ಕವಿತಾ, ಚಂದನ್ ಮನೆಯ ಗೃಹಪ್ರವೇಶ!!! ಸಂಭ್ರಮದ ಕ್ಷಣಗಳು ಹೇಗಿತ್ತು ನೋಡಿ

 ಚಂದನ್ ಕುಮಾರ್ ದಂಪತಿಗಳ ಹೊಸ ಮನೆಯ ಗೃಹಪ್ರವೇಶ ಹೇಗಿತ್ತು? ಯಾರೆಲ್ಲಾ ಬಂದಿದ್ದರು ಗೊತ್ತಾ?ಕನ್ನಡ ಕಿರುತೆರೆ ಲೋಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜೊತೆಯಾಗಿ ನಟನಾ ಬದುಕು ಶುರು ಮಾಡಿ ಅಥವಾ ನಟನೆಯಲ್ಲಿಯೇ ಬದುಕನ್ನು ಕಟ್ಟಿಕೊಂಡಿರುವ ಕಲಾವಿದರು ಮದುವೆಯಾಗುತ್ತಿದ್ದಾರೆ. ಇದಕ್ಕೆ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಅವರು ಹೊರತಾಗಿರಲಿಲ್ಲ. ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇದೀಗ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಅದರ ಜೊತೆಗೆ ಆಗಾಗ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾಹಿತಿ ನೀಡುತ್ತಿರುತ್ತಾರೆ. ಹೌದು, ಇದೀಗ ಹೊಸ ಮನೆಯ ಗೃಹಪ್ರವೇಶ ಮಾಡಿಸುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಹಾಗಾದರೆ ಈ ದಂಪತಿಗಳ ಮನೆಯ ಗೃಹಪ್ರವೇಶ ಹೇಗಿತ್ತು, ಯಾರೆಲ್ಲಾ ಬಂದಿದ್ದರು ಎಂದು ತಿಳಿಯಬೇಕೆಂದರೆ ಈ ಸ್ಟೋರಿ ಓದಲೇಬೇಕು.

ಹೌದು, ಇಬ್ಬರೂ ಕೂಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡವರು. ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ ಕವಿತಾ ಹಾಗೂ ಚಂದನ್ ಮನೆ ಮಾತಾಗಿದ್ದರು. ಈ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು. ಆದಲ್ಲದೆ, ಲಕ್ಷ್ಮಿ ಬಾರಮ್ಮ ಸೀರಿಯಲ್ ನಲ್ಲಿ ಕವಿತಾ ಹಾಗೂ ಚಂದನ್ ಅವರು  ಜೊತೆಯಾಗಿ ನಟಿಸುತ್ತಿದ್ದ ವೇಳೆಯಲ್ಲಿ  ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಯೂ ಕೇಳಿ ಬಂದಿತ್ತು. ಹೀಗಾಗಿ ಇವರಿಬ್ಬರೂ ಯಾವುದೇ ಸಂದರ್ಶನಕ್ಕೆ ಹೋದರೂ ಕೂಡ ಅಲ್ಲಿ ಕುರಿತಾದ ಪ್ರಶ್ನೆಗಳು ಇರುತ್ತಿದ್ದವು. ಆದರೆ ಎಲ್ಲಿಯೂ ಕೂಡ ತಮ್ಮಿಬ್ಬರ ರಿಲೇಷನ್ಶಿಪ್ ಬಹಿರಂಗ ಪಡಿಸಲೇ ಇಲ್ಲ.