ತಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಪುನೀತ್ ರಾಜ್‍ಕುಮಾರ್ ಅವರು ಇಹಲೋಕ ತ್ಯಜಿಸಿ ಸುಮಾರು ಮೂರು ತಿಂಗಳುಗಳೆ ಕಳೆಯುತ್ತಾ ಬಂದಿದ್ದು ಅವರ ನೆನಪು ಮಾತ್ರ ಸಾವಿರ ವರ್ಷ ಕಳೆದರು ಕೂಡ ಮಾಸೋದಿಲ್ಲ. ಹೌದು ಯಾಕೆಂದರೆ ಅತಿ ಚಿಕ್ಕ ವಯಸ್ಸಿನಲ್ಲೇ ತಂದೆಗಿಂತೆ ಅತಿಹೆಚ್ಚು ಅಭಿಮಾನಿ ಬಳಗವನ್ನ ಹೊಂದಿದ ಕನ್ನಡ ಏಕೈಕ ನಟ ಪುನೀತ್ ರಾಜ್ ಕುಮಾರ್ ಅವರು ಎನ್ನಬಹುದು. ಅಷ್ಟೇ ಅಲ್ಲದೇ ಜೀವನದಲ್ಲಿ ಕಷ್ಟಪಟ್ಟು ದುಡಿದ ಹಣವನ್ನೇಲ್ಲ ಸಮಜಾಮುಖಿ ಕೆಲಸಕ್ಕೆ ಬಳಸಿಕೊಂಡು ಕಷ್ಟದಲ್ಲಿ ಇರುವವರಿಗೆ ಅವರು ಕೇಳುವ ಮೊದಲೇ ಸಹಾಯವನ್ನ ಮಾಡುತ್ತಿದ್ದರು.
ಆದರೆ ಪುನೀತ್ ರಾಜ್ ಕುಮಾರ್ ಅಗಲಿದ ನಂತರ ಜನರಿಗೆ ಒಂದು ಒಳ್ಳೆಯ ಪಾಠವನ್ನ ಕಲಿಸಿ ಹೋಗಿದ್ದು ಮನುಷ್ಯನ ಜೀವನದಲ್ಲಿ ಹಣ ಅಂತಸ್ತು ಶ್ರೀಮಂತಿಗೆ ಮುಖ್ಯವಲ್ಲ. ಪ್ರೀತಿ ವಿಶ್ವಾಸ ಹಾಗು ಕಷ್ಟದಲ್ಲಿ ಇರುವವರಿಗೆ ಕೈಲಾದಷ್ಟು ಸಹಾಯ ಮಾಡುವ ಒಳ್ಳೆಯ ಗುಣ ಎಂದು ಜಗತ್ತಿಗೆ ತೋರಿಸಿ ಕೊಟ್ಟಂತಹ ವ್ಯಕ್ತಿ ನಮ್ಮ ಅಪ್ಪು. ಆದರೆ ಜೀವನದಲ್ಲಿ ಇಷ್ಟೆಲ್ಲಾ ಕೆಲಸ ಮಾಡಿದ ಪುನೀತ್ ರಾಜ್‍ಕುಮಾರ್ ರವರು ಅಗಲಿದಂತಹ ಕಹಿ ಸುದ್ದಿ ಮಾತ್ರ ಯಾರಿಂದಲೂ ಇಂದಿಗೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ.
ಹೌದು ಇನ್ನು ಅಭಿಮಾನಿ ಪ್ರೀತಿಯ ಹಾಗು ಆರಾಧ್ಯ ದೈವ ಆಗಿದ್ದ ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಅಪ್ಪು ಅವರ ಅಗಲಿಕೆಯ ನಂತರ ಸೋಶಿಯಲ್ ಮೀಡಿಯಾದಲ್ಲಿ ಎಂಟ್ರಿ ಕೊಟ್ಟಿದ್ದರು. ಹೌದು ಅಶ್ವಿನಿ ಮೇಡಂ ಅವರು ಸೋಶಿಯಲ್ ಮೀಡಿಯಾ ಮೂಲಕ ಅಪ್ಪು ಅವರ ಜೇಮ್ಸ್ ಸಿನಿಮಾ ಮತ್ತು ಪಿ ಆರ್ ಕೆ ಸಂಸ್ಥೆಯ ಹೊಸ ಚಿತ್ರಗಳ ಚಿತ್ರಗಳ ಬಗ್ಗೆ ಮಾಹಿತಿಯನ್ನ ಅಭಿಮಾನಿಗ ಬಳಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಅವರು ತೀರಿಕೊಂಡಾಗಿನಿಂದ ಅಶ್ವಿನಿ ಅವರು ಮುಖದಲ್ಲಿ ನಗುವೇ ನೊಡಿರದ ಅಭಿಮಾನಿಗಳು ಈಗ ತುಂಬಾನೇ ಖುಷಿಯಾಗಿದ್ದಾರೆ.
