ಕ್ರೇಜಿ ಸ್ಟಾರ್ ತಂದೆಗೆ ಎದುರಿ ಅವಳನ್ನು ಮದುವೆಯಾಗಲಿಲ್ಲ .. ಅಷ್ಟಕ್ಕೂ ಪ್ರೀತಿಸಿದ ಹುಡುಗಿ ಯಾರು ಗೊತ್ತಾ?

 

ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ನಟ ರವಿಚಂದ್ರನ್, ಸತತ 10 ದಶಕಗಳ ಕಾಲ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿರುವ ನಟ. ಇಂದಿಗೂ ಸಹ ನಟ ರವಿಚಂದ್ರನ್ ಅವರ ಸಿನಿಮಾಗಳು ಪಡ್ಡೆ ಹುಡುಗರ ಫೇವರೇಟ್. ತಮ್ಮ ಸಿನಿಮಾಗಳಲ್ಲಿ ನಟಿಯರನ್ನು ಅತಿ ಸುಂದರವಾಗಿ ತೋರಿಸುತ್ತಾರೆ ನಟ ರವಿಚಂದ್ರನ್. ಇನ್ನು ನಟ ರವಿಚಂದ್ರನ್ ಅವರು ಇತ್ತೀಚೆಗೆ ತಾವು ಒಬ್ಬರನ್ನು ಪ್ರೀತಿಸುತ್ತಿದ್ದರು ಹಾಗೂ ತಮ್ಮ ತಂದೆ ಆ ಪ್ರೀತಿಯನ್ನು ನಿರಾಕರಿಸಿದ್ದರು ಎಂದು ತಮ್ಮ ಲವ್ ಕಹಾನಿ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ನಟ ರವಿಚಂದ್ರನ್ ಅವರ ಲವ್ ಕಹಾನಿ ಅಷ್ಟಕ್ಕೂ ಏನು? ನಟ ಪ್ರೀತಿಸಿದ ಹುಡುಗಿ ಯಾರು? ರವಿಚಂದ್ರನ್ ಅವರ ತಂದೆ ಅವರ ಪ್ರೀತಿಯನ್ನು ಏಕೆ ಒಪ್ಪಲಿಲ್ಲ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ ಮುಂದಕ್ಕೆ ಓದಿ…

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಬಗ್ಗೆ ಏನು ಹೇಳಿದರೂ ಸಹ ಕಡಿಮೆ. ಅವರು ನಮ್ಮ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆ ಅಷ್ಟಿಷ್ಟಲ್ಲ. ನಟ ರವಿಚಂದ್ರನ್ ಅವರು ಆಗಾಗ ಅಭಿಮಾನಿಗಳ ಜೊತೆ ಚಿತ್ರರಂಗದ ಹಲವಾರು ನೆನಪುಗಳನ್ನು ಸ್ಟೇಜ್ ಮೇಲೆ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇದೀಗ ನಟ ರವಿಚಂದ್ರನ್ ತಾವು ಪ್ರೀತಿಸಿದ ಹುಡುಗಿಯ ಬಗ್ಗೆ ಮಾತನಾಡಿದ್ದಾರೆ. ನಾನು ಆಕ್ಷನ್, ಥ್ರಿಲ್ಲರ್ ತರಹದ ಸಿನಿಮಾಗಳು ಮಾಡುವುದಿಲ್ಲ, ನಾನು ಮಾಡಿರುವ ಬಹುತೇಕ ಎಲ್ಲಾ ಸಿನಿಮಾಗಳು ಪ್ರೇಮ ಹಾಗೂ ಪ್ರೀತಿಯ ಹಂಶವನ್ನು ಹೊಂದಿರುತ್ತದೆ. ಇದಕೆಲ್ಲಾ ಮುಖ್ಯ ಕಾರಣ ನನ್ನ ಪ್ರೇಯಸಿ, ಅವಳೆ ನನ್ನ ಸ್ಫೂರ್ತಿ ಎಂದಿದ್ದಾರೆ.

ನಾನು ಒಬ್ಬರನ್ನು ಬಹಳ ಪ್ರೀತಿಸಿದ್ದೆ, ಆಕೆಯನ್ನು ನಾನು ಎಲ್ಲರಿಗಿಂತ ಹೆಚ್ಚಾಗಿ ಪ್ರೀತಿಸಿದ್ದೆ ಆದರೆ ನಮ್ಮ ತಂದೆ ನಮ್ಮ ಪ್ರೀತಿಗೆ ಒಪ್ಪಲಿಲ್ಲ. ಈ ಕಾರಣದಿಂದ ನಾವಿಬ್ಬರೂ ದೂರವಾಗಬೇಕಾಯಿತು ಎಂದಿದ್ದಾರೆ ನಟ ರವಿಚಂದ್ರನ್. ನಾನು ನನ್ನ ಸಿನಿಮಾಗಳಲ್ಲಿ ತುಂಬಾ ರೊಮ್ಯಾಂಟಿಕ್, ನಾನು ನಮ್ಮ ಹೀರೋಯಿನ್ ಗಳನ್ನು ತುಂಬಾ ಸುಂದರವಾಗಿ ಹಾಗೂ ಅವರ ಜೊತೆ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳನ್ನು ಶೂಟ್ ಮಾಡಿದ್ದೇನೆ ಆದರೆ ನಿಜ ಜೀವನದಲ್ಲಿ ನಾನು ಪ್ರೀತಿಸಿದ ಹುಡುಗಿಯನ್ನು ಒಮ್ಮೆ ಸಹ ಮುಟ್ಟು ಇರಲಿಲ್ಲ. ನಾನು ಅವಳನ್ನು ತುಂಬಾ ಪ್ರೀತಿಸತ್ತಿದೆ, ಆಕೆಗೂ ನಾನು ಬಹಕ ಇಷ್ಟವಿದ್ದೆ.