ಆದರೆ ಏಕಾಏಕಿ ಕಳೆದ ವರ್ಷ  ಏಪ್ರಿಲ್ ತಿಂಗಳಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡರು. ಕಳೆದ ವರ್ಷ ಮೇ ತಿಂಗಳಿನಲ್ಲಿ ಮದುವೆಯಾದರು. ಹೌದು, ಕಳೆದ ವರ್ಷ ಮೇ 13 ಹಾಗೂ 14 ರಂದು  ಸರಳವಾಗಿ ಮದುವೆ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಂದಹಾಗೆ, ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿರುವುದರಿಂದ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿತ್ತು. ಹೀಗಾಗಿ ಸರ್ಕಾರದ ನಿಯಮವನ್ನು ಪಾಲಿಸಿಕೊಂಡು ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಾಸ್ಕ್ ಹಾಕಿಕೊಂಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದು ಸಖತ್ ಹೈಲೈಟ್ ಆಗಿತ್ತು.ಮದುವೆಯ ಬಳಿಕ ಕುಕ್ ವಿಥ್ ಕಿರಿಕ್ಕು ಶೋ ನಲ್ಲಿ ಇಬ್ಬರೂ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರಿಗೆ ಮನೋರಂಜನೆ ನೀಡಿದ್ದರು. ಈ ಶೋ ವಿನ್ನರ್ ಆಗಿ ಚಂದನ್ ಕುಮಾರ್ ಅವರು ಹೊರ ಹೊಮ್ಮಿದ್ದರು. ಸದ್ಯಕ್ಕೆ ಚಂದನ್ ಅವರು ಕಿರುತೆರೆ ಹಾಗೂ ಹಿರಿತೆರೆ ಎಂದು ಬ್ಯುಸಿಯಾಗಿದ್ದಾರೆ. ಇತ್ತ ಕವಿತಾ ಗೌಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ, ಈ ವರ್ಷ ಪ್ರೇಮಿಗಳ ದಿನವನ್ನು ಕೂಡ ಆಚರಿಸಲು ಸಾಧ್ಯವಾಗಿಲ್ಲ. ಪ್ರತಿವರ್ಷ ವ್ಯಾಲೆಂಟೈನ್ಸ್ ಡೇ ಅನ್ನು ಈ ಜೋಡಿ  ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುತ್ತಿದ್ದರು. ಆದರೆ ಈ ಬಾರಿ ಸೆಲೆಬ್ರೇಟ್ ಮಾಡಿಲ್ಲದೆ ಇರುವುದನ್ನು ಗಮನಿಸಿದ ಅಭಿಮಾನಿಯೊಬ್ಬರು,  ಈ ವರ್ಷ ಯಾಕೆ ಪ್ರೇಮಿಗಳ ದಿನವನ್ನು ಆಚರಣೆ ಮಾಡಿಲ್ಲ ಎಂದು ಪ್ರಶ್ನೆಯನ್ನು ಕೇಳಿದ್ದರು. ಪ್ರತಿದಿನವೂ ಪ್ರೇಮಿಗಳ ದಿನವೇ ಎಂದು ಉತ್ತರಿಸಿದ್ದರು ಕವಿತಾ ಗೌಡ. ಹೀಗೆ ಒಂದಲ್ಲ ಒಂದು ವಿಚಾರದ ಮೂಲಕ ಸುದ್ದಿಯಾಗುವ ಚಂದನ್ ಕುಮಾರ್ ದಂಪತಿಗಳು ಮನೆಯ ಗೃಹಪ್ರವೇಶ ಮಾಡಿದ್ದಾರೆ.ಹೌದು ಚಂದನ್ ಕುಮಾರ್  ದಂಪತಿಗಳು ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಹೌದು ಹೊಸ ಮನೆಯ ಗೃಹಪ್ರವೇಶವನ್ನು ಮಾಡುವ ಮೂಲಕ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಈ ಗೃಹಪ್ರವೇಶಕ್ಕೆ ಅಕುಲ್ ಬಾಲಾಜಿ, ಜೀವಿತಾ, ಗಾನ ಭಟ್, ಚಂದನ್ ಕುಮಾರ್ ಸಹೋದರ ಕೇಶವ್ ಗೌಡ ಆಗಮಿಸಿ, ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಈ ದಂಪತಿಗಳ ಗೃಹಪ್ರವೇಶದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳಿಂದ ಶುಭಾಶಯಗಳು ಹರಿದು ಬಂದಿದೆ.