ಸಾಮಾನ್ಯವಾಗಿ ಒಂದು ಸಣ್ಣ ಪಾತ್ರ ಕೆಲವು ನಟರ ಜೀವನವನ್ನೇ ಬದಲಾಯಿಸಿಬಿಟ್ಟಿವೆ. ಹೌದು ಲೂಸ್ ಮಾದನ ಪಾತ್ರದಲ್ಲಿ ನಟಿಸಿದ್ದ ಯೋಗಿ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದು ಮನಸಾರೆ ಸಿನಿಮಾದಲ್ಲಿ ಸತೀಶ್ ನೀನಾಸಂನ ಪಾತ್ರ ಸಖತ್ ಶೈನ್ ಆಗಿತ್ತು. ಹೌದು ಹೀಗೆ ಕೆಲವು ನಟರು ನಿರ್ವಹಿಸಿದ ಒಂದೇ ಸಣ್ಣ ಪಾತ್ರದಿಂದ ದೊಡ್ಡ ದೊಡ್ಡ ಅವಕಾಶಗಳು ಅವರನ್ನು ಅರಸಿ ಬಂದಿವೆ. ಇನ್ನು ಕೆಲವು ಸಿನಿಮಾಗಳ ಕೆಲವು ಸಣ್ಣ ಪಾತ್ರಗಳು ಪ್ರೇಕ್ಷಕನ ಮೇಲೆ ಪರಿಣಾಮ ಬೀರಿದ್ದಿದ್ದು ಕೆಜಿಎಫ್ ಸರಣಿ ಸಿನಿಮಾಗಳಲ್ಲಿ ನಟಿಸಿರುವ ತಾತನ ಪಾತ್ರ ಇದರಲ್ಲೊಂದು. ಕೆಜಿಎಫ್ ಸಿನಿಮಾದಲ್ಲಿ ದೃಷ್ಟಿಹೀನನ ಪಾತ್ರದಲ್ಲಿ ನಟಿಸಿದ್ದ ಕೃಷ್ಣ ಜಿ ರಾವ್ ಅದೊಂದು ಪಾತ್ರದಿಂದ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ.
ಕೆಜಿಎಫ್ ನ ತಾತ ಕೃಷ್ಣ ಜಿ ರಾವ್ ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು ಕೆಜಿಎಫ್ ತಾತ ಅಂತಾನೇ ಖ್ಯಾತಿ ಪಡೆದಿರುವ ಕೃಷ್ಣ ಜಿ ರಾವ್ ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ ನ್ಯಾನೋ ನಾರಾಯಣಪ್ಪ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ಕೃಷ್ಣ ಜಿ ರಾವ್ ಕಿರೀಟ ಗ್ಲಾಸ್ ಹಾಕಿಕೊಂಡು ಫೋಸ್ ಕೊಟ್ಟಿದ್ದು ನ್ಯಾನೋ ಕಾರು ಕೂಡ ಪೋಸ್ಟರ್‌ನಲ್ಲಿ ಹೈಲೇಟ್ ಆಗಿದ್ದು ಒಂದಷ್ಟು ಪ್ರತಿಭಾನ್ವಿತ ಕಲಾವಿದರು ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾಕ್ರೋಚ್ ಸುಧಿ ಗಿರೀಶ್ ಶಿವಣ್ಣ ಪ್ರಶಾಂತ್ ಸಿದ್ದಿ ಆನಂತು ಅಪೂರ್ವ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾಗೆ ಕೆಜಿಎಫ್ ತಾತ ಪಡೆದ ಸಂಭಾವನೆ ಎಷ್ಟು ಗೊತ್ತಾ.
ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿದ್ದ ನಿರ್ದೇಶಕ ಕುಮಾರ್ ರವರು ಕ್ರಿಟಿಕಲ್ ಕೀರ್ತನೆಗಳು ಸಿನಿಮಾದಲ್ಲಿ ಬೆಟ್ಟಿಂಗ್ ಧಂದೆಯ ಕರಾಳತೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದರು. ಸದ್ಯ ಇದೀಗ ನ್ಯಾನೋ ನಾರಾಯಣಪ್ಪ ಸಿನಿಮಾದ ಮೂಲಕ ಮತ್ತೊಮ್ಮೆ ಚಿತ್ರಪ್ರೇಮಿಗಳನ್ನು ಎಂಟರ್ ಟೈನ್ ಮಾಡಲು ಸಜ್ಜಾಗಿದ್ದು ಈ ಚಿತ್ರಕ್ಕೆ ಕುಮಾರ್ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಸಹ ತಾವೇ ಹೂಡಿದ್ದಾರೆ. ಹೌದು ಇದೊಂದು ಕಾಮಿಡಿ ಎಮೋಷನಲ್ ಡ್ರಾಮಾ ಸಿನಿಮಾ ಆಗಿದ್ದು ತುಂಬ ಕಾಡುವ ಕಥೆ ಮನೆ ಮಂದಿಯಲ್ಲಾ ಕುಳಿತು ನೋಡುವ ಸಿನಿಮಾ ಎಂದಿದ್ದಾರೆ.
