ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಪ್ರಸ್ತುತ ಕೆಜಿಎಫ್ 2 ಸಿನಿಮಾದ ಯಶಸ್ಸಿನ ಅಲೆಯಲ್ಲಿ ಬಹಳಾನೇ ತೇಲುತ್ತಿದ್ದು ಸತತ ಎಂಟು ವರ್ಷಗಳ ಕಾಲ ಕೆಜಿಎಫ್ ಸಿನಿಮಾ ಸರಣಿಗಾಗಿ ಅವರು ಕಷ್ಟಪಟ್ಟಿದ್ದಾರೆ. ಹೌದು ಈ ಶ್ರಮದ ಪ್ರತಿಫಲ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಕಾಣುತ್ತಿದ್ದು ಕೆಜಿಎಫ್ 2 ಸಿನಿಮಾಕ್ಕಾಗಿಯೂ ನಟ ಯಶ್ ರವರು ಬಹಳ ಕಷ್ಟಪಟ್ಟಿದ್ದರು. ಹೌದು ಸತತ ಮೂರು ವರ್ಷಕ್ಕೂ ಹೆಚ್ಚು ಸಮಯವನ್ನು ಕೆಜಿಎಫ್‌ಗಾಗಿ ಯಶ್ ಮೀಸಲಿಟ್ಟಿದ್ದು ಈ ಅವಧಿಯಲ್ಲಿ ಕುಟುಂಬಕ್ಕೆ ಹೆಚ್ಚು ಸಮಯ ನೀಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಕೋವಿಡ್ ಸಮಯದಲ್ಲಿ ಶೂಟಿಂಗ್ ಮಾಡುವಾಗಂತೂ ಮನೆಗೇ ಹೋಗಿರಲಿಲ್ಲವಂತೆ ನಟ ಯಶ್.
ಆದರೆ ಇದೀಗ ಎಲ್ಲವೂ ಕೂಡ ಮುಗಿದು ಹೋಗಿದ್ದು ಕೆಜಿಎಫ್ 2 ಬಹಳ ದೊಡ್ಡ ಯಶಸ್ಸು ಗಳಿಸಿದೆ. ಹಾಗಾಗಿ ಈಗ ಕುಟುಂಬದ ಜೊತೆಗೆ ಜಾಲಿ ಸಮಯ ಕಳೆಯುತ್ತಿದ್ದಾರೆ ಯಶ್. ಹೌದು ಕೆಜಿಎಫ್ 2 ಸಿನಿಮಾ ಯಶಸ್ಸಾಗಿದೆ ಎಂಬ ಸುದ್ದಿ ಬರುತ್ತಿದ್ದ ಹಾಗೆಯೇ ಯಶ್ ಪತ್ನಿ ರಾಧಿಕಾ ಹಾಗೂ ಇಬ್ಬರು ಮಕ್ಕಳನ್ನು ಕರೆದುಕೊಂಡು ವೆಕೇಶನ್‌ಗೆ ತೆರಳಿದ್ದು ಯಶ್ ರಾಧಿಕಾ ಹಾಗೂ ಮಕ್ಕಳು ಗೋವಾದ ಖಾಸಗಿ ಬೀಚ್‌ನಲ್ಲಿ ಆಟವಾಡಿ ಆಪ್ತವಾಗಿ ಸಮಯ ಕಳೆದಿದ್ದು ರಾಧಿಕಾ ರವರಿಗೆ ಗೋವಾ ಎಂದರೆ ಬಹಳ ಇಷ್ಟ.
