ಪವಿತ್ರ ಲೋಕೇಶ್ ಅವರ ಮೂರನೆ ಮದುವೆ ಬಗ್ಗೆ ಕೊನೆಗೂ ಬಾಯಿಬಿಟ್ಟ ತಮ್ಮ ಆದಿ... ಹೊರಬಂತು ನಿಜ ನೋಡಿ

 

ಸಾಮಾನ್ಯವಾಗಿ ಈ ಸಿನಿಮಾರಂಗದಲ್ಲಿ ಪ್ರೀತಿ ಪ್ರೇಮ ಡೇಟಿಂಗ್ ಬ್ರೇಕಪ್ ಹಾಗೂ ಮದುವೆ ವಿಚಾರಗಳು ಆಗಾಗ ಸುದ್ದಿಯಾಗುತ್ತಲ್ಲೇ ಇರುತ್ತದೆ. ಹೌದು ಹಾಗೆಯೇ ಪ್ರೀತಿಗೆ ಯಾವುದೇ ಮಿತಿ ಇರುವುದಿಲ್ಲ. ಜಾತಿ ಧರ್ಮ ಗಡಿಯನ್ನು ಕೂಡ ಮೀರಿರುತ್ತೆ. ಸದ್ಯ ಇದೀಗ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಹಿರಿಯ ನಟನ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಟಾಲಿವುಡ್‌ನ ಹಿರಿಯ ನಟ 62 ವರ್ಷದ ವಿಕೆ ನರೇಶ್ ಬಾಬು ಹಾಗೂ ಕನ್ನಡದ ಖ್ಯಾತ ನಟಿ ತೆಲುಗು ಚಿತ್ರರಂಗದಲ್ಲೂ ಕೂಡ ಅಪಾರವಾಗಿ ಮಿಂಚಿರುವ 43 ವರ್ಷದ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ ಎನ್ನುವ ಗಾಸಿಪ್ ಟಾಲಿವುಡ್ ಪಾಳ್ಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಹೌದು ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಬಾಬು ಇಬ್ಬರೂ ಕೂಡ ಪ್ರೀತಿಸುತ್ತಿದ್ದಾರೆ ಎನ್ನುವ ಮಾತು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದು ಅಲ್ಲದೇ ಇಬ್ಬರೂ ಕೂಡ ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿತ್ತು. ಹೌದು ಆದರೀಗ ಇವರಿಬ್ಬರು ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು ಪವಿತ್ರಾ ಮತ್ತು ನರೇಶ್ ಇಬ್ಬರು ಕೂಡ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಹೌದು ಸಿನಿಮಾದಿಂದ ಪ್ರಾರಂಭವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿದ್ದು ತದನಂತರ ಇಬ್ಬರು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದು ಸದ್ಯ ಇದೀಗ ಮದುವೆಯಾಗಿದ್ದಾರೆ ಎನ್ನಲಾಗಿದೆ.

ಇನ್ನು ಇತ್ತೀಚೆಗೆ ಪವಿತ್ರಾ ಲೋಕೇಶ್ ಹಾಗೂ ನರೇಶ್ ಬಾಬು ಇಬ್ಬರು ಮಹಾಬಲೇಶ್ವರ ದೇವಸ್ಥಾನಕ್ಕೆ ಜೊತೆಯಾಗಿ ಭೇಟಿ ನೀಡಿದ್ದು ಇಬ್ಬರು ಸ್ವಾಮೀಜಿಯನ್ನು ಭೇಟಿಯಾಗಿ ಬಳಿಕ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹೌದು ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೇಕೇಶ್ ಹೆಚ್ಚಾಗಿ ನರೇಶ್ ಜೊತೆ ಕಾಣಿಸಿಕೊಳ್ಳುತ್ತಿದ್ದು ಯಾವುದೇ ಕ್ರಾರ್ಯಕ್ರಮಕ್ಕಾದರೂ ಕೂಡ ಜೊತೆಯಲ್ಲೇ ಎಂಟ್ರಿ ಕೊಡುತ್ತಿದ್ದರು. ಅಲ್ಲದೇ ಇತ್ತೀಚಿಗೆ ನಡದೆ ಪವಿತ್ರಾ ಲೋಕೇಶ್ ಹುಟ್ಟುಹಬ್ಬದ ಸಂಭ್ರಮದಲ್ಲೂ ಕೂಡ ನರೇಶ್ ಜೊತೆಗಿದ್ದು ಇಬ್ಬರು ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.