ಕನ್ನಡ ಚಿತ್ರರಂಗ ಕಂಡಂತಹ ಖ್ಯಾತ ನಟರಲ್ಲಿ ಮೈಸೂರು ಲೋಕೇಶ್ ಅವರು ಕೂಡ ಒಬ್ಬರಾಗಿದ್ದು ಖಳನಟನ ಪಾತ್ರ ಹಾಸ್ಯ ಪಾತ್ರ ಎರಡು ರೀತಿಯ ಪಾತ್ರಗಳಲ್ಲಿಯೂ ಸಹ ನಟಿಸಿ ಕನ್ನಡ ಸಿನಿಪ್ರಿಯರ ಗಮನ ಸೆಳೆದಿದ್ದ ನಟ ಮೈಸೂರು ಲೋಕೇಶ್ ರವರು ಚಿತ್ರರಂಗಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ.ಹೌದು ಆದರೆ ಇದೀಗ ಅವರು ನಮ್ಮೊಂದಿಗಿಲ್ಲ. ಆದರೆ ಅವರ ಇಬ್ಬರು ಮಕ್ಕಳು ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಪವಿತ್ರಾ ಲೋಕೇಶ್ ಹಾಗು ಆದಿ ಲೋಕೇಶ್ ಇಬ್ಬರು ಸಹ ಮೈಸೂರು ಲೋಕೇಶ್ ಅವರ ಮಕ್ಕಳಾಗಿದ್ದಾರೆ.
ಇನ್ನು ನಟಿ ಪವಿತ್ರ ಲೋಕೇಶ್ ಅವರು ಇದೀಗ ಅದ್ಭುತವಾದ ನಟನೆಯ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದು ಆದರೆ ಅವರು ಇಷ್ಟೊಂದು ಖ್ಯಾತಿ ಹಾಗೂ ಈ ಮಟ್ಟಕ್ಕೆ ಏರಲು ಪಟ್ಟ ಕಷ್ಟ ಒಂದೆರಡಲ್ಲ. ಹೌದು ಒಂದು ಕಾಲದಲ್ಲಿ ಸರಿಯಾದ ಅವಕಾಶ ಸಿಗದೆ ಇದ್ದಾಗ ಪವಿತ್ರ ಲೋಕೇಶ್ ಅವರು ಚಿತ್ರರಂಗ ಬಿಟ್ಟು ಬೇರೆ ವಿಭಾಗದಲ್ಲಿ ಕೆಲಸ ಮಾಡಿದ್ದರು.1994 ರಲ್ಲಿ ತಂದೆ ಮೈಸೂರು ಲೋಕೇಶ್ ರವರು ಇದ್ದಕ್ಕಿದ್ದಂತೆ ಕೊನೆಯುಸಿರೆಳೆದಿದ್ದು ಆ ಸಮಯದಲ್ಲಿ ಮನೆ ನಿಭಾಯಿಸಲು ತಾಯಿಗೆ ಕಷ್ಟ ಆಗಿದೆ ಎಂದು ಮನೆಯ ಜವಾಬ್ದಾರಿಯನ್ನು ಅತೀ ಚಿಕ್ಕ ವಯಸ್ಸಿಗೆ ವಹಿಸಿಕೊಂಡರು ನಟಿ ಪವಿತ್ರಾ ಲೋಕೇಶ್ ರವರು.
ಕೇವಲ 16 ನೇ ವಯ್ಯಸ್ಸಿಗೆ ನಟಿ ಪವಿತ್ರಾ ಲೋಕೇಶ್ ರವರು ಬಣ್ಣ ಹಚ್ಚಿದ್ದು ತಂದೆಗೆ ಜನಪ್ರಿಯತೆ ಇದ್ದ ಕಾರಣ ಚಿತ್ರರಂಗ ತನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ ಅವಕಾಶಗಳು ಬಹಳ ಸಿಗುತ್ತದೆ ಎಂದು ಪವಿತ್ರ ಲೋಕೇಶ್ ಭಾವಿಸಿದ್ದರು. ಆದರೆ ನಡೆದಿದ್ದೆ ಬೇರೆ. ಚಿತ್ರರಂಗದಲ್ಲಿ ಅವಕಾಶ ಪಡೆಯುವುದು ಅಂದು ಅವರಿಗೆ ಸಲುಭದ ಮಾತಾಗಿರಲಿಲ್ಲ.ಸಿನಿಮಾದಲ್ಲಿ ಅವಕಾಶಕ್ಕಾಗಿ ಅಲೆಯುತ್ತಿದ್ದಾಗ ಚಿತ್ರರಂಗದ ಸಾಕಷ್ಟು ಜನ ಪವಿತ್ರಾ ಅವರನ್ನು ಬೇರೆ ರೀತಿಯಲ್ಲಿ ನೋಡುತ್ತಿದ್ದರಂತೆ ಹಾಗೂ ಗೊತ್ತಿರುವ ವ್ಯಕ್ತಿಗಳೇ ಕೂಡ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದದ್ದು ಅವರಿಗೆ ನೋವು ಉಂಟು ಮಾಡಿತ್ತು.
