ಸಾಮಾನ್ಯವಾಗಿ ಈ ಸಿನಿಮಾ ರಂಗದಲ್ಲಿ ಆಳವಾಗಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಬೇಕು ಅಂತಾದರೆ ಅದು ಸುಲಭದ ಕೆಲಸವಲ್ಲ. ಹೌದು ತುಂಬಾ ಕಷ್ಟಪಡಬೇಕಾಗಿದ್ದು ಆದರೆ ಕಷ್ಟ ಪಟ್ಟು ಸಿನಿಮಾ ಇಂಡಸ್ಟ್ರಿಗೆ ಬಂದು ಒಂದು ಮಟ್ಟಕ್ಕೆ ಬೆಳೆದು ಬೇಡಿಕೆ ಹೆಚ್ಚಿಸಿಕೊಳ್ಳುವಾಗಲೇ ಮಾಡಬಾರದ ತಪ್ಪಿಗೆ ಗುರಿಯಾಗಿ ಚಿತ್ರರಂಗದಿಂದಲೇ ದೂರ ಮಾಡಿದರೆ ಹೇಗಾಗುತ್ತದೆ ನೀವೇ ಹೇಳಿ? ಇಂತಹ ಅನುಭವಕ್ಕೆ ಗುರಿಯಾದ ನಟಿ ಅಂದರೆ ಅದು ನಿಖಿತಾ ತುಕ್ರಾಲ್.ಹೌದು ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು ನಟಿ ನಿಖಿತಾ ತುಕ್ರಾಲ್.
ಹೌದು ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ನಾಯಕಿಯಾಗಿ ತೆರೆಹಂಚಿ ಕೊಂಡಿದ್ದು ಪುನೀತ್ ರಾಜ್‌ಕುಮಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಪೇಂದ್ರ ಜೊತೆ ಅವರು ನಟಿಸಿದ್ದರು. ಹೌದು ಪುನೀತ್ ರಾಜ್ ಕುಮಾರ್ ಜೊತೆ ವಂಶಿ ಸಿನಿಮಾದಲ್ಲಿ ನಟಿಸಿದರೆ ದರ್ಶನ್ ಅವರ ಜೊತೆ ಮಹಾರಾಜ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಮಹಾರಾಜ ಅವರ ಮೊದಲ ಕನ್ನಡ ಸಿನಿಮಾವಾಗಿದ್ದು ಅದೇ ರೀತಿ ರವಿಚಂದ್ರನ್ ಜೊತೆ ನಾ ಟಾಟಾ ನಿ ಬಿರ್ಲಾ ಸಿನಿಮಾದಲ್ಲಿ ನಟಿಸಿದ್ದರು.
ಕನ್ನಡ ಮಾತ್ರವಲ್ಲದೆ ತಮಿಳು. ತೆಲುಗು ಮಲಯಾಳಂ ಹಿಂದಿ ಚಿತ್ರಗಳಲ್ಲಿ ಹೀಗೆ ಬೇಡಿಕೆಯ ನಟಿಯಾಗಿ ಗುರುತಿಸಿಕೊಳ್ಳುವಾಗಲೇ ದರ್ಶನ್ ಹಾಗೂ ನಿಖಿತಾ ಅವರ ಸಂಬಂಧದ ಕುರಿತು ದೊಡ್ಡ ವಿವಾದ ಎದುರಾಗಿದ್ದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಇವರಿಬ್ಬರ ಸಂಬಂಧದ ಕುರಿತಾಗಿ ದೊಡ್ಡ ತಗಾದೆ ತೆಗೆದಿದ್ದರು. ಇದರಿಂದಾಗಿ ದರ್ಶನ್ ಅವರು ಜೈಲಿಗೆ ಹೋಗುವಂತಾಗಿತ್ತು. ಈ ಹಿನ್ನೆಲೆ ಕನ್ನಡ ಸಿನಿಮಾ ರಂಗದ ನಿರ್ದೇಶಕ ನಿರ್ಮಾಪಕರು ನಟಿ ನಿಖಿತಾರಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯ ಮರ್ಯಾದೆ ಹೋಗುತ್ತಿದೆ ಎಂದು ಮಾತನಾಡಿಕೊಂಡಿದ್ದು ಈ ಬಗ್ಗೆ ಚರ್ಚೆ ನಡೆಸಿ ನಿಖಿತಾರನ್ನು ಸಿನಿಮಾ ಇಂಡಸ್ಟ್ರಿ ಯಿಂದ ಮೂರು ವರ್ಷ ಬ್ಯಾನ್ ಮಾಡಿದ್ದರು. ಹೌದು ಇದರಿಂದ ನಿಖಿತಾ ತೀವ್ರವಾಗಿ ನೊಂದಿದ್ದು ಈ ಘಟನೆಯಿಂದ ಕನ್ನಡ ಮಾತ್ರ ಅಲ್ಲ ಬೇರೆ ಸಿನಿಮಾ ರಂಗದಲ್ಲಿ ಕೂಡ ಅವಕಾಶಗಳು ಸಿಗದಂತಾಯಿತು.
