಯೇ ಭರ್ಜರಿಯಾಗಿ ಪ್ರಾರಂಭವಾಗಿದ್ದು ವಿಶೇಷವಾಗಿತ್ತು.
ಮದುವೆಯ ಮುಂಚೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಮಾರ್ ಕುಟುಂಬದ ಹತ್ತಿರದ ಸಂಬಂಧಿಗಳು ಮತ್ತು ಕನ್ನಡ ಚಿತ್ರರಂಗದ ಕೆಲವು ನಟನಟಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ರೆಬಲ್ ಸ್ಟಾರ್ ಅಂಬರೀಶ್ ಶ್ರೀ ಮುರಳಿ ವಿಜಯ ರಾಘವೇಂದ್ರ ಮುಂತಾದವರ ಜೊತೆ ದೊಡ್ಮನೆ ಹುಡುಗರಾದ ಶಿವರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ರಾಘವೇಂದ್ರ ರಾಜ್ ಕುಮಾರ್ ಅವರು ಡಾನ್ಸ್ ಮಾಡುವ ಮೂಲಕ ಸಂಭ್ರಮ ಪಟ್ಟಿದ್ದರು.
ಇನ್ನು ತಿಂಗಳುಗಳ ಹಿಂದೆಯೇ ಮಗಳ ಮದುವೆಗೆ ಸಕಲ ತಯಾರಿ ನಡೆಸಿದ್ದ ನಟ ಶಿವರಾಜ್ ಕುಮಾರ್ ರವರು ಕಾಲಿವುಡ್ ಟಾಲಿವುಡ್ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಗಣ್ಯರಿಗೆ ಆತ್ಮೀಯ ಆಮಂತ್ರಣ ನೀಡಿ ಮಗಳ ಮದುವೆಗೆ ಆಗಮಿಸಿ ಆಶೀರ್ವಾದಿಸುವಂತೆ ಕೇಳಿಕೊಂಡಿದ್ದರು. ಹೌದು ಶಿವಣ್ಣ ಅವರ ಪ್ರೀತಿಯ ಪುತ್ರಿ ಡಾ.ನಿರುಪಮ ಹಾಗೂ ಡಾ.ದಿಲೀಪ್ ಅವರ ವಿವಾಹ ಮಹೋತ್ಸವಕ್ಕೆ ಸೂಪರ್ ಸ್ಟಾರ್ ರಜಿನಿಕಾಂತ್ ಸಕಲಕಲಾವಲ್ಲಭ ಕಮಲ್ ಹಾಸನ್ ಅಮಿತಾಬ್ ಬಚ್ಚನ್ ಆಗಮಿಸುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದ್ದು ಈ ಯಾವ ನಟರು ಬರದೇ ಇದ್ದಿದ್ದು ಶಿವಣ್ಣ ಅವರಿಗೆ ಬೇಸರ ತಂದಿತ್ತು. ಆದರೂ ಕೂಡ ಸಾವಿರಾರು ಅಭಿಮಾನಿಗಳ ಮುಂದೆ ಶಿವಣ್ಣ ಅವರ ಪ್ರೀತಿಯ ಮಗಳ ವಿವಾಹ ಜರುಗಿತ್ತು.
ಇನ್ನು ಶಿವಣ್ಣನ ಮಗಳು ಡಾ.ನಿರುಪಮ ಕೈಹಿಡಿದಿರುವ ವರ ಡಾ.ದಿಲೀಪ್ ರವರು ಮೂಲತಃ ಮಂಡ್ಯದವರಾಗಿದ್ದು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಇನ್ನು ಅವರ ನಿವಾಸ ಎಚ್ ಎಸ್ ಆರ್ ಲೇಔಟ್ ನಲ್ಲಿದ್ದು ಅವರ ತಂದೆ ಎಲ್.ಮ ಮಂಜೇಗೌಡ ಬಿಡಿಎ ಎಂಜಿನಿಯರ್ ಹಾಗೂ ತಾಯಿ ಪಾರ್ವತಿ ಗೃಹಿಣಿಯಾಗಿದ್ದಾರೆ. ಡಾ ದಿಲೀಪ್ ಅವರಿಗೆ ಹಿರಿಯ ಸಹೋದರೊಬ್ಬರಿದ್ದು ಚಿಕ್ಕವಯಸ್ಸಿನಿಂದಲೂ ಕೂಡ ದಿಲೀಪ್ ಅವರಿಗೆ ಡಾಕ್ಟರ್ ಆಗಬೇಕೆಂಬ ಕನಸಿದ್ದು ಅದನ್ನ ನನಸು ಮಾಡಿಕೊಳ್ಳುವುದಕ್ಕೆ ಬೆಂಗಳೂರಿನ ವೈದೇಹಿ ಕಾಲೇಜಿಗೆ ಸೇರುತ್ತಾರೆ. ಅಲ್ಲೇ ದಿಲೀಪ್ ಅವರಿಗೆ ನಿರುಪಮ ಅವರ ಪರಿಚಯವಾಗಿದ್ದು.
