ಶರಣ್ ಮನೆ ಗೃಹಪ್ರವೇಶ ಹೇಗಿತ್ತು ನೋಡಿ ಕ್ಷಣಗಳು

 

ಸಿನಿಮಾರಂಗದಲ್ಲಿ ಅನೇಕ ನಟ ನಟಿಯರು ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿಕೊಂಡಿದ್ದಾರೆ. ಅಂತಹವರಲ್ಲಿ ನಟ ಶರಣ್ ಕೂಡ ಒಬ್ಬರು. ಹೌದು, ನಟ ಶರಣ್ ಕನ್ನಡ ಚಿತ್ರರಂಗದಲ್ಲಿ ನಾಯಕನಟರಾಗಿ, ಹಾಸ್ಯ ನಟರಾಗಿ ಬದುಕು ಕಟ್ಟಿಕೊಂಡವರು. ಇನ್ನು, ನಾಯಕ ನಟ, ಹಾಸ್ಯ ನಟ ಮಾತ್ರವಲ್ಲದೇ ನಿರ್ಮಾಪಕ ಮತ್ತು ಹಿನ್ನಲೆ ಗಾಯಕರಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಶರಣ್ ಅವರು ನಟನೆ ಇರಲಿ, ಹಾಡೇ ಇರಲಿ ಎರಡಕ್ಕೂ ಸೈ ಎನ್ನುತ್ತಾರೆ. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಾನಿಂದ ಸುಮಾರು ಎರಡು ದಶಕಗಳಿಂದ ತಮ್ಮ ತಿಳಿಹಾಸ್ಯದಿಂದಲೇ ಮೋಡಿ ಮಾಡಿದ್ದಾರೆ. ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಶರಣ್ ಅವರ ಮನೆಯ ಗೃಹಪ್ರವೇಶಕ್ಕೆ ಯಾರೆಲ್ಲಾ ಬಂದಿದ್ದರು ಗೊತ್ತಾ. ಹೌದು ಈ ಕುರಿತಾದ ಕುತೂಹಲವಿರಬಹುದು.

ಅದಲ್ಲದೇ, ಶರಣ್ ಅವರ ಫ್ಯಾಮಿಲಿಯೇ ಕಲಾದೇವಿಯನ್ನು ಆರಾಧಿಸಿಕೊಂಡು ಬಂದವರು. ಶರಣ್ ಅವರ ತಂದೆ ತಾಯಿ ಆಗಿನ ಪ್ರಸಿದ್ಧ ಗುಬ್ಬಿ ನಾಟಕ ಕಂಪನಿಯಲ್ಲಿದ್ದರು. ಶರಣ್ ಅಕ್ಕ ನಟಿ ಶ್ರುತಿ ಕೂಡ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು. ಅದು ಅಲ್ಲದೇ ಶರಣ್ ಚಿತ್ರರಂಗಕ್ಕೆ ಬರುವ ಮುನ್ನ ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿದ್ದರು. ಹೀಗಾಗಿ ಶರಣ್ ಒಂದು ಆರ್ಕೆಸ್ಟ್ರಾದಲ್ಲಿ ಗಾಯಕರಾಗಿ ಗುರುತಿಸಿಕೊಂಡಿದ್ದರು. ತಮ್ಮದೇ ಆದ ಒಂದು ಭಕ್ತಿ ಗೀತೆಗಳ ಅಲ್ಬಮ್‌ವೊಂದನ್ನು ಆ ಸಮಯದಲ್ಲಿ ಹೊರತಂದಿದ್ದರು. ಅದರ ಜೊತೆಗೆ, ದೂರದರ್ಶನದ ಕೆಲವು ಧಾರವಾಹಿಗಳ ಟೈಟಲ್ ಟ್ರಾಕ್ ಹಾಡುತ್ತಿದ್ದರು. ಒಟ್ಟಿನಲ್ಲಿ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಇದಾದ ನಂತರದ ದಿನಗಳಲ್ಲಿ ದೂರದರ್ಶನದ ಸೀರಿಯಲ್‌ ನಟಿಸುವ ಅವಕಾಶವು ಸಿಕ್ಕಿತು. ಕಿರುತೆರೆ ಪರದೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನಾ ಬದುಕನ್ನು ಆರಂಭ ಮಾಡಿದರು. 1996 ರಲ್ಲಿ ತೆರೆಕಂಡ ಸಿದ್ಧಲಿಂಗಯ್ಯನವರ `ಪ್ರೇಮ ಪ್ರೇಮ ಪ್ರೇಮ ಚಿತ್ರದ ಮೂಲಕ ಹಾಸ್ಯನಟನಾಗಿ ಕಾಣಿಸುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಆದಾದ ಬಳಿಕ ಸಿನಿಮಾರಂಗದಲ್ಲಿ ಸಕ್ರಿಯರಾದ ಶರಣ್ ಅವರು ತಿರುಗಿ ನೋಡಿದ್ದೇ ಇಲ್ಲ. ಸುಮಾರು 99 ಚಿತ್ರಗಳಲ್ಲಿ ಹಾಸ್ಯ ಮತ್ತು ಪೋಷಕ ಕಲಾವಿದನಾಗಿ ಕಾಣಿಸಿಕೊಂಡಿದ್ದರು. ಆದರೆ ತಮ್ಮ ನಿರ್ಮಾಣದಲ್ಲಿಯೇ 2012 ರಲ್ಲಿ ರ‍್ಯಾಂಬೋ ಚಿತ್ರದ ಮೂಲಕ ನಾಯಕ ನಟನಾಗಿ ಸ್ಕ್ರೀನ್ ಮೇಲೆ ಮೋಡಿ ಮಾಡಿದರು.