ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದಾದ ಮಕ್ಕಳು ಐರಾ ಹಾಗೂ ಯಥರ್ವ. ಈ ಸ್ಟಾರ್ ಕಿಡ್ಸ್ ಗಳು ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಾ ಇರುತ್ತಾರೆ. ಹೌದು ಸ್ಟಾರ್ ಕಿಡ್ಸ್ ಗಳು ಅಂದಮೇಲೆ ಕೇಳಬೇಕೆ ಒಂದಲ್ಲ ಒಂದು ವೀಡಿಯೋ ಹಾಗೂ ಪೋಸ್ಟ್ ಗಳನ್ನು ಯಶ್ ಹಾಗೂ ರಾಧಿಕಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಸಂತೋಷ ಪಡಿಸುತ್ತಿದ್ದಾರೆ. ಇನ್ನು ಮಗಳು ಆಗಿರುವ ಐರಾ ತುಂಬಾ ಕ್ಯೂಟ್. ಪ್ರಾರಂಭದಿಂದಲೂ ತನ್ನ ಮುದ್ದು ಮುದ್ದಾದ ಮಾತು ಕ್ಯೂಟ್ ಲುಕ್ ನಿಂದ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾಳೆ.ರಾಧಿಕಾ ಸಿನಿಮಾದಿಂದ ದೂರಿದ್ದು ಐರಾ ಹಾಗೂ ಯಥರ್ವ ಇಬ್ಬರು ಮಕ್ಕಳ ಜವಾಬ್ದಾರಿಯನ್ನು ತಾಯಿಯಾಗಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಮುದ್ದು ಮಕ್ಕಳಾದ ಐರಾ ಹಾಗೂ ಯಥರ್ವ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಂದಹಾಗೆ ರಾಕಿಂಗ್ ದಂಪತಿ ಯಶ್-ರಾಧಿಕಾ ಅವರಿಗೆ ಐರಾ ಹಾಗೂ ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಕಿರುತೆರೆಯಲ್ಲಿ ನಟಿಸುತ್ತಿದ್ದ ನಂದಗೋಕುಲ ಧಾರಾವಾಹಿ ಮೂಲಕ ನಟ ಯಶ್ ಮತ್ತು ನಟಿ ರಾಧಿಕಾ ನಡುವೆ ಪ್ರೀತಿ ಚಿಗುರಿತು.ಅನಂತರ ಇವರಿಬ್ಬರಿಗೆ ಬೆಳ್ಳಿ ಪರದೆ ಮೇಲೆ ನಟಿಸುವ ಅವಕಾಶ ಒದಗಿ ಬಂತು. ಮೊಗ್ಗಿನ ಮನಸ್ಸು ಚಿತ್ರದಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ಜೋಡಿಯಾಗಿ ಕಾಣಿಸಿಕೊಂಡಿದ್ದರು.
ಸಿನಿ ಪರದೆಯ ಮೇಲೆ ಜೋಡಿಯಾದ ರಾಧಿಕಾ ಹಾಗೂ ಯಶ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆದರು. ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಿರುತೆರೆಯಿಂದ ಒಂದಾದ ಈ ಜೋಡಿ ಬೆಳ್ಳಿತೆರೆ ಮೇಲೂ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇದೀಗ ಮುದ್ದು ಮಕ್ಕಳ ಜೊತೆಗೆ ಸಮಯ ಕಳೆಯುತ್ತಿದ್ದಾರೆ ರಾಧಿಕಾ. ಸದಾ ಮಕ್ಕಳ ಹೊಸ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ.
