ಅದೊಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹಳ ಒಗ್ಗಟ್ಟಿದ್ದು ಇವತ್ತಿಗೆ ಆ ಒಗ್ಗಟ್ಟು ಇಲ್ಲ ಎಂದು ನಾವು ಹೇಳುತ್ತಿಲ್ಲ. ಹೌದು ಆದರೂ ಎಲ್ಲೋ ಒಂದು ಕಡೆ ಎಲ್ಲಾ ಸ್ಟಾರ್ ನಟರು ಅವರ ಪಾಡಿಗೆ ಅವರು ಇದ್ದು ಬೇರೆಯವರ ಜೊತೆ ಬೆರೆಯುತಿಲ್ಲ ಎನ್ನುವ ಮಾತುಗಳು ಕೆಲವೊಮ್ಮೆ ಕೇಳಿಬರುತ್ತವೆ. ಹೌದು ಒಂದು ಕಾಲದಲ್ಲಿ ಡಿಬಾಸ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರ ಸ್ನೇಹ ಹೇಗಿತ್ತು ಎಂದು ತಮಗೆ ಗೊತ್ತೇ ಇದೆ.ಆದರೆ ಇದೀಗ ಸುದೀಪ್ ಹಾಗು ದರ್ಶನ್ ಅವರು ಸ್ನೇಹಿತರಾಗಿ ಉಳಿದಿಲ್ಲ. ಹೌದು ಅವರ ನಡುವೆ ಏನೆಲ್ಲಾ ಆಯಿತು ಎಂದು ನಿಮಗೆ ಗೊತ್ತೇ ಇದೆ.
ಆದರೆ ಖುಷಿ ಪಡುವ ವಿಚಾರ ಏನಪ್ಪಾ ಅಂದರೆ ನಮ್ಮ ಡಿಬಾಸ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಬಹಳ ಒಳ್ಳೆಯ ಸ್ನೇಹಿತರು. ಇವರಿಬ್ಬರು ಚಿತ್ರರಂಗಕ್ಕೆ ಹೆಚ್ಚು ಕಡಿಮೆ ಸೊನ್ನೆಯಿಂದಲೇ ಶುರು ಮಾಡಿದ್ದು ಇವತ್ತಿಗೂ ಇವರಿಬ್ಬರೂ ಒಳ್ಳೆಯ ಗೆಳೆಯರಾಗಿದ್ದಾರೆ. ಇನ್ನು ಮಂಡ್ಯದ ಚುನಾವಣೆಯ ಸಮಯದಲ್ಲಿ ಡಿಬಾಸ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ದೊಡ್ಡ ಮಟ್ಟದಲ್ಲಿ ಸುಮಲತಾ ಅವರ ಪರ ಪ್ರಚಾರ ಮಾಡಿದ್ದು ಆ ಸಮಯದಲ್ಲಿ ದರ್ಶನ್ ಅವರು ಹಲವಾರು ಭಾರಿ ಮಾಧ್ಯಮದ ಮುಂದೆ ಯಶ್ ಅವರನ್ನು ನಮ್ ಹೀರೊ ಎಂದು ಕರೆಯುತಿದ್ದರು.
ಹೌದು ಯಶ್ ಅವರು ಕೂಡ ದರ್ಶನ್ ಅವರನ್ನು ದರ್ಶನ್ ಸರ್ ಎಂದು ಕರೆಯುತಿದ್ದು ಇನ್ನೂ ದರ್ಶನ್ ಅವರ ರಾಬರ್ಟ್ ಸಿನಿಮಾ ಬಿಡುಗಡೆಯಾದ ಬಳಿಕ ಒಂದು ಮಾಧ್ಯಮದ ಸಂದರ್ಶನದಲ್ಲಿ ದರ್ಶನ್ ಅವರಿಗೆ ನೀವು ಯಶ್ ಜೊತೆ ಸಿನಿಮಾ ಮಾಡ್ತೀರಾ ಎಂದು ಕೇಳಿದಕ್ಕೆ ದರ್ಶನ್ ಅವರು ಹೇಳಿದ್ದೇನು ಗೊತ್ತಾ? ಹೌದು ಆ ಸಂದರ್ಶನದಲ್ಲಿ ಡಿಬಾಸ್ ದರ್ಶನ್ ಅವರು ಈ ಪ್ರಶ್ನೆಗೆ ಕೊಟ್ಟ ಉತ್ತರವೇನು ಗೊತ್ತಾ? ದರ್ಶನ್ ಅವರು ನಮ್ ಹೀರೊ ಸರ್ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ನಿರ್ದೇಶಕರು ಬಂದಾಗ ಅಂತಹ ಒಳ್ಳೆಯ ಒಂದು ಕಥೆ ಬಂದರೆ ಖಂಡಿತವಾಗಿ ಯಶ್ ಜೊತೆ ಸಿನಿಮಾ ಮಾಡ್ತೀನಿ ಎಂದು ಡಿಬಾಸ್ ದರ್ಶನ್ ಅವರು ಯಶ್ ಅವರ ಜೊತೆ ಸಿನಿಮಾ ಮಾಡ್ತೀರಾ ಎಂದು ಕೇಳಿದಕ್ಕೆ ಉತ್ತರವನ್ನು ಕೊಟ್ಟಿದ್ದಾರೆ.
ಈಗ ಇಷ್ಟು ತಿಂಗಳ ನಂತರ ಈ ವಿಡಿಯೋ ಮತ್ತೆ ವೈರಲ್ ಆಗಿದ್ದು ಯಶ್ ಹಾಗು ದರ್ಶನ್ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇನ್ನೂ ಇತ್ತೀಚಿಗೆ ಕೇಜಿಫ್೨ ಬಿಡುಗಡೆಯಾದ ಬಳಿಕ ಯಶ್ ಅವರಿಗೆ ಒಂದು ಸಂದರ್ಶನದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಿಮ್ಮ್ಮ ಫೆವರೇಟ್ ಹೀರೊ ಯಾರು ಎಂದು ಕೇಳಿದಕ್ಕೆ ಯಶ್ ಅವರು ಆಫ್ ಕೋರ್ಸ್ ಸರ್ ದರ್ಶನ್ ಸರ್ ಅವರನ್ನು ನೋಡಿ ನಾನು ಬೆಳೆದಿದ್ದೇನೆ ಅವರ ಒಂದೇ ಒಂದು ಸಿನಿಮಾವನ್ನು ಮಿಸ್ ಮಾಡುತ್ತಿರಲಿಲ್ಲ.
ಹೌದು ಮೈಸೂರಿನಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದೆವು ಎಂದು ರಾಕಿಂಗ್ ಸ್ಟಾರ್ ಯಶ್ ಅವರು ದರ್ಶನ್ ಬಗ್ಗೆ ಹೇಳಿದ್ದಾರೆ.ಸದ್ಯ ಇದೀಗ ನಮ್ಮ ಡಿಬಾಸ್ ದರ್ಶನ್ ಅವರು ತಮ್ಮ ಬಹು ನಿರೀಕ್ಷೆಯ ಸಿನಿಮಾದ ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದು ಈ ಚಿತ್ರ ಇದೇ ವರ್ಷ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. ಹೌದು ಇನ್ನೂ ಇತ್ತ ರಾಕಿಂಗ್ ಸ್ಟಾರ್ ಯಶ್ ಅವರು ಕೇಜಿಫ್ ಚಾಪ್ಟರ್ 3 ಚಿತ್ರಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
