ಆ್ಯಂಕರ ಅನುಶ್ರೀ ಮದುವೆ ಕೊನೆಗೂ ಸಿಹಿ ಸುದ್ದಿ ಹಂಚಿಕೊಂಡ ಅನುಶ್ರೀ!! ಎಲ್ಲಿ, ಯಾವಾಗ ನೋಡಿ

 

ಕನ್ನಡ ಕಿರುತೆರೆ ಲೋಕದಲ್ಲಿ ನಂಬರ್ ಒನ್ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀಯವರ ಬಗ್ಗೆ ಎಲ್ಲರಿಗೂ ಪರಿಚಯವಿದೆ. ಹೌದು, ಸಿನಿಮಾ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು ಹೀಗೆ ಎಲ್ಲಾ ಕಾರ್ಯಕ್ರಮವನ್ನು ಸಲೀಸಾಗಿ ನಿರೂಪಣೆ ಮಾಡುವ ಅನುಶ್ರೀಯವರಿಗೆ ಒಂದಷ್ಟು ಅಭಿಮಾನಿಗಳಿದ್ದಾರೆ. ಇನ್ನು ಸಹಜವಾಗಿಯೇ ಅಭಿಮಾನಿಗಳಿಗೆ ಅನುಶ್ರೀ ಯಾವಾಗ ಮದುವೆಯಾಗುತ್ತಾರೆ ಎಂಬ ಕುತೂಹಲವಿರುತ್ತದೆ. ಅನುಶ್ರೀಯವರ ಬಳಿ ಸಾಕಷ್ಟು ಸಲ ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ವೇಳೆ ಅನುಶ್ರೀಯವರು ಉತ್ತರ ನೀಡುವ ಮೂಲಕ ಆಗೋಣ ಎಂದಿದ್ದರು. ಆದರೆ ಇದೀಗ ಅನುಶ್ರೀಯವರು ಮದುವೆಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹಾಗಾದರೆ ಖ್ಯಾತ ನಿರೂಪಕಿ ಅನುಶ್ರೀಯವರು ಹಸೆಮಣೆ ಏರಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ನಟಿ ಅವರ ನಟನಾ ಹಾಗೂ ನಿರೂಪಣೆ ಬದುಕಿನ ಕಡೆಗೆ ಕಣ್ಣಾಯಿಸಿದರೆ, ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅನುಶ್ರೀ ಮನೆಯ ಜವಾಬ್ದಾರಿಯನ್ನು ಹೊತ್ತು ಕೊಂಡು ಮಾಯನಗರಿ ಬೆಂಗಳೂರಿಗೆ ಬಂದರು. ಹೌದು, ಮಧ್ಯಮ ವರ್ಗದಲ್ಲಿ ಹುಟ್ಟಿಬೆಳೆದ ಅನುಶ್ರೀ ಯವರಿಗೆ ಸಣ್ಣ ವಯಸ್ಸಿನಲ್ಲಿ ತಂದೆಯಿಂದ ದೂರಾದ ಬಳಿಕ, ತಮ್ಮ ಹಾಗೂ ತಾಯಿ ಜವಾಬ್ದಾರಿಯೂ ತನ್ನ ಮೇಲಿತ್ತು. ಅನುಶ್ರೀ ತಂದೆ ಸಂಪತ್, ತಾಯಿ ಶಶಿಕಲಾ, ತಮ್ಮ ಅಭಿಜಿತ್. ಚಿಕ್ಕ ವಯಸ್ಸಿನಲ್ಲಿ ತಂದೆಯೂ ಇವರನ್ನು ಬಿಟ್ಟು ಹೋಗಿದ್ದರು. ಹೀಗಾಗಿ ಅಕ್ಕನಾಗಿ ಎಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕಿತ್ತು.ಈ ಕಾರಣದಿಂದಾಗಿ ಓದು ನಿಲ್ಲಿಸಿ ತಮ್ಮ ಹಾಗೂ ಅಮ್ಮನನ್ನು ನೋಡಿಕೊಳ್ಳಲು ಮುಂದಾದರು ಅನುಶ್ರೀ. ಆ ಸಮಯದಲ್ಲಿ ಶಾಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಆ್ಯಂಕರಿಂಗ್ ಮಾಡಿದ್ದರು.

ಹೀಗಾಗಿ ನಿರೂಪಣೆಯಲ್ಲಿಯೇ ಬದುಕು ಕಟ್ಟಿಕೊಳ್ಳಲು ಮುಂದಾದರು. ಪ್ರಾರಂಭದಲ್ಲಿ ಮಂಗಳೂರು ಮೂಲದ ನಮ್ಮ ಟಿವಿ ಚಾನೆಲ್ ಅಂತಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು. ತದನಂತರದ ದಿನಗಳಲ್ಲಿ ಒಂದಲ್ಲ ಒಂದು ಅವಕಾಶಗಳು ಅನುಶ್ರೀ ಪಾಲಿಗೆ ಬಂತು. ಬೆಂಗಳೂರಿಗೆ ಬಂದ ಪ್ರಾರಂಭದಲ್ಲಿ ಬೆಂಗಳೂರು ಕನ್ನಡ ಮಾತನಾಡಿ ಎಂಬ ಬೇಡಿಕೆಯಿತ್ತು. ಹೀಗಾಗಿ ಕನ್ನಡವನ್ನು ಚೆನ್ನಾಗಿ ಕಲಿತು ಕೊಂಡರು. ಈಟಿವಿಯಲ್ಲಿ ‘ಡಿಮ್ಯಾಂಡಪ್ಪೋ ಡಿಮ್ಯಾಂಡ್’ ಎಂಬ ಕಾರ್ಯಕ್ರಮವು ಇವರಿಗೆ ಹೆಚ್ಚಿನ ಹೆಸರನ್ನು ತಂದು ಕೊಟ್ಟಿತು. ಹೀಗೆ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣು ಬಾರಾ, ಕಾಮಿಡಿ ಕಿಲಾಡಿಗಳು ಹೀಗೆ ಅನೇಕ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ.

ನಿರೂಪಣೆ ಮಾತ್ರವಲ್ಲದೇ ಸಿನಿ ಪರದೆಯಲ್ಲೂ ಅನುಶ್ರೀ ಕಾಣಿಸಿಕೊಂಡಿದ್ದರು. ನಿರೂಪಕಿಯಾಗಿ ಮಾತ್ರ ಕಾಣಿಸಿ ಕೊಳ್ಳದೇ ಸಿನಿ ಪರದೆಯ ಮೇಲು ನಟನೆಯ ಮೂಲಕ ಮೋಡಿ ಮಾಡಿದ್ದಾರೆ. ಬೆಂಕಿ ಪೊಟ್ಟಣ, ಮುರಳಿ ಮೀಡ್ಸ್ ಮೀರಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ನಟನೆಗೆ ಪ್ರಶಸ್ತಿ ಕೂಡ ಲಭಿಸಿದೆ. ಆದರೆ ನಿರೂಪಣೆ ತಂದುಕೊಟ್ಟಷ್ಟು ಖ್ಯಾತಿ ಸಿನಿಮಾ ತಂದುಕೊಡಲಿಲ್ಲ. ಅಂದಹಾಗೆ, ಅನುಶ್ರೀ ಆಯ್ಯಂಕರ್ ಎನ್ನುವ ಯೂಟ್ಯೂಬ್ ಚಾನೆಲ್ ಅನು ಶುರು ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು ನಿರೂಪಣೆಯಲ್ಲಿಯೂ ಬ್ಯುಸಿಯಾಗಿದ್ದಾರೆ.