ಸಾಮಾನ್ಯವಾಗಿ ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಪ್ರತಿ ನಿತ್ಯ ತಮ್ಮ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಮೂಲಕವೇ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇನ್ನು ನಟಿಮಣಿಯರು ಶೇರ್ ಮಾಡುವಂತಹ ಫೋಟೋ ವಿಡಿಯೋಗಳಿಗೆ ಅಭಿಮಾನಿಗಳು ನಾನಾ ರೀತಿಯ ಕಾಮೆಂಟ್ ಮಾಡುತ್ತಾರೆ. ಫೋಟೊ ಗಳನ್ನು ಹೊಗಳಿ ಕೆಲವರು ಕಾಮೆಂಟ್ ಮಾಡಿದರೆ ಇನ್ನು ಕೆಲವರು ತಮ್ಮ ವಿ-ಕೃತ ಮನೋಭಾವದ ಪ್ರದರ್ಶನ ಮಾಡುತ್ತಾರೆ.
ಇಂತಹ ಕಾಮೆಂಟ್ ಗಳಿಗೆ ಕೆಲವರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಕೆಲವರು ಅಂತಹ ಕಾಮೆಂಟ್ ಗಳಿಗೆ ಸರಿಯಾಗಿ ಜಾಡಿಸಿ ಉತ್ತರಿಸುತ್ತಾರೆ. ಇನ್ನು ಇದೀಗ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಶನ್ಸ್ ನಡೆಸುವುದು ಕಾಮನ್ ಆಗಿಬಿಟ್ಟಿದೆ. ಹೆಚ್ಚಾಗಿ ನಟಿಯರೇ ಇಂತಹ ಸೆಶನ್ಸ್ ನಡೆಸುತ್ತಿರುತ್ತಾರೆ. ಅ ಸೆಶನ್ಸ್ ನಲ್ಲಿ ಅಭಿಮಾನಿಗಳು ಯಾವುದೇ ಪ್ರಶ್ನೆಯನ್ನು ಕೇಳಬಹುದು. ಇದು ಅಭಿಮಾನಿಗಳಿಗೆ ತುಂಬಾನೇ ಖುಷಿ ಕೊಡುತ್ತದೆ. ಕಾರಣ ನೆಚ್ಚಿನ ಸ್ಟಾರ್ ಗಳ ಕುರಿತಾಗಿ ತಿಳಿದುಕೊಳ್ಳುವಂತಹ ಕುತೂಹಲ ಇರುತ್ತದೆ.
ಅವರ ಇಷ್ಟದ ಬಣ್ಣ, ತಿಂಡಿ, ಡ್ರೆಸ್, ಬಣ್ಣ ಹೀಗೆ ನಾನಾ ವಿಷಯಗಳ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಅಂತಹ ಕ್ಯೂರಿಯಾಸಿಟಿಯನ್ನು ಈ ಆಸ್ಕ್ ಮಿ ಎನಿಥಿಂಗ್ ಈಡೇರಿಸುತ್ತದೆ. ಹೆಚ್ಚಿನ ಅಭಿಮಾನಿಗಳು ಸ್ಟಾರ್ ಗಳಿಗೆ ಖುಷಿ ಆಗುವಂತಹ, ಉತ್ತರಿಸಲು ಇಷ್ಟ ಪಡುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಕೆಲ ಕೀಳು ಮನಸ್ತಿತಿಯ ಜನರು ಸ್ಟಾರ್ ಗಳಿಗೆ ಮುಜುಗರ ಆಗುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ.
ಅಂತಹುಗಳಿಗೆ ಕೆಲ ನಟಿಯರು ಕ್ಯಾರೇ ಅನ್ನಲ್ಲ, ಇನ್ನು ಕೆಲವರು ಅವರು ಮತ್ತೆಂದೂ ಅಂತಹ ಪ್ರಶ್ನೆ ಕೇಳದಂತೆ ಉತ್ತರ ನೀಡುತ್ತಾರೆ. ಇದೀಗ ಇದೇ ರೀತಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಯಶಿಕಾ ಆನಂದ್ ಅವರು ಆಸ್ಕ್ ಮಿ ಎನಿಥಿಂಗ್ ಸೆಶನ್ಸ್ ನಡೆಸಿದ್ದರು. ಆಗ ಅವರಿಗೂ ಅಭಿಮಾನಿಗಳು ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಿಗೆ ಬೋಲ್ಡ್ ಆಗಿಯೇ ಯಶಿಕಾ ಅವರು ಉತ್ತರಿಸಿದ್ದಾರೆ.
