ಸಾಕಷ್ಟು ಮಂದಿಗೆ ಕನ್ನಡ ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮ ಮತ್ತು ದಕ್ಷಿಣ ಭಾರತದ ಕಿರುತೆರೆ ಲೋಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿರುವ ಬಿಗ್ ಬಾಸ್ ನಲ್ಲಿ ನಿಮ್ಮ ನೆನಪಿನಲ್ಲಿ ಇಟ್ಟಿಕೊಳ್ಳುವ ಸ್ಪರ್ಧಿಗಳು ಯಾರು ಎಂದ ತಕ್ಷಣ ಸಾಕಷ್ಟು ಜನ ಸೂಚಿಸುವ ಹೆಸರು ನಿವೇದಿತಾ ಗೌಡ ಅವರದ್ದು ಎನ್ನಬಹುದು. ಹೌದು ನಿವೇದಿತಾ ಗೌಡ ರವರ ಮುದ್ದು ಮಾತು ಹಾಗೂ ಅದ್ಬುತ ಕೇಶರಾಶಿಗೆ ಅದೆಷ್ಟೋ ಮಂದಿ ಅಭಿಮಾನಿಗಳಿದ್ದು ಅದರಲ್ಲಿಯೂ ಕೂಡ ಬಿಗ್ ಬಾಸ್ ಮನೆಯೊಳಗೆ ಗೊಂಬೆ ಎಂಬ ಹೆಸರಿನಿಂದಲೇ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನೂ ಕೂಡ ಕಂಡುಕೊಳ್ಳುತ್ತಾರೆ.
2019 ರ ಮೈಸೂರು ಯುವ ದಸರಾ ವೇದಿಕೆ ಮೇಲೆ ಲಕ್ಷಾಂತರ ಜನರ ಎದುರೇ ಬಾರ್ಬಿ ಡಾಲ್ ನಿವೇದಿತಾ ಗೌಡಗೆ ಖ್ಯಾತ ರ್ಯಪರ್ ಚಂದನ್ ಶೆಟ್ಟಿ ಉಂಗುರ ತೊಡಿಸಿ ಪ್ರೀತಿ ವ್ಯಕ್ತ ಪಡಿಸಿದ್ದು ಇನ್ನು ಯುವ ದಸರಾ ಕಾರ್ಯಕ್ರಮಕ್ಕಾಗಿ ಹಾಡುತ್ತಿದ್ದ ವೇದಿಕೆಯಲ್ಲೇ ನಿವೇದಿತಾಗೆ ಮಂಡಿಯೂರಿ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದರು. ಹೌದು ಇದು ನಿವೇದಿತಾಗೆ ಸಖತ್ ಸರ್‌ಪ್ರೈಸ್ ತಂದ್ದು ಅಷ್ಟೇ ಅಲ್ಲದೇ ಚಂದನ್ ಅವರ ಈ ನಡೆಗೆ ಅಪಾರ ವಿರೋಧವೂ ವ್ಯಕ್ತವಾಗಿದ್ದು ಕರ್ನಾಟಕದ ಈ ಗಾಯಕನ ಬಂಧನಕ್ಕೆ ಆಗ್ರಹಿಸಿ ಎಲ್ಲೆಡೆ ಪ್ರತಿಭಟನೆಗಳೂ ನಡೆದಿದ್ದವು.
ಹೌದು ತದ ನಂತರ ಎಲ್ಲ ತಣ್ಣಗಾದ ಮೇಲೆ ಗುರು- ಹಿರಿಯರ ಸಮ್ಮುಖದಲ್ಲಿ ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಗೊಂಬೆ ಗೊಂಬೆ ಹಾಡಿಗೆ ಈ ಜೋಡಿ ಜೊತೆಯಾಗಿ ಹೆಜ್ಜೆ ಹಾಕಿದ್ದು ಡಿಗ್ರಿ ಮುಗಿದ ಬಳಿಕ ಪ್ರತಿಷ್ಠಿತ ಏರ್‌ಲೈನ್ಸ್ ಕಂಪನಿಯೊಂದಕ್ಕೆ ಆಪರೇಷನ್ ಅಸಿಸ್ಟೆಂಟ್ ಆಗಿ ನಿವೇದಿತಾ ಕೆಲಸ ಮಾಡುತ್ತಿದ್ದಾರೆ. ಬಿಗ್‌ಬಾಸ್ ವಿನ್ನರ್ ಕಿರೀಟ ಪಡೆದುಕೊಂಡ ಬಳಿಕ ಚಂದನ್ ಅವರನ್ನು ಹಲವು ಆಫರ್ಸ್ ಹುಡುಕಿಕೊಂಡು ಬರುತ್ತಿವೆ. ಇನ್ನು ನಿವೇದಿತಾ ಫ್ಯಾಷನ್ ಸೆನ್ಸ್‌ಗೆ ಮನಸೋತ ಚಂದನ್ ಗೊಂಬೆ ಗೊಂಬೆ ಎಂಬ ಹಾಡು ಬರೆದು ಸಂಗೀತ ಸಂಯೋಜಿಸಿ ಹಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸ್ನೇಹಿತರಾಗಿ ಪರಿಚಯವಾಗಿ ಬಿಗ್‌ಬಾಸ್ ಮನೆಯಲ್ಲಿ ಸುಮಾರು ಮೂರು ತಿಂಗಳ ಕಾಲ ಜೊತೆಯಾಗಿದ್ದ ಈ ಇಬ್ಬರಲ್ಲಿ ಅಲ್ಲಿಯೇ ಪ್ರೀತಿ ಚಿಗುರಿದ್ದು ಈ ಬಗ್ಗೆ ಹಲವು ಸಂದರ್ಭಗಳಲ್ಲಿ ಇವರಿಬ್ಬರ ಕಾಲೆಳೆದರೂ ಇಬ್ಬರೂ ಒಪ್ಪಿಕೊಂಡಿರಲಿಲ್ಲ.
