ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾಕ್ಕಾಗಿ ಪಡೆದ ಸಂಭಾವನೆ ಎಷ್ಟು ಗೊತ್ತಾ? ಅಬ್ಬಬ್ಬಾ ಇಷ್ಟೊಂದಾ ನೋಡಿ

 

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಿ ಅಭಿಮಾನಿಗಳ ಮನಸ್ಸು ಗೆದ್ದಿರುವ ಡಿ ಬಾಸ್ ಸಿನಿಮಾ ಎಂದರೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಹೌದು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಡಿ ಬಾಸ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹೌದು, ಈಗಾಗಲೇ ದರ್ಶನ್ ಅವರ ಕೈಯಲ್ಲಿ ಸಿನಿಮಾಗಳಿದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾರಂಗದಲ್ಲಿ ನಾಯಕನಟನಾಗಿ ಮಾತ್ರವಲ್ಲದೇ ಕಷ್ಟ ಎಂದು ಬಂದವರಿಗೆ ಖಾಲಿ ಕೈಯಲ್ಲಿ ಕಳಿಸುವುದೇ ಇಲ್ಲ. ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದು, ಅದರ ಜೊತೆಗೆ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಡಿ ಬಾಸ್ ಒಬ್ಬ  ಪರಿಸರ ಪ್ರೇಮಿ ಹಾಗೂ ಪ್ರಾಣಿ ಪ್ರಿಯರು ಕೂಡ ಹೌದು. ಸಿನಿಮಾರಂಗದಲ್ಲಿ ದರ್ಶನ್ ಅವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಇನ್ನು ಇವರ  ತಂದೆ ತೂಗುದೀಪ  ಶ್ರೀನಿವಾಸ್ ಅವರು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದರೂ, ದರ್ಶನ್ ಸಿನಿಮಾರಂಗಕ್ಕೆ ಲೈಟ್ ಬಾಯ್ ಆಗಿ ಸೇರಿಕೊಂಡರು. ಸಿನಿಮಾ ಬದುಕಿನ ಪ್ರಾರಂಭದಲ್ಲಿ ಕಷ್ಟ ಅವಮಾನವನ್ನು ಕಂಡರು.

ಹೌದು, ದರ್ಶನ್ ಅವರು  1990 ರಲ್ಲಿ ಸಿನಿಮಾ ಬದುಕನ್ನು ಶುರು ಮಾಡಿದರು. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ಮೊದಲು ಕಿರುತೆರೆಯ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. 2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.  ಇದು ದರ್ಶನ್ ಅವರ ಬದುಕಿನ ತಿರುವು ಕೊಟ್ಟ ಸಿನಿಮಾ. ತದ ನಂತರ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡುವ ಮೂಲಕ ಸುದ್ದಿಯಾದ ದರ್ಶನ್ ಅವರು ಯಶಸ್ವಿ ನಾಯಕ ನಟರೆನಿಸಿಕೊಂಡಿದ್ದಾರೆ. ಅದಲ್ಲದೇ,  2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು  ಕೂಡ ಶುರು ಮಾಡಿದರು. ಈಗಾಗಲೇ ದರ್ಶನ್ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ.