ಕನ್ನಡ ಕಿರುತೆರೆ ಲೋಕದಲ್ಲಿ ನಟಿ ಕಮ್ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ. ಆದರೆ ಇದೀಗ ಕಲರ್ಸ್ ಕನ್ನಡ ವಾಹಿನಿಯ ರಾಜಾ ರಾಣಿ ಸೀಸನ್ 2 ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿಲ್ಲ. ಈ ಹಿಂದೆ ಸೀಸನ್ 1 ರಲ್ಲಿ ಅದ್ಭುತವಾಗಿ ನಿರೂಪಣೆ ಮಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದುಕೊಂಡಿದ್ದರು. ಆದರೆ ಸೀಸನ್ 2 ರಲ್ಲಿ ತನ್ನ ವೈಯುಕ್ತಿಕ ಕಾರಣದಿಂದ ಶೋನಿಂದ ದೂರ ಉಳಿದಿದ್ದರು ಎನ್ನಲಾಗಿತ್ತು. ಹೀಗಾಗಿ ರಾಜಾ ರಾಣಿ ಸೀಸನ್ 2 ಗೆ ನಟಿ ಜಾನ್ವಿ ರಾಯಲ ಅವರು ನಿರೂಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಹೌದು, ‘ರಾಜಾ ರಾಣಿ 2’ ಶೋ ನಡೆಸಿಕೊಡುವ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ಆದರೆ ಇದೀಗ ಶೋ ನಿಂದ ಹಿಂದೆ ಸರಿಯಲು ಕಾರಣ ಕುರಿತು ನಟಿ ಕಮ್ ನಿರೂಪಕಿ ಅನುಪಮಾ ಗೌಡ ಸ್ಪಷ್ಟನೆ ನೀಡಿದ್ದಾರೆ. ನಟಿ ಅನುಪಮಾ ಗೌಡ ತನ್ನ ಪರಿಶ್ರಮದಿಂದಲೇ ಮೇಲೆ ಬಂದವರು ಎನ್ನುವುದರಲ್ಲಿ ಎರಡು ಮಾತಿಲ್ಲ.
ಹೌದು, ಅಕ್ಕ ಎಂಬ ಧಾರಾವಾಹಿ ಮೂಲಕ ಫೇಮಸ್ ಆಗಿ ಬಿಟ್ಟರು. ಈ ಧಾರಾವಾಹಿಯಲ್ಲಿ ದ್ವಿಪಾತ್ರ ನಿಭಾಯಿಸುವುದರ ಮೂಲಕ ಸೈ ಎನಿಸಿಕೊಂಡರು. ಅವಳಿ-ಜವಳಿ ಪಾತ್ರದಲ್ಲಿ ನೆಗೆಟಿವ್ ಪಾಸಿಟಿವ್ ಎರಡು ರೂಪಗಳಲ್ಲಿ ನಟಿಸಿದ್ದು, ಅವರ ನಟನೆಯಲ್ಲಿ ಎರಡು ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ತದನಂತರ, ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಭಾಗವಹಿಸಿ ಎಲ್ಲರ ಮನೆ ಮಾತಾದರು. ಇನ್ನು, ಆ ಕರಾಳ ರಾತ್ರಿ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ಹಿರಿತೆರೆಗೂ ಎಂಟ್ರಿ ಕೊಟ್ಟರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ನಿರೂಪಕಿಯಾಗಿ ಖ್ಯಾತಿ ಗಳಿಸಿದರು. ರಾಜಾ ರಾಣಿ ಹಾಗೂ ನಮ್ಮಮ್ಮ ಸೂಪರ್ ಸ್ಟಾರ್ ಶೋವನ್ನು ನಿರೂಪಣೆ ಮಾಡುವ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಬಹುಬೇಡಿಕೆಯ ನಿರೂಪಕಿಯಾಗಿದ್ದಾರೆ. ಕಳೆದ ರಾಜಾ ರಾಣಿ ಸೀಸನ್ 1 ನ್ನು ಅದ್ಭುತವಾಗಿ ನಿಭಾಯಿಸಿಕೊಳ್ಳುವ ಮೂಲಕ ಜನರ ಅಭಿಮಾನಿವನ್ನು ಸಂಪಾದಿಸಿಕೊಂಡರು.
