ನಮ್ಮ ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ಒನ್ ಅಂಡ್ ಓನ್ಲಿ ಬ್ಯೂಟಿಫುಲ್ ಫೀಮೇಲ್ ಸ್ಟಾರ್ ಆಂಕರ್ ಅಂದರೆ ಅದು ಅನುಶ್ರೀ ಅವರು ಮಾತ್ರ. ಹೌದು ಜೀ ಕನ್ನಡದಲ್ಲಿ ಮೂಡಿ ಬರುವ ಹಲವು ಕಾರ್ಯಕ್ರಮಗಳಿಗೆ ಅನುಶ್ರೀ ಅವರೇ ನಿರೂಪಣೆ ಮಾಡುತ್ತಿದ್ದು ಅಲ್ಲದೇ ಸ್ಯಾಂಡಲ್‌ವುಡ್‌ನ ಹಲವು ಕಾರ್ಯಕ್ರಮಗಳನ್ನು ಅನುಶ್ರೀ ನಡೆಸಿಕೊಡುವುದು ಉಂಟು.
ಇನ್ನು ಕಿರುತೆರೆಯಲ್ಲಿ ನಿರೂಪಕರಾಗಿ, ಹಿರಿತೆರೆಯಲ್ಲಿ ನಟಿಯಾಗಿ ಸಕ್ರಿಯರಾಗಿರುವ ಆಂಕರ್ ಅನುಶ್ರೀ ಪದವಿ ಮುಗಿಸುತ್ತಿದ್ದಂತೆಯೇ ಕೆಲಸಕ್ಕೆ ಸೇರಿಕೊಂಡಿದ್ದು ಮೊದಲು ಅನುಶ್ರೀ ದೂರದರ್ಶನದಲ್ಲಿ ಕೆಲಸ ಆರಂಭಿಸಿದರು. ಹೌದು ಇಂದು ಕರುನಾಡಿನ ಫೇಮಸ್ ಆಂಕರ್ ಆಗಿದ್ದು ಇದು ಕನ್ನಡಿಗರ ಹೆಮ್ಮೆಯ ವಿಚಾರವೂ ಹೌದು.
ಸದ್ಯ ತಮ್ಮ ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದಿರುವ ಅನುಶ್ರೀ ರವರು ಇಂದು ಯಶಸ್ಸನ್ನು ಕಂಡು ಖುಷಿಯಾಗಿದ್ದು ಹಲವು ವರ್ಷಗಳಿಂದ ನಿರೂಪಣೆ ಮಾಡುತ್ತಿರುವ ಅನುಶ್ರೀ ಇದೀಗ ತಮ್ಮ ಕನಸಿನ ಮನೆಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದು ಎಲ್ಲಿ? ಏನು ಎಂಬ ಬಗ್ಗೆ ನೋಡೋಣ ಬನ್ನಿ. ಸದ್ಯ ಇದೀಗ ಅನುಶ್ರೀ ಹೊಸ ಮನೆ ಕಟ್ಟಿಸಲು ಮುಂದಾಗಿದ್ದು ಜಯನಗರ ಹೌಸಿಂಗ್ ಸೊಸೈಟಿ ಲೇಔಟ್‌ನ ಸುಬ್ರಹ್ಮಣ್ಯಪುರಂನಲ್ಲಿ ಅನುಶ್ರೀ ಜಾಗ ಖರೀದಿ ಮಾಡಿದ್ದಾರೆ. ಹೌದು ಹೊಸ ಮನೆ ಕಟ್ಟಲು ಇಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದ್ದು ಅನುಶ್ರೀ ಅವರ ಸೈಟ್‌ನಲ್ಲಿ ಭೂಮಿ ಪೂಜೆಯನ್ನು ಮಾಡಲಾಗಿದೆ.
