ಪ್ರಭಾಸ್ ಮದುವೆಯಾಗುತ್ತಿದ್ದಾರೆ ಹುಡುಗಿ ಯಾರೆಂದು ಗೊತ್ತಾ

 

ನಟ ಪ್ರಭಾಸ್ ರವರಿಗೆ ದೊಡ್ಡ ಹೆಸರು ಕೊಟ್ಟ ಚಿತ್ರವೆಂದರೆ ಅದು ರಾಜಮೌಳಿ ಯವರ ಬಾಹುಬಲಿ ಸಿನಿಮಾ. ಹೌದು ಬಾಹುಬಲಿ ಸಿನಿಮಾದಲ್ಲಿ ನಟಿಸಿದ ಬಳಿಕ ನಟ ಪ್ರಭಾಸ್ ರವರು ಪ್ಯಾನ್ ಇಂಡಿಯಾ ಹೀರೊ ಆಗಿದ್ದು ಪೌರಾಣಿಕ ವೇಷದಲ್ಲಿ ಅದ್ಭುತವಾಗಿ ಕಾಣಿಸುವ ಪ್ರಭಾಸ್ ಬಾಹುಬಲಿ ಬಳಿಕ ಸಾಹೋ ಸಿನಿಮಾದಲ್ಲಿ ನಟಿಸಿದರು.ಆದರೆ ಸಾಹೋ ಚಿತ್ರ ನಿರಾಸೆ ಮೂಡಿಸಿದ್ದು ಸಾಹೋ ನಂತರ ಪ್ರೀತಿ ಪ್ರೇಮ ತ್ಯಾಗದ ಕಥೆ ಹೇಳುವ ರಾಧೆ ಶ್ಯಾಮ್ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ದುರಾದೃಷ್ಟವಶಾತ್ ರಾಧೆ ಶ್ಯಾಮ್ ಚಿತ್ರ ಕೂಡ ಪ್ರಭಾಸ್ ಅವರ ಕೈ ಹಿಡಿಯಲಿಲ್ಲ. ಹೌದು ರಾಧೆ ಶ್ಯಾಮ್ ದೊಡ್ಡ ಮಟ್ಟದಲ್ಲಿ ಸೋಲುಂಡಿದ್ದು ರಾಧೆ ಶ್ಯಾಮ್ ಸಿನಿಮಾ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದ ಪ್ರಭಾಸ್ ಗೆ ತುಂಬಾ ಬೇಸರವಾಗಿತ್ತು.

ಸದ್ಯ ಪ್ರಭಾಸ್ ತಮ್ಮ ಮುಂದಿನ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಅದೇ ಪ್ರಶಾಂತ್ ನೀಲ್ ನಿರ್ದೇಶನ ಸಲಾರ್ ಚಿತ್ರ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರ ಅಭಿಮಾನಿಗಳೂ ಕೂಡ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಯ ಸದ್ಯ ಸಲಾರ್ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಇನ್ನು ಈ ನಡುವೆ ಪ್ರಭಾಸ್ ಮದುವೆ ಬಗ್ಗೆಯೂ ಮತ್ತೆ ಸುದ್ದಿ ಹಬ್ಬಿದ್ದು ಪ್ರಭಾಸ್ ತಮ್ಮ ದಾಂಪತ್ಯ ಜೀವನದ ಬಗ್ಗೆ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ವರ್ಷಾಂತ್ಯದೊಳಗೆ ಪ್ರಭಾಸ್ ಮದುವೆಯಾಗಲಿದ್ದು ಅದೂ ಕೂಡ ತಮ್ಮ ಮನೆಯಲ್ಲಿ ತೋರಿಸಿದ ಹುಡುಗಿಯನ್ನೇ ಮದುವೆಯಾಗಲು ಒಪ್ಪಿದ್ದಾರಂತೆ.