ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಬ್ಯೂಟಿ ರಮ್ಯಾ ರವರ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಾಗೋದು ಹೊಸ ವಿಚಾರವೇನೂ ಅಲ್ಲ. ಅದರಲ್ಲೂ ರಮ್ಯಾ ಅವರ ಮದುವೆ ವಿಚಾರವಂತೂ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾದ ಸುದ್ದಿಯಾಗಿದ್ದು ಬಹುಶಃ ಅವರು ನಿಜವಾಗಿ ವಿವಾಹವಾದರೂ ಕೂಡ ಯಾರೂ ನಂಬದ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದರೂ ಅದು ಸುಳ್ಳಲ್ಲ ಎನ್ನಬಹುದು. ಹೌದು ಸದ್ಯ ಇದೀಗ ಇದೆಲ್ಲವನ್ನು ಹೊರತು ಪಡಿಸಿ ಅಧಿಕೃತವಾಗಿ ರಮ್ಯಾ ಮತಚತು ರಕ್ಷಿತ್ ಅವರ ವಿಚಾರವಾಗಿ ಸಿಹಿಸುದ್ದಿಯೊಂದು ಹೊರ ಬಂದಿದ್ದು ಅಭಿಮಾನಿಗಳು ಅಂದುಕೊಂಡ ವಿಚಾರ ನಿಜವಾಗಿದೆ.
ಮೋಹಕ ತಾರೆ ನಟಿ ರಮ್ಯಾ ಅವರು ದಶಕದ ಕಾಲ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಆಲಿದ್ದು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಸ್ಟಾರ್ ನಟಿಯಾಗಿದ್ದ ಸಮಯದಲ್ಲಿಯೇ ಚಿತ್ರರಂಗದಿಂದ ದೂರವಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ ಸಂಸದೆ ಆಗಿದ್ದು ಆದರೆ ಕೆಲ ತಿಂಗಳ ಬಳಿಕ ಅವಧಿ ಮುಗಿದ ಮೇಲೆ ರಾಜಕೀಯದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡರೂ ಕೂಡ ರಾಜಕೀಯದಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಲಿಲ್ಲ. ಇನ್ನು ಕೆಲ ವರ್ಷಗಳ ಕಾಲ ಬೆಂಗಳೂರಿನಿಂದ ದೂರವಿದ್ದ ರಮ್ಯಾ ಮತ್ತೆ ರಾಜಕೀಯದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದು ಕಳೆದ ವರ್ಷ ಮರಳಿ ಬೆಂಗಳೂರಿಗೆ ಬಂದಿದ್ದಾರೆ.
ಮತ್ತೆ ಚಿತ್ರರಂಗಕ್ಕೆ ಮರಳುವ ಮನಸ್ಸು ಮಾಡಿರುವ ರಮ್ಯಾ ಒಂದೊಳ್ಳೆ ಕಂಬ್ಯಾಕ್ ಗೆ ಕಾಯುತ್ತಿದ್ದು ಮತ್ತೆ ತೆರೆ ಮೇಲೆ ಬಂದರೆ ಅದು ಸ್ಟಾರ್ ನಟನ ಜೊತೆಯೇ ತೆರೆ ಮೇಲೆ ಬರಬೇಕಾದ ಅನಿವಾರ್ಯತೆಯೂ ರಮ್ಯಾ ಅವರಿಗೆ ಇದೆ. ಇತ್ತ ಚಿತ್ರರಂಗಕ್ಕೆ ರಮ್ಯಾ ಅವರ ಕಂಬ್ಯಾಕ್ ವಿಚಾರ ಸುದ್ದಿಯಾಗುತ್ತಿರುವಾಗಲೇ ರಮ್ಯಾ ಹಾಗೂ ರಕ್ಷಿತ್ ಅವರ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು ಅದರಲ್ಲೂ ಇಬ್ಬರೂ ಇನ್ನೇನು ಕೆಲ ತಿಂಗಳಲ್ಲಿಯೇ ಮದುವೆಯಾಗಲಿದ್ದಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಖುದ್ದು ರಕ್ಷಿತ್ ಮತ್ತು ರಿಷಭ್ ಶೆಟ್ಟಿ ಇಬ್ಬರೂ ಸಹ ಪ್ರತಿಕ್ರಿಯೆ ನೀಡಿ ಇದೆಲ್ಲವೂ ಸುಳ್ಳು ಎಂದಿದ್ದರು. ಅಷ್ಟಕ್ಕೂ ರಮ್ಯಾ ಅವರನ್ನು ನಾನು ಇದುವರೆಗೂ ಭೇಟಿಯೇ ಆಗಿಲ್ಲ ಎಂದಿದ್ದು ಅದು ಸತ್ಯವೂ ಸಹ ಆಗಿತ್ತು.
