ಜಾಗ್ವಾರ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟ ನಿಖಿಲ್ ಕುಮಾರ್, ಸಿನಿಮಾ ಮಾತ್ರವಲ್ಲದೇ, ರಾಜಕೀಯದಲ್ಲಿ ಕೂಡ ತೊಡಗಿಸಿಕೊಂಡವರು. ರಾಜಕೀಯ ರಂಗದಲ್ಲೂ ತೊಡಗಿಸಿಕೊಂಡಿದ್ದ ನಿಖಿಲ್ ಕುಮಾರ್ ಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ರಾಜಕೀಯ ಕ್ಷೇತ್ರ ಇವರನ್ನು ಕೈ ಹಿಡಿಯದ ಕಾರಣ ಮರಳಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇನ್ನು, ಕಳೆದ ವರ್ಷ ಲಾಕ್ಡೌನ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದು ಎಲ್ಲರಿಗೂ ಗೊತ್ತೇ ಇದೆ. ಲಾಕ್‌ಡೌನ್ ಮಧ್ಯೆ ಆಪ್ತರ ಸಮ್ಮುಖದಲ್ಲಿ ರೇವತಿಯನ್ನು ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಲಾಕ್ ಡೌನ್ ಸಮಯದಲ್ಲಿ ಮದುವೆಯಾದ ನಿಖಿಲ್, ಪತ್ನಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆದಿದ್ದರು. ಅದು ಮದುವೆಯಾದ ಹೊಸ ಜೋಡಿಗಳು ತಮ್ಮ ಬಿಡದಿ ಸಮೀಪದ ತಮ್ಮ ತೋಟದ ಮನೆಯಲ್ಲಿ ಅಮೂಲ್ಯವಾದ ಸಮಯವನ್ನು ಕಳೆದಿದ್ದರು. ಈ ಹಿಂದೆ ಕೃಷಿ ಕೆಲಸಗಳು ಇನ್ನಿತರ ಕೆಲಸಗಳು ಸೇರಿದಂತೆ ಎಲ್ಲವನ್ನು ಒಟ್ಟಾಗಿ ಮಾಡಿದ್ದರು. ಆದರೆ ಇವರ ಮದುವೆಯ ಇನ್ವಿಟೇಶನ್ ಹೇಗಿತ್ತು ಗೊತ್ತಾ, ಕೇಳಿದರೆ ನಿಜಕ್ಕೂ ಅಚ್ಚರಿ ಪಡ್ತೀರಾ.
ಕಳೆದ ವರ್ಷ ರೇವತಿ ನಿಖಿಲ್ ಕುಮಾರಸ್ವಾಮಿ ಸೆಪ್ಟೆಂಬರ್ 24 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಿಹಿ ಸುದ್ದಿಯನ್ನು ನಿಖಿಲ್ ಕುಮಾರಸ್ವಾಮಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, “ನಮ್ಮ ಜೀವನದ ಈ ಅಮೂಲ್ಯ ಕ್ಷಣವನ್ನು ಇಡೀ ಪ್ರಪಂಚದ ಜೊತೆ ಹಂಚಿಕೊಳ್ಳಲು ಬಹಳ ಸಂತೋಷವಾಗಿದೆ. ಲವ್ ಯೂ ಮೈ ಸನ್..” ಎಂದು ಬರೆದುಕೊಂಡಿದ್ದರು. ಇತ್ತೀಚಿಗಷ್ಟೇ ನಿಖಿಲ್ ಕುಮಾರಸ್ವಾಮಿಯವರ ಮುದ್ದಿನ ಮಗನ ನಾಮಕರಣ ಶಾಸ್ತ್ರವು ನಡೆದಿತ್ತು. ನಿಖಿಲ್ ಕುಮಾರಸ್ವಾಮಿ ದಂಪತಿಗಳ ಮುದ್ದಿನ ಮಗನಿಗೆ ಒಂಭತ್ತು ತಿಂಗಳು ಕಳೆದಿದ್ದು ಜೂನ್ 8 ರಂದು ಅದ್ದೂರಿಯಾಗಿ ನಾಮಕರಣ ಶಾಸ್ತ್ರವು ಮಾಡಲಾಗಿತ್ತು.
ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣವನ್ನು ಮಾಡಲಾಗಿತ್ತು. ಜೂನ್ 8 ರ ಬೆಳಗ್ಗೆ 10:30 ರಿಂದ 12:20 ರವರೆಗೂ ನಡೆಯುವ ಶುಭ ಲಗ್ನದಲ್ಲಿ ನಾಮಕರಣ ಶಾಸ್ತ್ರ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ದಂಪತಿಗಳು ತಮ್ಮ ಮಗನಿಗೆ ಆವ್ಯನ್ ದೇವ್ ಎಂದು ಹೆಸರಿಟ್ಟಿದ್ದಾರೆ. ಅದಲ್ಲದೇ, ನಾಮಕರಣ ಕಾರ್ಯಕ್ರಮದ ಜೊತೆ ಪ್ರಪೌತ್ರ ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಕಾರ್ಯಕ್ರಮಗಳನ್ನು ಗೌಡರ ಕುಟುಂಬ ಹಮ್ಮಿಕೊಂಡಿದ್ದರು. ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಾಮಕರಣ ಶಾಸ್ತ್ರವು ನೆರವೇರಿತ್ತು. ನಾಮಕರಣ ಶಾಸ್ತ್ರದ ಫೋಟೋಗಳು ಹಾಗೂ ವಿಡಿಯೋಗಳನ್ನು ವೈರಲ್ ಆಗಿತ್ತು.
ತದನಂತರದಲ್ಲಿ ರೇವತಿಯವರ ಬಳಿ ಮಾಧ್ಯಮದವರು ನಿಮಗೆ ಮಗ ಏನು ಆಗಬೇಕು ಎಂಬ ಆಸೆ ಇದೆ ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ್ದ ರೇವತಿಯವರು,’ ತುಂಬಾ ಖುಷಿ ಇದೆ ಅಷ್ಟೇ. ಡ್ರೀಮ್ ಅಂತ ಏನಿಲ್ಲ. ಅವನ ಇಷ್ಟ ವಾಟ್ ಎವರ್ ಹೀ ವಾಂಟ್ಸ್. ತುಂಬಾ ಆಕ್ಟಿವ್ ಇದ್ದಾನೆ. ನಾರ್ಮಲ್ ರುಟಿನೇ, ಅವನದ್ದೇ ಎವ್ರಿ ಡೇ ನೋಡಿಕೊಳ್ಳುವುದು ಅಷ್ಟೇ’ ಎಂದಿದ್ದಾರೆ. ಕೊರೋನ ಸೋಂಕು ಹಾಗೂ ಲಾಕ್ ಡೌನ್ ಇದ್ದ ಕಾರಣ, ಅಂದಿನ ಪರಿಸ್ಥಿತಿಗೆ ತಕ್ಕಂತೆ ಜನರಿಗೆ ಕಷ್ಟ ಆಗಬಾರದೆಂದೂ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ ಅವರು ಕಾಲಿಟ್ಟಿದ್ದರು. ಅದಲ್ಲದೇ, ಮದುವೆ ಇನ್ವಿಟೇಷನ್ ಕಾರ್ಡ್ ಕೂಡ ಬಹಳ ಸರಳ ದಿಂದ ಕೂಡಿತ್ತು. ಈ ವಿಚಾರದ ಬಗ್ಗೆ ಅಭಿಮಾನಿಗಳು ಅನಿಸಿಕೆ ಹಂಚಿಕೊಂಡಿದ್ದು, ಮನೆಯವರು ಆ ಸಮಯದಲ್ಲಿ ತೆಗೆದುಕೊಂಡ ನಿರ್ಧಾರ ಬಹಳ ಉತ್ತಮವಾಗಿದೆ ಎಂದಿದ್ದಾರೆ.
