ನಮ್ಮ ಅಪ್ಪು ಪತ್ನಿಯೊಂದಿಗೆ ಊಟ ಮಾಡುತ್ತಿರುವ ಅಪರೂಪದ ವಿಡಿಯೋ ನೋಡಿ

 

ನಮ್ಮ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇನ್ನು ಕೇವಲ ನೆನಪು ಮಾತ್ರ. ಹೌದು ಅಪ್ಪು ಅವರ ನೆನಪು ಜನರ ಮನಸ್ಸಿನಿಂದ ಈಗಲೂ ಸಹ ಮಾಸಿಲ್ಲ. ಅಪ್ಪು ಅವರು ಎಂದೆಂದಿಗೂ ಎಲ್ಲರ ಹೃದಯದಲ್ಲಿ ನೆಲೆಸಿರುತ್ತಾರೆ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ. ತಮಗೆಲ್ಲರಿಗೂ ತಿಳಿದಿರುವ ಹಾಗೆ ಪುನೀತ್ ರಾಜ್ ಕುಮಾರ್ ಅವರು ಅದ್ಭುತವಾದ ಡ್ಯಾನ್ಸರ್ ಹಾಗೂ ಅಪ್ರತಿಮ ನಟಯಾಗಿದ್ದು ಅಪ್ಪು ಮತ್ತು ಅಶ್ವಿನಿ ಅವರದ್ದು ಲವ್ ಮ್ಯಾರೇಜ್ ಎಂಬ ವಿಚಾರ ಕೂಡ ಎಲ್ಲರಿಗೂ ತಿಳಿದಿದೆ.

ಹೌದು ಅಪ್ಪು ಮತ್ತು ಅಶ್ವಿನಿ ಅವರು 22 ವರ್ಷಗಳ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದು ಒಬ್ಬ ಸ್ನೇಹಿತನ ಮೂಲಕ ಅಪ್ಪು ಅವರಿಗೆ ಅಶ್ವಿನಿ ಅವರ ಪರಿಚಯವಾಯಿತು. ಅಶ್ವಿನಿ ಅವರ ಪರಿಚಯದ ಬಳಿಕ ಈ ಮೂವರು ಸ್ನೇಹಿತರಾಗಿದ್ದು ಕಾಮನ್ ಫ್ರೆಂಡ್ಸ್ ಆಗಿ ಹೆಚ್ಚು ಭೇಟಿಯಾಗುತ್ತಿದ್ದರು. ಹೌದು ಅಶ್ವಿನಿ ಹಾಗೂ ಅಪ್ಪು ಅವರ ನಡುವಿನ ಸ್ನೇಹ ಹೆಚ್ಚಾಗಿದ್ದು ಆ ಸಮಯದಲ್ಲಿ ಅಪ್ಪು ಅವರಿಗೆ ಅಶ್ವಿನಿ ಅವರ ಮೇಲೆ ಪ್ರೀತಿ ಚಿಗುರೊಡೆಯುತ್ತದೆ.