ಶ್ರುತಿ ಮಗಳು ಗೌರಿ, ರಾಯನ್ ಸ್ಟೆಪ್ ನೋಡಿ !!! ಕ್ಯೂಟ್ ಡ್ಯಾನ್ಸ್ ವಿಡಿಯೋ

 

ನಟಿ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾನಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಹೌದು ರಾಯನ್ ರಾಜ್ ಸರ್ಜಾ ಚೆನ್ನಾಗಿಲಿ ಎಂದು ಬಯಸುವ ಅಭಿಮಾನಿಗಳಿದ್ದಾರೆ. ಇತ್ತೀಚಿಗಷ್ಟೇ ಚಿರು ಅವರ ಬಾಲ್ಯದ ಫೋಟೋವನ್ನು ಹಾಗೂ ರಾಯನ್ ರಾಜ್ ಸರ್ಜಾನ ಬಾಲ್ಯದ ಫೋಟೋಗೆ ಟ್ಯಾಗ್ ಮಾಡಿ ಅಭಿಮಾನಿಯೊಬ್ಬರು ಶೇರ್ ಮಾಡಿಕೊಂಡಿದ್ದರು. ಈ ಫೋಟೋದಲ್ಲಿ ಅಪ್ಪ ಮಗ ಒಂದೇ ರೀತಿ ಇದ್ದಾರೆ. ಚಿರು ಬಾಲ್ಯದಲ್ಲಿ ತೆಗೆಸಿಕೊಂಡಿರುವ ಫೋಟೋವನ್ನು ಮಗ ರಾಯನ್ ಫೋಟೋದೊಂದಿಗೆ ಅಭಿಮಾನಿಗಳು ಟ್ಯಾಗ್ ಮಾಡಿದ್ದರು. ಈ ಫೋಟೋವನ್ನು ನೋಡಿದರೆ ಚಿರು ಚಿಕ್ಕ ವಯಸ್ಸಿನಲ್ಲಿರುವಾಗ ಪ್ಯಾಂಟ್ ಶರ್ಟ್ ಕೋಟ್ ಹಾಗೂ ಸ್ಪೆಕ್ಸ್ ಹಾಕಿಕೊಂಡು ಪೋಸ್ ಕೊಟ್ಟಿದ್ದರು.

ಅದೇ ರೀತಿ ರಾಯನ್ ರಾಜ್ ಸರ್ಜಾನಿಗೂ ಕೂಡ ಸ್ಪೆಕ್ಸ್ ಹಾಕಿ ಫೋಟೋವನ್ನು ತೆಗೆಯಲಾಗಿತ್ತು. ಅಪ್ಪ ಮಗನ ಫೋಟೋವನ್ನು ಅಭಿಮಾನಿಯೊಬ್ಬರು ಟ್ಯಾಗ್ ಮಾಡಿದ್ದರು. ಈ ಫೋಟೋವನ್ನು ನೋಡಿದ ಅಭಿಮಾನಿಗಳು ನಿಜಕ್ಕೂ ಅಪ್ಪ ಮಗ ಒಂದೇ ರೀತಿ ಇದ್ದಾರೆ, ರಾಯನ್ ರಾಜ್ ಸರ್ಜಾ ಅಪ್ಪನ ರೀತಿಯೇ ಇದ್ದಾನೆ. ಚಿರು ಬಾಲ್ಯದಲ್ಲಿ ಹೇಗಿದ್ದರೋ ಹಾಗೆಯೇ ರಾಯನ್ ಕೂಡ ಇದ್ದಾನೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದರು. ಆದರೆ ಇದೀಗ ನಟಿ ಶ್ರುತಿಯವರ ಮಗಳು ಗೌರಿ ಮೇಘನಾ ರಾಜ್ ಮನೆಗೆ ಭೇಟಿ ನೀಡಿ, ರಾಯನ್ ರಾಜ್ ಸರ್ಜಾ ಅವರ ಜೊತೆಗೆ ಸಮಯ ಕಳೆದಿದ್ದಾರೆ.