ಚಿತ್ರರಂಗದಲ್ಲಿ ಇಂದು ಸಿನಿಮಾಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ ಎಲ್ಲಾ ನಟಿಯರು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಈ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಕೂಡ ಗಳಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ ಅನ್ನೋದು ಅವರವರ ಪ್ರತಿಭೆಯನ್ನು ತೋರಿಸುವುದಕ್ಕೆ ಅತ್ಯುತ್ತಮ ವೇದಿಕೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದ ಮೂಲಕ ಹಣ ಗಳಿಸೋರು ಸಾಕಷ್ಟು ಜನರಿದ್ದಾರೆ.
ಅದರಲ್ಲಿ ಸಿನಿಮಾ ನಟಿಯರು ಕೂಡ ಸೇರಿಕೊಳ್ಳುತ್ತಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಜಾಸ್ತಿ ಆದ ಹಾಗೆ, ಅಥವಾ ಯಾವುದಾದರೂ ಉತ್ಪನ್ನಗಳನ್ನ ಜಾಹೀರಾತು ಮಾಡಿದ್ರೆ ಸಾಮಾಜಿಕ ಜಾಲತಾಣದಿಂದ ಹಣವನ್ನು ಗಳಿಸಬಹುದು. ಇಂದು ಸಾಕಷ್ಟು ತಾರೆಯರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹಾಗಂತ ಎಲ್ರೂ ಕಾಸು ಮಾಡೋದಕ್ಕೆ ಸೋಶಿಯಲ್ ಮೀಡಿಯಾವನ್ನು ಬಳಸುತ್ತಾರೆ ಎಂದು ಅರ್ಥವಲ್ಲ. ಕೆಲವು ನಟಿಯರು ತಮ್ಮನ್ನ ತಾವು ಎಕ್ಸ್ಫ್ಲೋರ್ ಮಾಡಿಕೊಳ್ಳೋದಕ್ಕೆ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. ಇಂತಹ ನಟಿಯರಲ್ಲಿ ಲಾಸ್ಯ ನಾಗರಾಜ್ ಕೂಡ ಒಬ್ಬರು. ಹೌದು ಲಾಸ್ಯ ನಾಗರಾಜ್ ಅವರು ಬಹುಭಾಷಾ ನಟಿ ಕನ್ನಡ, ತಮಿಳು ಸಿನಿಮಾಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ.
ಮೊದಲು ದೇಶದ ಫೇಮಸ್ ಮಾಡೆಲ್ ಆಗಿದ್ದ ಲಾಸ್ಯ ನಾಗರಾಜ್ ಕೊನೆಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ರು. ಇನ್ನು ಲಾಸ್ಯ ನಾಗರಾಜ್ ಅವರು ಕನ್ನಡದಲ್ಲಿ ಅವರು ನಟಿಸಿದ ಸಿನಿಮಾಗಿಂತಲೂ ಹೆಚ್ಚಾಗಿ ಗುರುತಿಸಿಕೊಂಡಿದ್ದು ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ ನಂತರವೇ! ಲಾಸ್ಯ ನಾಗರಾಜ್ 1991 ಆಗಸ್ಟ್ 4ರಂದು ಹುಟ್ಟಿದರು. ಇವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಇಲ್ಲಿಯೇ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅಧ್ಯಯನವನ್ನ ಮಾಡಿ, ವಿ ಎಲ್ ಸಿ ಸಿ ಇನ್ಸ್ಟಿಟ್ಯೂಟ್ ಬೆಂಗಳೂರು, ಇಲ್ಲಿ ಡಿಪ್ಲೋಮವನ್ನು ಕೂಡ ಮುಗಿಸಿದ್ದಾರೆ.
ಲಾಸ್ಯ ನಾಗರಾಜ್ ಅವರು ತೆರೆ ಮೇಲೆ ಅವರ ಜರ್ನಿಯನ್ನ ಆರಂಭಿಸಿದ್ದು ಡ್ಯಾನ್ಸ್ ರಿಯಾಲಿಟಿ ಶೋ ನ ಮೂಲಕ. ಸುವರ್ಣ ವಾಹಿನಿಯಲ್ಲಿ 2017ರಲ್ಲಿ ಪ್ರಸಾರವಾಗಿದ್ದ ಡ್ಯಾನ್ಸರ್ ಶೋನಲ್ಲಿ ಲಾಸ್ಯ ನಾಗರಾಜ್ ಕಾಣಿಸಿಕೊಂಡಿದ್ದರು. ನಂತರ ಕನ್ನಡದಲ್ಲಿ ಪ್ರಸಾರವಾದ ಪದ್ಮಾವತಿ ಧಾರಾವಾಹಿಯಲ್ಲಿ ಲಸ್ಯ ನಾಗರಾಜ್ ನಟಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿ ಪಾಲ್ಗೊಂಡಿದ್ದು ಅವರ ತಮ್ಮ ವೃತ್ತಿ ಜೀವನಕ್ಕೆ ಪ್ರಮುಖ ಮೈಲುಗಲ್ಲಾಯಿತು. 2018ರಲ್ಲಿ ರಾಜೇಶ್ ವೇಣೂರು ಅವರ ನಿರ್ದೇಶನದ ’ಅಸತೋಮ ಸದ್ಗಮಯ’ ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿದರೆ ಲಾಸ್ಯ ನಾಗರಾಜ್.
