ನಮ್ಮ ಕನ್ನಡ ಚಿತ್ರರಂಗದ ಅಪರೂಪದ ಮುತ್ತು ಸರಳತೆಯ ಸಾಮ್ರಾಟ ಪವರ್ ಸ್ಟಾರ್ ಶ್ರೀ ಪುನೀತ್ ರಾಜ್ ಕುಮಾರ್ ರವರನ್ನು ಕಳೆದಕೊಂಡ ನೋವಲ್ಲಿ ಅದೇಷ್ಟೋ ಹೃದಯಗಳು ಇಂದಿಗೂ ಮಿಡಿಯುತ್ತಿದ್ದು ಅಂತ ಹೃದಯಗಳಲ್ಲಿ ಚಲಪತಿ ಅನ್ನುವ ಹೃದಯ ಕೂಡ ಒಂದು ಎನ್ನಬಹುದು. ಚಲಪತಿ ಈ ಹೆಸರು ಅಪ್ಪು ಅಭಿಮಾನಿಗಳಿಗೆ ಹೊಸದೇನಲ್ಲ. ಯಾಕಂದರೆ ಅಪ್ಪುಎಂಬ ಅಭಿಮಾನಿಗಳ ದೇವರನ್ನು ಹನುಮಂತನ ರೀತಿಯಳಿ ಕಾಯ್ತಿದ್ದದ್ದೆ ಈ ಚಲಪತಿ. ಹೌದು ಅಪ್ಪು ಅವರಿಗೆ ಬಹಳಷ್ಟು ವರ್ಷಗಳು ಗನ್ ಮ್ಯಾನ್ ಆಗಿ ಕಾಯಕ ಮಾಡಿದ್ದ ಚಲಪತಿ ಸದ್ಯ ಇದೀಗ ರಾಜಕುಮಾರನಿಲ್ಲದ ಅರಮನೆಯನ್ನು ಭಾರದ ಮನ್ಸಸ್ಸಿ ನಿಂದಲೇ ಬಿಟ್ಟು ಹೋಗಿದ್ದು ಅಲ್ಲದೆ ಇನ್ಮುಂದೆ ಚಿತ್ರರಂಗದಲ್ಲಿ ಕಾಯಕ ಮಾಡೊದಿಲ್ಲ ಎಂದು ಶಪಥ ಮಾಡಿದ್ದಾರೆ.
ಇನ್ನು ಬಾಡಿಗಾರ್ಡ್ ಚಲಪತಿಯವರ ಈ ಶಪಥ ಯಾಕೆ ಅಂತ ತಿಳಿದರೆ ಅಪ್ಪು ಫ್ಯಾನ್ಸ್ ಮತ್ತೊಮ್ಮೆ ಭಾವುಕ ರಾಗೋದು ಗ್ಯಾರಂಟಿ. ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ದೇವರುಗಳ ಬಿಟ್ಟು ದೇವರ ಬಳಿ ಹೋದಾಗ ಇಡೀ ಕರುನಾಡೆ ಕಣ್ಣೀರಲ್ಲಿ ಕೈತೊಳೆದಿದ್ದು ಅಪ್ಪು ಇಲ್ಲ ಅನ್ನೋ ಕಹಿ ಸತ್ಯ ಕೇಳಿದಾಗ ಅಪ್ಪುರವರಿಗೆ ನೆರಳಿನಂತೆ ಕೆಲಸ ಮಾಡಿದ್ದ ಗನ್ ಮ್ಯಾನ್ ಚಲಪತಿ ಕಣ್ಣಿರು ಹಾಕಿದ್ದರು. ಹೌದು ತನ್ನನ್ನು ತಮ್ಮನಂತೆ ನೋಡುತ್ತಿದ್ದ ದೇವರಿಗೆ ಸಮಾನಾಗಿದ್ದ ಪುನೀತ್ ರವರನ್ನು ಕಳೆದುಕೊಂಡ ನೋವಲ್ಲಿ ಆ ದೇವರಿಗೂ ಶಾಪ ಹಾಕಿದುಂಟು.
ಹೌದು ಆದರೆ ಇದೀಗ ಪುನೀತ್ ರಾಜ್ಕುಮಾರ್ ಅಂಗರಕ್ಷಕ ಅಪ್ಪು ಇಲ್ಲದ ಅರಮನೆಯ ಅಂಗಳವನ್ನು ನೋವಿನಿಂದಲೇ ಬಿಟ್ಟು ಹೊರಟ್ಟಿದ್ದಾರೆ. ಹೌದು ಅಪ್ಪು ಅಗಲಿಕೆಯ ಬಳಿಕ ಸುಮಾರು 6 ತಿಂಗಳು ಬಹಳ ನೋವಿನಿಂದಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದ ಚಲಪತಿ ಈಗ ಕೆಲಸ ಬಿಟ್ಟು ಊರು ಸೇರಿದ್ದು ಚಲಪತಿ ಸದ್ಯ ಕೋಲಾರದ ಬಂಗಾರಪೇಟೆ ಸೇರಿದ್ದು ಊರಿನಲ್ಲಿ ಅಪ್ಪು ನೆನಪಿನಲ್ಲಿ ಕಾಲ ಕಳೆಯುತ್ತಿದ್ದಾರೆ.
