ಚಾರ್ಲಿ ಸಿನಿಮಾ ಇಳಿಸಿದ ರಶ್ಮಿಕಾಗೆ ಕ್ಯಾಕರಿಸಿ ಉಗಿದ FANS....ಇಲ್ಲಿದೆ ನೋಡಿ ವಿಡಿಯೋ

 

ಚಂದನವನದಲ್ಲಿ ಸಿಂಪಲ್ ಸ್ಟಾರ್ ಎಂದೇ ಗುರುತಿಸಿಕೊಂಡಿರುವ ರಕ್ಷಿತ್ ಶೆಟ್ಟಿಯವರ ಬಹುನಿರೀಕ್ಷಿತ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಹೌದು ಈಗಾಗಲೇ ಈ ಸಿನಿಮಾ ನೋಡಿ ಪಾಸಿಟಿವ್ ರೆಸ್ಪಾನ್ಸ್ ನೀಡುತ್ತಿದ್ದಾರೆ. ಇನ್ನು, ರಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘777 ಚಾರ್ಲಿ’ ಸಿನಿಮಾ ಟ್ರೇಲರ್ ಬಿಡುಗಡೆ ಮೇ 16 ರಂದು ಬಿಡುಗಡೆಯಾಗಿತ್ತು. ಟ್ರೇಲರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆಯ ಪ್ರತಿಕ್ರಿಯೆ ಹರಿದು ಬಂದಿದ್ದು ಈ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದರು. ಇತ್ತೀಚಿಗಷ್ಟೇ ಬೆಂಗಳೂರಲ್ಲಿ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆದಿತ್ತು. ವಿಶೇಷ ಎಂದರೆ ಸಿನಿಮಾದಲ್ಲಿ ನಟಿಸಿದ ಶ್ವಾನದಿಂದ ಈ ಟ್ರೇಲರ್ ಲಾಂಚ್ ಮಾಡಿಸಲಾಗಿತ್ತು. ಈ ಟ್ರೇಲರ್ ನೋಡಿ ಸಿನಿ ಪ್ರೇಕ್ಷಕರು ಫಿದಾ ಆಗಿದ್ದರು. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ ಮೊದಲಾದವರು ನಟಿಸಿದ್ದಾರೆ.

ರಕ್ಷಿತ್ ಶೆಟ್ಟಿಯವರು ಒಬ್ಬ ನಟ ಮಾತ್ರವಲ್ಲ ಅತ್ಯುತ್ತಮ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಹೌದು, “ನಮ್ ಏರಿಯಾದಲ್ಲಿ ಒಂದು ದಿನ” ಸಿನಿಮಾದ ಮೂಲಕ ಎಂಟ್ರಿ ಕೊಟ್ಟವರು ರಕ್ಷಿತ್ ಶೆಟ್ಟಿ. ನಟರಕ್ಷಿತ್ ಶೆಟ್ಟಿ ಅವರು ಮೂಲತಃ ಉಡುಪಿಯವರು. ಎಂಜಿನಿಯರಿಂಗ್ ಪದವಿ ಪಡೆದು, ಸುಮಾರು 2 ವರ್ಷಗಳ ಕಾಲ ಅದೇ ಕ್ಷೇತ್ರದಲ್ಲಿ ಕೆಲಸದಲ್ಲಿದ್ದರು. ಆದರೆ ಸಿನಿಮಾರಂಗದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ಇವರು ಎಂಜಿನಿಯರಿಂಗ್ ಉದ್ಯೋಗವನ್ನು ತೊರೆದು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಇವರಿಗೆ ಬಿಗ್ ಬ್ರೇಕ್ ನೀಡಿದ ಸಿನಿಮಾ ” ಸಿಂಪಲ್ಲಾಗ್ ಒಂದು ಲವ್ ಸ್ಟೋರಿ'”. 2013 ರಲ್ಲಿ ಬಿಡುಗಡೆಯಾದ ಹಾಸ್ಯ ಮತ್ತು ಪ್ರಣಯ ಕಥೆಯುಳ್ಳ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಜನರ ಮೆಚ್ಚುಗೆಯನ್ನು ಗಳಿಸಿತ್ತು. ಅದರ ಜೊತೆಗೆ ಸಿನಿಮಾರಂಗಕ್ಕೆ ಒಂದೊಳ್ಳೆ ನಟನು ಎಂಟ್ರಿ ಕೊಟ್ಟಿದ್ದ. ಈ ಸಿನಿಮಾದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಪಾತ್ರಕ್ಕೆ ಹಾಗೂ ಡೈಲಾಗ್ ಡೆಲಿವರಿಯ ಶೈಲಿಗೆ ಮೆಚ್ಚುಗೆ ಕೇಳಿ ಬಂದಿತ್ತು. ಆದಾದ ಬಳಿಕ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.