ಐರಾಗಾಗಿ ಆಸ್ಟ್ರೇಲಿಯಾದಿಂದ ಬಂತು ಉಡುಗೊರೆ ! ಏನೆಲ್ಲಾ ನೋಡಿ

 

ಸದ್ಯ ರಾಕಿಂಗ್ ಸ್ಟಾರ್ ಯಶ್ ತಾನು ರಾಕಿಂಗ್ ಸ್ಟಾರ್ ಅಷ್ಟೇ ಅಲ್ಲ‌‌ ಪಕ್ಕಾ ಫ್ಯಾಮಿಲಿಮ್ಯಾನ್ ಅನ್ನೋದನ್ನ ಪದೇ ಪದೇ ಪ್ರೂವ್ ಮಾಡ್ತಾ ಬರ್ತಿದ್ದಾರೆ. ಹೌದು ಕೆಜಿಎಫ್- 2 ರಿಲೀಸ್ ಆಗಿ ಸಾವಿರಾರು ಕೋಟಿ ಕಲೆಕ್ಷನ್ ‌ಮಾಡಿ ಹೊಸ ದಾಖಲೆ ಬರೆಯಿತು.‌ ಸಹಜವಾಗಿಯೇ ಯಶ್ ಮುಂದಿನ ಸಿನಿಮಾ ಯಾವುದು ಅನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.‌ ಆದರೆ ಯಶ್ ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ವಕೇಶನ್ ಮೂಡ್ ನಲ್ಲಿದ್ದಾರೆ. ಕೆಜಿಎಫ್- 2 ರಿಲೀಸ್ ಹಿಂದಿನ ದಿನದವರೆಗೂ ಪ್ರಚಾರಕ್ಕಾಗಿ ಊರೂರು ಸುತ್ತಿದ ಯಶ್ ಸಿನಿಮಾ‌ ಪ್ರೇಕ್ಷಕರ ಮುಂದೆ ಬಂದ ಮೇಲೆ ಸೈಲೆಂಟ್ ಆಗಿಬಿಟ್ಟರು.

ಇತ್ತ ಕೆಜಿಎಫ್- 2 ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದರೆ ಅಷ್ಟರಲ್ಲಾಗಲೇ ಯಶ್ ಫ್ಯಾಮಿಲಿ ಜೊತೆ ಜಾಲಿ ಟೂರ್ ಹೊರಟುಬಿಟ್ಟರು. ನಂತರ‌ ಮಕ್ಕಳನ್ನು ಕರೆದುಕೊಂಡು ಅನಿಮಲ್ ಪಾರ್ಕ್‌ಗೂ ಹೋಗಿ ಬಂದಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮತ್ತೆ ಪತ್ನಿ ರಾಧಿಕಾ ಪಂಡಿತ್ ಜೊತೆ ಯೂರೋಪ್ ಫ್ಲೈಟ್ ಏರಿದ್ದಾರೆ.ಯೂರೋಪಿನ ಸುಂದರ ತಾಣಗಳಲ್ಲಿ ವಿಹರಿಸುತ್ತಿರುವ ದಂಪತಿ ಒಂದಷ್ಟು ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ರಾಧಿಕಾ ಪಂಡಿತ್ ಕೊಟ್ಟಿರೋ ಕ್ಯಾಪ್ಷನ್ ಕೂಡ ಸೊಗಸಾಗಿದ್ದು ಪೋಸ್ಟ್ ಈಗ ಸೋಷಿಯಲ್ ‌ಮೀಡಿಯಾದಲ್ಲಿ ವೈರಲ್ ಆಗಿದೆ.‌ ಅಭಿಮಾನಿಗಳು ಲೈಕ್ಸ್ ಕಾಮೆಂಟ್ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.‌

ಸಂಸದೆ ಸುಮಲತಾ ಅಂಬರೀಶ್ ಕೂಡ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಪೋಸ್ಟ್‌ನ ಕಾಮೆಂಟ್ ಬಾಕ್ಸ್‌ನಲ್ಲೂ ಯಶ್ 19 ಅಪ್ ಡೇಟ್ ಕೊಡಿ ಅಂತ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೆ ಇದೀಗ ಅಸ್ಟ್ರೇಲಿಯದದಿಂದ ರಾಧಿಕಾ ಪಂಡಿತ್ ಮಗಳಿಗೆ ಸಂಬಂದಿಕರಿಂದ ಉಡುಗೊರೆ ಬಂದಿದೆ. ಅದೇನು ಗೊತ್ತಾ?ಸದಾ ಮಕ್ಕಳ ಹೊಸ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ ರಾಧಿಕಾ. ಇನ್ನು ಇತ್ತೀಚೆಗಷ್ಟೇ ರಾಧಿಕಾ ಪಂಡಿತ್ ಅವರ ಮಗಳಾದ ಐರಾಗೆ ಆಸ್ಟ್ರೇಲಿಯಾದಿಂದ ವಿಶೇಷ ಉಡುಗೊರೆ ಬಂದಿದೆ.

ಹೌದು ರಾಧಿಕಾ ಪಂಡಿತ್ ಅವರ ಸಹೋದರ ಗೌರವ ಪಂಡಿತ್ ಅವರು ಮತ್ತು ಪತ್ನಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು ಗೌರವ ಪಂಡಿತ ಹಾಗೂ ಪತ್ನಿ ಚಿಕಾಗೋದಲ್ಲಿ ವಿಶೇಷವಾದ ಉಡುಗೊರೆಯನ್ನು ಕಳಿಸಿದ್ದು ಮುದ್ದು ಸೊಸೆ ಐರಾಳಿಗೆ ಉಡುಗೊರೆಯನ್ನು ಕಳಿಸಿಕೊಟ್ಟಿದ್ದಾರೆ ಎಂದೇ ಸುದ್ದಿಯಾಗುತ್ತಿದೆ. ಐರಾಳಿಗಾಗಿ ಓದಲು ಬರೆಯಲು ಬೇಕಾಗುವ ಮೆಟೀರಿಯಲ್ ಗಳನ್ನು ಕಳಿಸಿದ್ದು ಈ ಯಥರ್ವದ ಆಟಿಕೆಗಳನ್ನು ಕಳಿಸಿಕೊಟ್ಟಿದ್ದಾರೆ. ಈ ಉಡುಗೊರೆಯನ್ನು ನೋಡಿದ ನಟಿ ರಾಧಿಕಾ ಖುಷಿಯಾಗಿದ್ದಾರೆ. ಇನ್ನು ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ಮದುವೆಯ ನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಒಂದು ಸಿನಿಮಾ ಬಿಟ್ಟಾರೆ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ.

ಮಕ್ಕಳಾದ ನಂತರ ಅವರ ಲಾಲನೆ ಪಾಲನೆಯಲ್ಲಿ ಬ್ಯುಸಿ ಇದ್ದಾರೆ. ಇನ್ನು ಸಿನಿಮಾಗಳನ್ನು ಮಾಡದಿದ್ದರೂ ಕೂಡ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇದ್ದು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗಷ್ಟೇ ಮುದ್ದು ಮಕ್ಕಳ ಜೊತೆ ಸಮಯ ಕಳೆಯುವ ಫೋಟೋಗಳನ್ನು ಹಾಕಿದ್ದು ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ಫುಲ್ ವೈರಲ್​ ಆಗಿದ್ದವು. ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.