ಹೌದು ಅಂಡರ್ ಗ್ರ್ಯಾಡ್ಜ್ಯುಯೇಷನ್ ಸಮಯದಿಂದಲೂ ಕೂಡ ನಿರುಪಮ ದಿಲೀಪ್ ಕ್ಲಾಸ್ ಮೇಟ್ಸ್ ಗಳಾಗಿದ್ದು ಓದಿನಲ್ಲಿ ಸದಾ ಮುಂದಿರುತ್ತಿದ್ದ ನಿರುಪಮ ಅವರಿಗೆ ದಿಲೀಪ್ ಅವರು ಸ್ಟಡೀಸ್ ವಿಷಯದಲ್ಲಿ ಸಹಾಯ ಮಾಡುತ್ತಿದ್ದರಂತೆ. ದಿನಗಳು ಉರುಳಿದಂತೆ ಇಬ್ಬರ ಗೆಳೆತನ ಪ್ರೀತಿಗೆ ತಿರುಗಿದ್ದು ಇಬ್ಬರ ಎಂಟು ವರುಷದ ಪ್ರೇಮಕ್ಕೆ ಕುಟುಂಬದವರು ಒಪ್ಪಿಗೆ ಸೂಚಿಸಿದ ಪರಿಣಾಮ ಇಬ್ಬರ ವಿವಾಹ ಅದ್ದೂರಿಯಾಗಿ ನಡೆಯಿತು.
ಸ್ಟಾರ್ ನಟನ ಮಗಳಾಗಿ ಡಾ.ರಾಜ್ ಕುಮಾರ್ ಮೊಮ್ಮಗಳಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರ ಮೊಮ್ಮಗಳಾಗಿದ್ದರೂ ಸರಳ ಸೌಜನ್ಯ ವಾಗಿರುವ ನಿರುಪಮ ಅವರ ಗುಣ ದಿಲೀಪ್ ಮನಸೋಲುವುದಕ್ಕೆ ಕಾರಣವಾಗಿದ್ದು ಸದ್ಯ ಎಂ.ಎಸ್ ಮುಗಿಸಿರುವ ದಿಲೀಪ್ ಮದುವೆ ನಂತರ ಉನ್ನತ ಶಿಕ್ಷಣ ಮಾಡುವ ಪ್ಲಾನ್ ಮಾಡಿದ್ದಾರೆ. ಇನ್ನು ಈ ವಿವಾಹದಲ್ಲಿ ಎಲ್ಲರುಗಿಂತ ಹೆಚ್ಚು ಸಂಭ್ರಮ ಪಟ್ಟವರು ಮಾತ್ರ ನಿರುಯಪಮ ಅವರ ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ರವರು. ಹೌದು ನಿರೂಪಮಾ ಅವರಿಗೆ ತನ್ನ ಚಿಕ್ಕಪ್ಪ ಕಂಡರೆ ಬಹಳ ಪ್ರೀತಿ. ಇತ್ತ ಅಪ್ಪು ಕೂಡ ಅಣ್ಣನ ಮಗಳನ್ನು ಸ್ವಂತ ಮಗಳಂತೆ ನೋಡುತ್ತಿದ್ದರು.
ಈ ಲೇಖನಿಯಲ್ಲಿ ನಿರುಪಮಸ ಅವರ ಮದುವೆಯಲ್ಲಿ ರಾಜ್ ಕುಟುಂಬ ಹೇಗೆ ಸಂಭ್ರಮಿಸಿತ್ತು ಎಂದು ನೋಡಬಹುದು.

