ಚಂದನವನದ ಬಹುಬೇಡಿಕೆಯ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಹೌದು ಅವರ ನಟನೆಗೆ ಮಾತ್ರವಲ್ಲ , ವ್ಯಕ್ತಿತ್ವಕ್ಕೂ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಂದು ದರ್ಶನ್ ಅವರು ಸೆಲೆಬ್ರಿಟಿಯಾಗಿ ಕೈ ತುಂಬಾ ಸಂಭಾವನೆಯನ್ನು ಪಡೆಯುತ್ತಿರ ಬಹುದು. ಆದರೆ ಬದುಕಿನ ಹಾದಿ ಕಲ್ಲು ಮುಳ್ಳುಗಳಿಂದ ಕೂಡಿದ್ದವು. ದರ್ಶನ್ ಅವರು ಕಷ್ಟದ ದಿನಗಳನ್ನು ಕಂಡಿದ್ದಾರೆ. ಹೀಗಾಗಿ ಕಷ್ಟ ಎಂದು ಯಾರೇ ಬಂದರೂ ಕೈಯೆತ್ತಿ ತನ್ನ ಕೈಲಾದಷ್ಟು ಸಹಾಯ ಮಾಡಿ ಕಳುಹಿಸುವ ವ್ಯಕ್ತಿತ್ವ ಅವರದ್ದು. ಡಿ ಬಾಸ್ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ ಎನ್ನುವುದಕ್ಕೆ ಈಗಾಗಲೇ ಸಾಕಷ್ಟು ಘಟನೆಗಳು ಉದಾಹರಣೆಯಾಗಿದೆ. ನಟನಾಗಿ ಮಾತ್ರ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳದೇ, ಒಬ್ಬ ಪರಿಸರ ಪ್ರೇಮಿ ಹಾಗೂ ಪ್ರಾಣಿ ಪ್ರಿಯರಾಗಿಯೂ ಸಾಕಷ್ಟು ಸುದ್ದಿಯಾಗುತ್ತಾರೆ. ಸಿನಿಮಾರಂಗದಲ್ಲಿ ನಟನಾಗಿ ಬದುಕು ಕಟ್ಟಿಕೊಂಡ ಹಾದಿ ಹೇಳಿವಷ್ಟೇನು ದರ್ಶನ್ ಪಾಲಿಗೆ ಸುಲಭ ವಾಗಿರಲಿಲ್ಲ.
ತಂದೆ ತೂಗುದೀಪ ಶ್ರೀನಿವಾಸ್ ಅವರು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದರೂ, ಮಗನಾದ ದರ್ಶನ್ ಅವರು ಸಿನಿಮಾರಂಗಕ್ಕೆ ಲೈಟ್ ಬಾಯ್ ಆಗಿ ಸೇರಿಕೊಂಡದ್ದನ್ನು ಎಲ್ಲರೂ ನಂಬಲೇ ಬೇಕು. ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳುವುದಿದೆ. ತಂದೆ ತೂಗುದೀಪ ಶ್ರೀನಿವಾಸ್ ಅವರು ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡವರು. ಹೀಗಾಗಿ ಮಗನಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಕಷ್ಟವಾಗಿರಲ್ಲ. ಆದರೆ ದರ್ಶನ್ ಅವರ ಸಿನಿ ರಂಗದ ಜರ್ನಿ ಕಷ್ಟಕರವಾಗಿತ್ತು. ತಂದೆಯೂ ಸಿನಿಮಾದಲ್ಲಿದ್ದ ಕಾರಣ ನಟನೆಯ ಕಡೆಗೆ ಆಸಕ್ತಿ ದರ್ಶನ್ ಅವರಿಗಿತ್ತು. ದರ್ಶನ್ ಅವರು ಸಿನಿಮಾ ಬದುಕನ್ನು 1990 ರಲ್ಲಿ ಶುರು ಮಾಡಿದರು. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ಮೊದಲು ಕಿರುತೆರೆಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. 2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಇದು ದರ್ಶನ್ ಅವರ ಬದುಕಿನ ತಿರುವು ಕೊಟ್ಟ ಸಿನಿಮಾ.
