ಕನ್ನಡದ ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಗುರುತಿಸಿಕೊಂಡ ನಟಿ ಸಂಯುಕ್ತ ಹೆಗ್ಡೆ. ನಟಿ ಸಂಯುಕ್ತ ಹೆಗ್ಡೆ ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ಸಂಯುಕ್ತ ಹೆಗ್ಡೆ ಮಾಡಿರುವುದು ಕೆಲವೇ ಕೆಲವು ಸಿನಿಮಾಗಳಾದರು ಉತ್ತಮ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಿನಿಮಾರಂಗದಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿದ್ದಾರೆ. ಇನ್ನು ನಟಿ ಸಂಯುಕ್ತ ಹೆಗ್ಡೆ ನೇರ ನುಡಿ ಹಾಗೂ ಯಾವುದೇ ಮುಚ್ಚು ಮರೆ ಇಲ್ಲದೆ ಎಲ್ಲವನ್ನು ಸ್ಪಷ್ಟವಾಗಿ ಮಾತನಾಡುವ ಹುಡುಗಿ, ಇದೀಗ ನಟಿ ಸಂಯುಕ್ತ ಹೆಗ್ಡೆ ಚಿತ್ರರಂಗದಲ್ಲಿ ಬೇಡಿಕೆ ಪಡೆಯುವುದು ಹೇಗೆ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ.
ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನ ಒಂದರಲ್ಲಿ ನಟಿ ಸಂಯುಕ್ತ ಹೆಗ್ಡೆ ಅವರಿಗೆ ಕೆಲವು ನಟಿಯರು ಅಚಾನಕ್ಕಾಗಿ ಚಿತ್ರರಂಗದಲ್ಲಿ ಫ್ಹೇಮಸ್ ಆಗುತ್ತಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಪ್ರಶ್ನಿಸಿದಾಗ ನಟಿ ಸಂಯುಕ್ತ, ಸಿನಿಮಾರಂಗದಲ್ಲಿ ಹಣ ಇದ್ದರೆ ಎಷ್ಟು ಬೇಕಾದರೂ ಜನಪ್ರಿಯತೆ ಪಡೆದುಕೊಳ್ಳಬಹುದು ಎಂದಿದ್ದಾರೆ. ಸಿನಿಮಾರಂಗದಲ್ಲಿ ಗಾಡ್ ಫ್ಹಾಡರ್ ಇದ್ದರೆ ಅಥವಾ ಹಣ ಇದ್ದರೆ ನೀವು ಏನಾಗಬೇಕು ಎಂದು ಕೊಳ್ಳುತ್ತಿರೋ ಅದನ್ನು ಮಾಡಿಬಿಡುತ್ತಾರೆ. ಚಾಕ್ಲೆಟ್ ಬಾಯ್, ನ್ಯಾಷನಲ್ ಕ್ರಶ್, ರಾಜ್ಯದ ಕ್ರಶ್, ಕ್ಯೂಟ್ ಬಬ್ಲಿ ಲುಕ್, ಇನ್ನಿತರ ಅಭಿಪ್ರಾಯಗಳನ್ನು ಹುಟ್ಟುಹಾಕುವಲ್ಲಿ ಪಿ ಆರ್ ಗಳ ಕೈ ಇರುತ್ತದೆ ಎಂದಿದ್ದಾರೆ ನಟಿ ಸಂಯುಕ್ತ ಹೆಗ್ಡೆ.
