ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ನಯನತಾರಾ ಸಿನಿಮಾ ವಿಷಯದಲ್ಲಿ ಹೇಗೆ ಸುದ್ದಿಯಲ್ಲಿರುತ್ತಾರೋ ಹಾಗೆಯೇ ಅವರ ವಯಕ್ತಿಕ ಜೀವನದ ಬಗ್ಗೆಯೂ ಕೂಡ ಹಲವಾರು ವಿಷಯಗಳು ಕೇಳಿಬರುತ್ತವೆ. ಸಧ್ಯಕ್ಕೆ ಸುದ್ದಿಯಲ್ಲಿರುವ ವಿಷಯ ನಯನತಾರಾ ಮದುವೆ. ಮೊನ್ನೆಯಷ್ಟೇ ನಯನತಾರ ಮತ್ತು ವಿಘ್ನೇಶ್ ಶಿವನ್ ಜೋಡಿಯ ಮದುವೆ ಕೊನೆಗೂ ನೆರವೇರಿದೆ.
ಹೌದು ನಿರ್ದೇಶಕ ವಿಗ್ನೇಶ್ ಶಿವನ್ ಹಾಗೂ ನಯನತಾರಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಷಯ ಎಲ್ಲರಿಗೂ ಗೊತ್ತಿತ್ತು. ಸಾರ್ವಜನಿಕವಾಗಿ ಈ ಜೋಡಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದು 2020 ಹೊಸ ವರ್ಷದಲ್ಲಿ ಫಾರಿನ್ ಟ್ರಿಪ್ ಗೆ ಜೊತೆಯಾಗಿ ಹೋಗಿದ್ದರು ಇವರಿಬ್ಬರ ಟ್ರಿಪ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇನ್ನು ವಿಗ್ನೇಶ್ ಶಿವನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹಾಗೂ ನಯನತಾರಾ ಅವರ ಫೋಟೋಗಳನ್ನು ಹಂಚಿಕೊಂಡು ಆಕೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದು 8 ವರ್ಷಗಳಿಂದ ಈ ಜೋಡಿಗೆ ಪರಿಚಯವಿತ್ತು. ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ ನಾನಂ ರೌಡಿ ಧಾನ್ ಸಿನಿಮಾದಲ್ಲಿ ನಯನತಾರ ಹೀರೋಯಿನ್ ಆಗಿದ್ದು ಆಗಿನಿಂದ ಈ ಜೋಡಿಗೆ ಪರಿಚಯವಾಗಿ ಪರಿಚಯ ಪ್ರೀತಿಯಾಯಿತು. ಹೌದು ಇವರಿಬ್ಬರು 7 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು ಈ ಜೋಡಿ ಮದುವೆ ಆಗಬಹುದು ಎನ್ನುವ ವಿಚಾರ ಅಭಿಮಾನಿಗಳಿಗೆ ಖಾತ್ರಿಯಾದ ಬಳಿಕ ಈ ಜೋಡಿಯ ಮದುವೆ ಯಾವಾಗ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಹೌದು 2020ರ ಬಳಿಕ ಇವರ ಮದುವೆ ಯಾವಾಗ ಆಗುತ್ತದೆ ಎನ್ನುವ ಕುತೂಹಲವೂ ಇತ್ತು.
ಕೆಲವು ತಿಂಗಳುಗಳ ಹಿಂದೆ ಈ ಜೋಡಿ ಜೂನ್ ತಿಂಗಳಿನಲ್ಲಿ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದ್ದು ಮೊದಲಿಗೆ ಇವರಿಬ್ಬರು ತಿರುಪತಿ ದೇವಸ್ಥಾನದಲ್ಲಿ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಈ ಜೋಡಿ ನಿಗದಿಯಾದ ಹಾಗೆ ಅಭಿಮಾನಿಗಳಿಗೆ ಸುದ್ದಿಗಳು ಕೇಳಿಬಂದ ರೀತೀಯಲ್ಲೇ, ಜೂನ್ 9ರಂದು ತಮಿಳುನಾಡಿನ ಮಹಾಬಲಿಪುರಂ ನಲ್ಲಿ ಮದುವೆ ಆಗಿದ್ದಾರೆ.ಈ ಜೋಡಿಯ ಮದುವೆಗೆ ಕೆಲವೇ ಕೆಲವು ಆಪ್ತರಿಗೆ ಹಾಗೂ ಕುಟುಂಬದವರಿಗೆ ಮಾತ್ರ ಆಮಂತ್ರಣ ಇತ್ತು ಮಾಧ್ಯಮದವರನ್ನು ಸಹ ಮದುವೆಗೆ ಕರೆದಿರಲಿಲ್ಲ. ಮದುವೆಗೆ ಬರುವ ಗೆಸ್ಟ್ ಗಳು ಫೋಟೋ ತೆಗೆಯಬಾರದು ಪೇಸ್ಟಲ್ ಥೀಮ್ ಡ್ರೆಸ್ ಧರಿಸಬೇಕು ಎಂದು ಕಂಡೀಷನ್ ಸಹ ಇತ್ತು.
