ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ರವರು ಸದ್ಯ ಇದೀಗ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ನಟಿಯಾಗಿದ್ದು ರಶ್ಮಿಕಾ ಪ್ರತಿಭೆ ಬಗ್ಗೆ ಎರಡು ಮಾತುಗಳಿಲ್ಲ ಎನ್ನಬಹುದು. ಹೌದು ನೋಡಲು ಬಹಳ ಸುಂದರವಾಗಿರುವ ರಶ್ಮಿಕಾ ರವರು ಅಚ್ಚುಕಟ್ಟಾಗಿ ನಟಿಸುತ್ತಾರೆ ಹಾಗೆಯೇ ಡ್ಯಾನ್ಸ್ ಕೂಡ ಚೆನ್ನಾಗಿ ಮಾಡುತ್ತಾರೆ. ಹೌದು ಇಂದು ತಮ್ಮ ಪ್ರತಿಭೆಯಿಂದ ಇಡೀ ಭಾರತ ತಮ್ಮತ್ತ ನೋಡುವ ಹಾಗೆ ಬೆಳೆದಿದ್ದಾರೆ ರಶ್ಮಿಕಾ ಮಂದಣ್ಣ. ಇನ್ನು ಸ್ಯಾಂಡಲ್ ವುಡ್ ಇಂದ ಹಿಡಿದು ಬಾಲಿವುಡ್ ವರೆಗೂ ಕೂಡ ಎಲ್ಲರ ಕಣ್ಣು ರಶ್ಮಿಕಾ ಮೇಲೆ ಇದೆ ಎನ್ನುವ ಹಾಗಿದ್ದು ತಮ್ಮ ಕೆರಿಯರ್ ವಿಚಾರದಲ್ಲಿ ಎತ್ತರಕ್ಕೆ ಏರಿರುವ ರಶ್ಮಿಕಾ ರವರು ಸದ್ಯ ಈಗಲೂ ಕೂಡ ಹಳೆಯ ಗೆಳತಿಯರನ್ನು ಮರಿಯದೇ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.
ಹೌದು ರಶ್ಮಿಕಾ ಬಗ್ಗೆ ತಿಳಿದುಕೊಳ್ಳುವುದಾದರೆ ನಟಿ ರಶ್ಮಿಕಾ ಮಂದಣ್ಣ ಏಪ್ರಿಲ್ 9 1996 ರಂದು ವಿರಾಜಪೇಟೆಯಲ್ಲಿ ಜನಿಸುತ್ತಾರೆ.ಸದ್ಯ ಇದೀಗ ಇವರಿಗೆ 25 ವರ್ಷ ವಯಸ್ಸಾಗಿದ್ದು ಸುಮನ್ ಮತ್ತು ಮದನ್ ಮಂದಣ್ಣ ದಂಪತಿಯ ಮಗಳು ರಶ್ಮಿಕಾ. ಹೌದು ಈಕೆ ಓದಿದ್ದು ಬೆಳೆದಿದ್ದು ಎಲ್ಲವೂ ಕೂಡ ಅಲ್ಲಿಯೇ ಎನ್ನಬಹುದು. ಪದವಿ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು ರಶ್ಮಿಕಾ. ಇನ್ನು ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಸೈಕಾಲಜಿ ಹಾಗೂ ಜರ್ನಲಿಸಂ ವಿಷಯದಲ್ಲಿ ಪದವಿ ಓದುತ್ತಿದ್ದು ಇದರ ಜೊತೆಗೆ ಮಾಡೆಲಿಂಗ್ ನಲ್ಲಿ ಕೂಡ ತೊಡಗಿಕೊಂಡಿದ್ದರು ರಶ್ಮಿಕಾ.
