ನಿತ್ಯಾ ಮನೆನ್ ಅವರ ವೃತ್ತಿ ಜೀವನ ಪ್ರಾರಂಭವಾದದ್ದು ದ ಮಂಕಿ ಹೂ ನ್ಯೂ ಮಚ್ ಭಾರತೀಯ ಇಂಗ್ಲೀಷ್ ಚಿತ್ರದಿಂದ. ಮಲಯಾಳಂ ತೆಲುಗುತಮಿಳು ಚಿತ್ರರಂಗದಲ್ಲಿ ಅಪಾರ ಕೀರ್ತಿಯನ್ನು ಗಳಿಸಿಕೊಂಡಿದ್ದು ಆದರೆ ನಿತ್ಯಾ ಒರ್ವ ಕನ್ನಡತಿ ಅದೆಷ್ಟೋ ಮಂದಿಗೆ ಗೊತ್ತಿರ್ಲಿಕ್ಕಿಲ್ಲ ನಿತ್ಯಾ ಅವರು ಬಹಳ ಚೆನ್ನಾಗಿ ಕನ್ನಡ ಮಾತನಾಡುತ್ತಾರೆಂದು. ಹೌದು ನಿತ್ಯಾ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ. ತಮ್ಮ ಶಾಲಾ ದಿವಸವನ್ನು ಬೆಂಗಳೂರಿನ ಇಂದಿರಾ ನಗರದ ಪೂರ್ಣಪ್ರಜ್ಞ ಶಾಲೆಯಲ್ಲಿ ಕಳೆದಿದ್ದು ಶಾಲೆಯಲ್ಲೆಲ್ಲ ಕನ್ನಡದಲ್ಲೆ ಅಭ್ಯಾಸ ಮಾಡಿರುತ್ತಾರೆ ಮತ್ತು ನಿತ್ಯಾ ಅವರಿಗೆ ಕನ್ನಡ ಭಾಷೆಯೊಂದೆ ಓದಲು ಮತ್ತು ಬರೆಯಲು ಬರುವುದು ಎಂಬುದು ವಿಶೇಷ. ಆದರೆ ಸಾಕಷ್ಟು ಕಲಾವಿದರು ಹಾಗೂ ಅಭಿಮಾನಿಗಳು ನಿತ್ಯಾ ಅವರ ಸೌಂದರ್ಯವನ್ನು ನೋಡಿ ಈಕೆ ಕೇರಳದವರು ಎಂದು ಕೊಂಡಿದ್ದಾರೆ.
ಇದಕ್ಕೆ ಪ್ರತ್ಯಕ್ಷ ಉದಾಹರಣೆ ಎಂದರೆ ಒಮ್ಮೆ ಮೈನಾ ಸಿನಿಮಾದ ಚಿತ್ರಿಕರಣದ ವೇಳೆ ನಿತ್ಯಾ ಸಂಭಾಷಣೆಯನ್ನು ಕನ್ನಡದಲ್ಲಿ ಬರೆದು ಅಭ್ಯಾಸ ಮಾಡುತ್ತಿರುತ್ತಾರೆ ಅದೇ ಚಿತ್ರದಲ್ಲೇ ಅಭಿನಯಿಸುತ್ತಿದ್ದ ಬಹು ಭಾಷಾ ನಟಿ ಸುಹಾಸಿನಿ ಅವರು ನೀವು ಯಾಕೆ ಮಲಯಾಳಂನಲ್ಲಿ ಅಭ್ಯಾಸ ಮಾಡದೆ ಕನ್ನದಲ್ಲಿ ಮಾಡುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ ಇದನ್ನು ಕೇಳಿ ಗೊಂದಲಗೊಂಡ ನಿತ್ಯಾ ಮೇಡಂ ನಾನು ಕನ್ನಡತಿ ಮಲಯಾಳಂ ನನ್ನ ಮಾತೃ ಭಾಷೆಯಲ್ಲ ಎಂದು ಉತ್ತರಿಸಿದ್ದರು.ಈ ಹೇಳಿಕೆಯಿಂದ ಕನ್ನಡಿಗರ ಮನಸ್ಸಲ್ಲಿ ನಿತ್ಯ ನೆಲೆಯೂರಿ ಬಿಟ್ಟರು.
