ಸಾಮಾನ್ಯವಾಗಿ ನಟಿ ಪವಿತ್ರಾ ಲೋಕೇಶ್ ರವರ ಬಗ್ಗೆ ಸಿನಿರಸಿಕರಿಗೆಲ್ಲರಿಗೂ ಕೂಡ ಗೊತ್ತೇ ಇರುತ್ತೆ. ಹೌದು ಕನ್ನಡದ ಖ್ಯಾತ ಪೋಷಕ ನಟ ಮೈಸೂರು ಲೋಕೇಶ್ ಅವರ ಪುತ್ರಿ ಇವರಾಗಿದ್ದು ಸೌಂದರ್ಯ ಅಭಿನಯ ಪ್ರತಿಭೆ ಜೊತೆ ಖ್ಯಾತ ನಟಿಯರಿಗೆ ಇರಬೇಕಾದ ಎಲ್ಲಾ ಅರ್ಹತೆಯೂ ಕೂಡ ಪವಿತ್ರಾ ಲೋಕೇಶ್ ಅವರಿಗಿತ್ತು. ಆದರೆ ಮಾತ್ರ ಕನ್ನಡ ಚಿತ್ರರಂಗದಲ್ಲಿ ಪವಿತ್ರಾ ಲೋಕೇಶ್‌ಗೆ ಅವಕಾಶಗಳು ಸಿಗಲೇ ಇಲ್ಲ. ಹೌದು ಸಿಕ್ಕ ಸಣ್ಣ ಪುಟ್ಟ ಪಾತ್ರಗಳೆಲ್ಲ ಅವರ ಹೊಟ್ಟೆಪಾಡಿಗಾಗಿ ಮಾಡಿದ್ದಾಗಿತ್ತೇ ಹೊರತು ಅವರೊಳಗಿನ ನಟಿಯನ್ನು ಗುರುತಿಸುವ ಕೆಲಸ ಆಗಲೇ ಇಲ್ಲ. ಹೌದು ಇಂತಹ ಪವಿತ್ರಾ ಲೋಕೇಶ್ ಈಗ ಪರಭಾಷೆಯಲ್ಲಿ ಸ್ಟಾರ್ ಅಮ್ಮನಾಗಿ ಇದೀಗ ಮಿಂಚುತ್ತಿದ್ದಾರೆ.
ಹೌದು ಪವಿತ್ರಾ ಲೋಕೇಶ್ ತಂದೆ ಮೈಸೂರು ಲೋಕೇಶ್ ಕನ್ನಡ ಚಿತ್ರರಂಗದಲ್ಲಿ ಆಗಲೇ ಸಾಕಷ್ಟು ಹೆಸರು ಮಾಡಿದ್ದು ಹೀಗಾಗಿ ಅವರ ಮಗಳು ಪವಿತ್ರಾ ಲೋಕೇಶ್ ಸುಲಭವಾಗೇ ಚಿತ್ರರಂಗಕ್ಕೆ ಬರಬಹುದಿತ್ತು. ಹೌದು ಇದರ ಜೊತೆಗೆ ನಟಿಯರಿಗೆ ಇರಬೇಕಾದ ಸೌಂದರ್ಯ ಅಭಿನಯ ಪ್ರತಿಭೆ ಕೂಡ ಅವರಿಗಿತ್ತು. ಹೌದು ಆದರೆ ಇಲ್ಲಿ ಲೆಕ್ಕಾಚಾರ ಉಲ್ಟಾ ಆಗಿದ್ದು ನಿನ್ನೆ ಮಗಳು ನಟಿಯಾಗ್ತಾಳೆ ಆಕೆಯನ್ನು ಸಿನಿಮಾ ರಂಗಕ್ಕೆ ಕರ್ಕೊಂಡು ಬಾ ಎಂದವರು ಎಷ್ಟೋ ಜನ. ಆದರೆ ಅವಕಾಶ ಕೊಟ್ಟವರು ಯಾರೂ ಇಲ್ಲವಂತೆ.
ಹೀಗೆ ಚಿತ್ರರಂಗಕ್ಕೆ ನಟಿ ಪವಿತ್ರಾ ಲೋಕೇಶ್ ಬರುವ ಮುನ್ನವೇ ತಂದೆ ಮೈಸೂರು ಲೋಕೇಶ್ ಪ್ರಾಣ ಕಳೆದುಕೊಂಡಿದ್ದು ಖ್ಯಾತ ಕಂಠದಾನ ಕಲಾವಿದೆ ಜೊತೆಗಿನ ಸ್ನೇಹದಿಂದಾಗಿ ಅವರ ಇಮೇಜ್‌ಗೂ ಧಕ್ಕೆಯಾಗಿತ್ತು. ಹೌದು ಇಂತಹ ಸಂದರ್ಭದಲ್ಲಿ ಪವಿತ್ರಾ ಚಿತ್ರರಂಗಕ್ಕೆ ಬರುವುದು ದೂರದ ಮಾತಾಗಿದ್ದು ಆದರೆ ಅವರನ್ನು ಚಿತ್ರರಂಗಕ್ಕೆ ಕರೆತಂದಿದ್ದು ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್. ಹೌದು ಅಬಂರೀಶ್ ರವರು ಪವಿತ್ರಾ ಲೋಕೇಶ್ ಅವರೊಳಗಿದ್ದ ನಟಿಯನ್ನು ಗುರುತಿಸಿದ್ದು ಸಿನಿಮಾದಲ್ಲಿ ನಟಿಸುವಂತೆ ಅವರಿಗೆ ಸಲಹೆ ನೀಡಿದ್ದರು
