ಅಪ್ಪು ಮನೆ ಬಿಟ್ಟು ಹೋಗ್ತೀನಿ ಎಂದ ಬಾಡಿಗಾರ್ಡ್.. ಅಶ್ವಿನಿಯವರ ಕೊನೆಯದಾಗಿ ಏನು ಹೇಳಿ ಕಳಿಸಿದ್ದಾರೆ ನೋಡಿ

 

ಕರ್ನಾಟಕದ ಪ್ರೀತಿಯ ಅಪ್ಪು ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿ 7 ತಿಂಗಳುಗಳು ಕಳೆದಿದ್ದು ಆದರೆ ಅಪ್ಪು ಅವರ ಮೇಲೆ ಜನರಿಗಿರುವ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.ಹೌದು ಅಪ್ಪು ಅವರಿದ್ದಾಗ ಜನರು ಎಷ್ಟು ಪ್ರೀತಿ ಕೊಡುತ್ತಿದ್ದರು ಅಪ್ಪು ಅವರು ಹೋದಮೇಲೂ ಸಹ ಅಷ್ಟೇ ಪ್ರೀತಿಯನ್ನ ಅವರ ಮೇಲೆ ಇಟ್ಟುಕೊಂಡಿದ್ದಾರೆ. ಹೌದು ಇದಕ್ಕೆ ಸಾಕ್ಷಿ ಅಪ್ಪು ಅವರು ಇನ್ನಿಲ್ಲವಾದ ಮೇಲು ಅವರ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ದಾಖಲೆಗಳು. ಇನ್ನು ಈಗಾಗಲೇ ನಿಮಗೆ ಇದರ ಬಗ್ಗೆ ಗೊತ್ತಿರುತ್ತದೆ.

ಅಪ್ಪು ಅವರು ಎಲ್ಲರನ್ನು ಒಂದೇ ರೀತಿ ಕಾಣುತ್ತಿದ್ದರು. ಹೌದು ತಮ್ಮ ಮನೆಯಲ್ಲಿ ಕೆಲಸ ಮಾಡುವವರು ತಮ್ಮ ಜೊತೆ ಕೆಲಸ ಮಾಡುವವರು ಎಲ್ಲರನ್ನು ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಮತ್ತು ಬಹಳ ಗೌರವಯುತವಾಗಿ ಅವರನ್ನೆಲ್ಲ ನೋಡಿಕೊಳ್ಳುತ್ತಿದ್ದರು.ಇನ್ನು ಅಪ್ಪು ಅವರ ಜೊತೆಯಲ್ಲೇ ಸದಾ ಇರುತ್ತಿದ್ದ ವ್ಯಕ್ತಿಗಳಲ್ಲಿ ಒಬ್ಬರು ಅವರ ಬಾಡಿ ಗಾರ್ಡ್ ಚಲಪತಿ ಅವರು. ಹೌದು ಅಪ್ಪು ಅವರು ಆ ದಿನ ಮನೆಯಿಂದ ಆಸ್ಪತ್ರೆಗೆ ಹೋಗುವವರೆಗೂ ಕೂಡ ಚಲಪತಿ ಅವರು ಜೊತೆಯಲ್ಲೇ ಇದ್ದರು. ಅಪ್ಪು ಅವರನ್ನು ದೇವರಂತೆ ಕಾಣುತ್ತಿದ್ದರು. ಅಪ್ಪು ಅವರು ಎಲ್ಲಿಗೆ ಹೋದರು ಚಲಪತಿ ಅವರು ಜೊತೆಯಾಗಿರುತ್ತಿದ್ದರು.

ಇನ್ನು ಇಷ್ಟು ವರ್ಷಗಳ ಕಾಲ ಅಪ್ಪು ಅವರು ಸೇಫ್ ಆಗಿದ್ದರು ಅಂದರೆ ಚಲಪತಿ ಅವರು ಸಹ ಮುಖ್ಯ ಕಾರಣ ಆಗಿದ್ದರು. ಹೌದು ಅಪ್ಪು ಅವರ ಬೆಂಗಾವಲಾಗಿ ಸದಾ ಇರುತ್ತಿದ್ದರು ಚಲಪತಿ. ಅಪ್ಪು ಅವರು ಕೂಧ ಚಲಪತಿ ಅವರನ್ನು ಒಬ್ಬ ಬಾಡಿ ಗಾರ್ಡ್ ಆಗಿ ಅಲ್ಲದೆ ತಮ್ಮ ಕುಟುಂಬದ ಒಬ್ಬ ಸದಸ್ಯರಂತೆ ಸ್ನೇಹಿತರಂತೆ ಅವರನ್ನು ನೋಡಿಕೊಳ್ಳುತ್ತಿದ್ದರು.ಊಟ ಆಯ್ತಾತಿಂಡಿ ಆಯ್ತಾ ಎಂದು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಪವರ್ ಸ್ಟಾರ್ ಎನ್ನುವ ಯಾವುದೇ ಅಹಂ ಅವರಿಗೆ ಇರಲಿಲ್ಲ. ಇನ್ನು ಇತ್ತ ಚಲಪತಿ ಅವರು ಸಹ ಅಪ್ಪು ಅವರನ್ನು ದೇವರು ಎಂದೇ ಭಾವಿಸುತ್ತಿದ್ದು ಸಂಬಳ ಎಷ್ಟೇ ಇರಲಿ ದೇವರ ಜೊತೆ ಇರುವ ಅದೃಷ್ಟ ಯಾರಿಗೆ ಸಿಗುತ್ತದೆ.